»   » ಅನುಪ್ ಭಂಡಾರಿ ಅವರ ಮ್ಯೂಸಿಕ್ ಲವ್ ಎಂತದ್ದು ಅಂತಿರಾ?

ಅನುಪ್ ಭಂಡಾರಿ ಅವರ ಮ್ಯೂಸಿಕ್ ಲವ್ ಎಂತದ್ದು ಅಂತಿರಾ?

Posted By:
Subscribe to Filmibeat Kannada

'ರಂಗಿತರಂಗ'ದಂತಹ ಸೂಪರ್ ಹಿಟ್ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಪ್ರತಿಭಾವಂತ ನಿರ್ದೇಶಕ ಅನುಪ್ ಭಂಡಾರಿ ಅವರು ಇದೀಗ ತಮ್ಮ ಎರಡನೇ ಪ್ರಾಜೆಕ್ಟ್ ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಈಗಾಗಲೇ ಶೂಟಿಂಗ್ ಗಾಗಿ ಲೊಕೇಶನ್ ಹುಡುಕಾಟದಲ್ಲಿ ಬ್ಯುಸಿಯಾಗಿರುವ ಅನುಪ್ ಭಂಡಾರಿ ಅವರ ಮುಂದಿನ ಸಿನಿಮಾ ರೋಮ್ಯಾಂಟಿಕ್ ಕಾಮಿಡಿಯಾಗಿರುತ್ತಂತೆ.[ಭಂಡಾರಿ ಸಹೋದರರ ಹೊಸ ಚಿತ್ರಕ್ಕೆ ಒಳ್ಳೆ ಲೊಕೇಶನ್ ಇದ್ರೆ ಹೇಳಿ]


'RangiTaranga' fame director Anup Bhandari's Music Love

ಅಂದಹಾಗೆ ಅನುಪ್ ಭಂಡಾರಿ ಅವರು ತುಂಬಾ ಸಂಗೀತ ಪ್ರೀಯರು. ಅದಕ್ಕೆ ಉತ್ತಮ ನಿದರ್ಶನ ಅಂದರೆ ಅವರ ಮೊದಲ ಸಿನಿಮಾ. ಹೌದು 'ರಂಗಿತರಂಗ' ಸಿನಿಮಾದಲ್ಲಿ ಅನುಪ್ ಅವರು ಅತ್ಯುತ್ತಮ ಹಾಡುಗಳನ್ನು ನೀಡಿ ಸಂಗೀತ ಪ್ರೀಯರ ಮನಗೆದ್ದಿದ್ದರು.


ಈ ಬಾರಿ ಕೂಡ ಅನುಪ್ ಭಂಡಾರಿ ಅವರು ಸೂಪರ್ ಹಾಡುಗಳನ್ನು ಕೊಡಲು ತಯಾರಾಗಿದ್ದಾರೆ. ಚಿತ್ರದ ಹಾಡುಗಳಿಗೆ ಅವರು ಈಗಾಗಲೇ ಸಂಗೀತ ಸಂಯೋಜನೆ ಮಾಡಿದ್ದಾರಂತೆ.['ರಂಗಿ' ಅನುಪ್ ಜೊತೆ ಕೆಲಸ ಮಾಡುವ ಆಸಕ್ತರಿಗೆ ಗುಡ್ ನ್ಯೂಸ್]


'RangiTaranga' fame director Anup Bhandari's Music Love

ಸಂಗೀತದ ಬಗ್ಗೆ ನಿರ್ಮಾಪಕ ಎಚ್.ಕೆ ಪ್ರಕಾಶ್ ಅವರ ಜೊತೆ ಮಾತನಾಡಿದ್ದೇನೆ. ಅಲ್ಲದೆ ಕೆಲವೊಂದು ಹಾಡುಗಳನ್ನು ಹಾಗೆ ಅವರಿಗೆ ಹಾಡಿ ತೋರಿಸಿದೆ, ಅವರಿಗೂ ಬಹಳ ಇಷ್ಟವಾಯಿತು' ಎಂದು ಅನುಪ್ ಭಂಡಾರಿ ನುಡಿಯುತ್ತಾರೆ.[ನೀವು 'ರಂಗಿತರಂಗ' ತಂಡದೊಂದಿಗೆ ಕೆಲಸ ಮಾಡಬೇಕೆ? ಇಲ್ಲಿದೆ ಅವಕಾಶ!]


'RangiTaranga' fame director Anup Bhandari's Music Love

ಅನುಪ್ ಅವರಿಗೆ ಸಂಗೀತದ ಮೇಲಿರುವ ಆಸಕ್ತಿ ಎಷ್ಟಿದೆ ಅಂದರೆ ತಮ್ಮ ಎರಡನೇ ಚಿತ್ರಕ್ಕೂ ಅವರೇ ಮ್ಯೂಸಿಕ್ ಕಂಪೋಸ್ ಮಾಡಿಟ್ಟಿದ್ದಾರಂತೆ. ಇವರು ನಿರ್ದೇಶನ ಮಾಡುವ ಸಿನಿಮಾಗಳಲ್ಲಿ ಹಾಡಿಗೂ ಅತ್ಯಂತ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಿದ್ದು, ಸಿನಿಮಾ ಮಾಡುವ ಮೊದಲು ಹಾಡಿನ ಭಾಗದ ಕೆಲಸಗಳನ್ನು ಮುಗಿಸುತ್ತಾರಂತೆ.


'RangiTaranga' fame director Anup Bhandari's Music Love

ಅಂತೂ ಭಂಡಾರಿ ಸಹೋದರರ ಮುಂದಿನ ಪ್ರಾಜೆಕ್ಟ್ ನಲ್ಲೂ ಸಂಗೀತ ಪ್ರೀಯರಿಗೆ ಹಾಡುಗಳಿಂದ ಮನರಂಜನೆ ಹೇರಳವಾಗಿ ದೊರೆಯಲಿದೆ ಅನ್ನೋದು ಗ್ಯಾರೆಂಟಿ.

English summary
'RangiTaranga' fame director Anup Bhandari's Music Love. Director Anup Bhandari and actor Nirup Bhandari are teaming up again for the new film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada