For Quick Alerts
  ALLOW NOTIFICATIONS  
  For Daily Alerts

  ಭಂಡಾರಿ ಬ್ರದರ್ಸ್ 'ರಂಗಿತರಂಗ'ಕ್ಕೆ ಭಾರಿ ಕಂಟಕ

  By Suneetha
  |

  ಸ್ಯಾಂಡಲ್ ವುಡ್ ಗೆ ಮರುಹುಟ್ಟು ನೀಡಿದ ಭಂಡಾರಿ ಸಹೋದರರ ಕಲರ್ ಫುಲ್ 'ರಂಗಿತರಂಗ' ಚಿತ್ರಕ್ಕೆ ಇದೀಗ ಕಂಟಕವೊಂದು, ಎದುರಾಗಿದೆ. ಹೌದು ಚಂದನವನದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಹೊಸಬರ 'ರಂಗಿ'ಗೆ ಸೆನ್ಸಾರ್ ಬೋರ್ಡ್ ಲೀಗಲ್ ನೋಟಿಸ್ ಜಾರಿ ಮಾಡಿದೆ.

  ಅಂದಹಾಗೆ ಇಂಟರ್ ನೆಟ್ ನಲ್ಲಿ 'ರಂಗಿತರಂಗ' ಚಿತ್ರದ 'ಡಿಲೀಟೆಡ್ ಸೀನ್' ಅಂತ ನಿರ್ದೇಶಕರು ಪ್ರಚಾರ ಮಾಡಿದ್ದು ನಿಮಗೆ ಗೊತ್ತೇ ಇದೆ. ಕೊನೆ ಕ್ಷಣದಲ್ಲಿ ತೆಗೆದು ಹಾಕಿದ ಸುಮಾರು 14 ಸೀನ್ ಗಳನ್ನು 'ರಂಗಿತರಂಗ' ಚಿತ್ರದ ನಿರ್ದೇಶಕ ಅನುಪ್ ಭಂಡಾರಿ ಅವರು ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದರು. ಇದಕ್ಕಾಗಿ ಸೆನ್ಸಾರ್ ಮಂಡಳಿ ಈ ಕ್ರಮ ಕೈಗೊಂಡಿದೆ.

  ಈ ಡಿಲೀಟೆಡ್ ದೃಶ್ಯಗಳು ಇಂಟರ್ ನೆಟ್, ಫೇಸ್ ಬುಕ್ ನಲ್ಲಿ ಮಾತ್ರವಲ್ಲದೇ ಖಾಸಗಿ ಚಾನಲ್ ಗಳಲ್ಲಿಯೂ ಪ್ರಸಾರ ಆಗ್ತಾ ಇವೆ. ಇದು 'ಕೇಬಲ್ ಟೆಲಿವಿಷನ್ ನೆಟ್ ವರ್ಕ್ ಆಕ್ಟ್' ಗೆ ವಿರುದ್ಧವಾಗಿ ಮಾಡಿರುವ ಕೆಲಸವಾಗಿದೆ. ಜೊತೆಗೆ 'ರಂಗಿತರಂಗ' ಚಿತ್ರತಂಡ 'ಸಿನಿಮಾಟೋಗ್ರಫಿ ಕಾಯ್ದೆ'ಯನ್ನು ಉಲ್ಲಂಘಿಸಿದೆ ಎಂದು ಸೆನ್ಸಾರ್ ಮಂಡಳಿಯ ಅಧಿಕಾರಿ ನಾಗೇಂದ್ರ ಸ್ವಾಮಿ ಅವರು ಗುಡುಗಿದ್ದಾರೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

  ಸುಮಾರು ಮೂರು ಘಂಟೆಗಳ ಕಾಲ ಪ್ರದರ್ಶನಗೊಳ್ಳುವ 'ರಂಗಿತರಂಗ' ಚಿತ್ರವನ್ನು ಮೊದಲನೇ ಬಾರಿಗೆ ವೀಕ್ಷಿಸಿದ ಸೆನ್ಸಾರ್ ಮಂಡಳಿ ಕೆಲವಾರು ಅನಗತ್ಯ ಸೀನ್ ಗಳನ್ನು ಕಟ್ ಮಾಡಿ ಚಿತ್ರವನ್ನು ಸುಮಾರು 35 ರಿಂದ 40 ನಿಮಿಷಗಳವರೆಗೆ ತಗ್ಗಿಸಲು ಸೆನ್ಸಾರ್ ಮಂಡಳಿ ಅಧಿಕಾರಿ ನಾಗೇಂದ್ರ ಸ್ವಾಮಿ ಅವರು ತಿಳಿಸಿದ್ದರು.

  ಇದಕ್ಕೆ ಒಪ್ಪಿಕೊಂಡಿದ್ದ ನಿರ್ದೇಶಕ ಅನುಪ್ ಭಂಡಾರಿ ಅವರು ಕೆಲವು ದೃಶ್ಯಗಳನ್ನು ಕಟ್ ಮಾಡಿ ಸುಮಾರು 29 ನಿಮಿಷಕ್ಕೆ ಇಳಿಸಿದ್ದರು. ಆದರೆ ಸ್ವಯಂಪ್ರೇರಣೆಯಿಂದ ಒಪ್ಪಿಕೊಂಡಿದ್ದ ನಿರ್ದೇಶಕರು ಇದೀಗ ಸ್ವಲ್ಪ ದಿನಗಳ ಹಿಂದೆ 'ಕತ್ತರಿಸಿದ ದೃಶ್ಯಗಳು' ಅಂತ 14 ದೃಶ್ಯಗಳನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದು, ತಪ್ಪು.

  ಅಧಿಕೃತವಾಗಿ ಹೇಳುವುದಾದರೆ ಕತ್ತರಿಸಿದ ದೃಶ್ಯಗಳನ್ನು ಪ್ರೇಕ್ಷಕರಿಗೆ ತೋರಿಸುವಂತಿಲ್ಲ ಅದಕ್ಕೆ ನಾವು ಅನುಮತಿ ನೀಡಿಲ್ಲ ಇದು ಧೃಡೀಕರಣರಹಿತವಾಗಿ ಮಾಡಿರುವ ಕೆಲಸವಾಗಿದೆ ಎಂದು ನಾಗೇಂದ್ರ ಸ್ವಾಮಿ ತಿಳಿಸಿದ್ದಾರೆ.[ವಿಡಿಯೋ: ನೀವು ನೋಡಿರದ 'ರಂಗಿತರಂಗ'ದ ದೃಶ್ಯಗಳು]

  'ಒಂದು ಬಾರಿ ಯಾವುದೇ ಸಿನಿಮಾದ ಕೆಲವು ದೃಶ್ಯಗಳಿಗೆ ಸೆನ್ಸಾರ್ ಕಟ್ ಬಿದ್ದರೆ ಆನಂತರ ಆ ದೃಶ್ಯಗಳನ್ನು ಯಾವುದೇ ಚಿತ್ರತಂಡ ಪ್ರೇಕ್ಷಕರಿಗೆ ತೋರಿಸುವಂತಿಲ್ಲ. ಎಲ್ಲಾ ಡಿಲೀಟ್ ಮಾಡಿದ ದೃಶ್ಯಗಳು ಕಟ್ ಆದ ನಂತರ ಅದು ಸೆನ್ಸಾರ್ ಮಂಡಳಿಗೆ ಸೇರಿದ ಸ್ವತ್ತಾಗಿರುತ್ತದೆ. ಆದ್ದರಿಂದ 'ರಂಗಿತರಂಗ' ಚಿತ್ರತಂಡ ಅಫಿದವಿತ್ ಗೆ ವಿರುದ್ದವಾಗಿ ವರ್ತಿಸಿದೆ ಎಂದು ಸೆನ್ಸಾರ್ ಮಂಡಳಿ ಅಧಿಕಾರಿ ನಾಗೇಂದ್ರ ಸ್ವಾಮಿ ದೂರಿದ್ದಾರೆ.

  ಒಟ್ನಲ್ಲಿ ಸತತ 125ನೇ ದಿನಗಳತ್ತ ಮುನ್ನುಗ್ಗುತ್ತಿರುವ ಭಂಡಾರಿ ಸಹೋದರರ 'ರಂಗಿತರಂಗ'ಕ್ಕೆ ಯಾರದೋ ವಕ್ರದೃಷ್ಟಿ ಬಿದ್ದಿರಬಹುದು ಅಂತ ನಮಗನ್ನಿಸುತ್ತಿದೆ ನೀವೇನಂತೀರಾ?.

  English summary
  The Censor Board has sent a legal notice to the makers of Rangitaranga for putting up scenes deleted from the final cut, on the internet. The clips were also shown on a private channel, which is against the Cable Television Network Act. Censor Board officer Nagendra Swamy said the movie had violated the Cinematograph Act.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X