Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕೆಜಿಎಫ್ 2'ಗೆ ಬೋಲ್ಡ್ ಆದ ಬಾಲಿವುಡ್ ನಟ ರಣ್ವೀರ್ ಸಿಂಗ್!
ಕನ್ನಡ ಚಿತ್ರರಂಗ ಅಲ್ಲ, ಭಾರತೀಯ ಚಿತ್ರರಂಗವೂ ಅಲ್ಲ, ವಿಶ್ವದಾದ್ಯಂತ ಯಾವುದೋ ಒಂದು ಚಿತ್ರದ ಬಗ್ಗೆ ಸದ್ಯ ಹೆಚ್ಚಾಗಿ ಟಾಕ್ ಕ್ರಿಯೇಟ್ ಆಗಿದೆ ಅಂದರೆ ಅದು ಕನ್ನಡ 'ಕೆಜಿಎಫ್' ಚಿತ್ರ ಅಲ್ಲದೇ ಮತ್ಯಾವುದು ಅಲ್ಲ. 'ಕೆಜಿಎಫ್ 2' ರಿಲೀಸ್ ಆಗಿ ತಿಂಗಳು ಆಗುತ್ತಾ ಬಂದರೂ ಚಿತ್ರದ ಹವಾ ಮಾತ್ರ ಕಡಿಮೆ ಆಗಿಲ್ಲ.
Recommended Video

'ಕೆಜಿಎಫ್ 2' ಪ್ಯಾನ ಇಂಡಿಯಾ ರಿಲೀಸ್ ಆಗಿದಲ್ಲಿಂದ ಈ ಸಿನಿಮಾ ಹವಾ ಜೋರಾಗೇ ಇದೆ. ಇನ್ನು ಕೂಡ ಈ ಸಿನಿಮಾಗೆ ಟಕ್ಕರ್ ಕೊಡುವ ಸಿನಿಮಾ ಬಂದಿಲ್ಲ. ಸೌತ್ ಚಿತ್ರರಂಗ ಸೇರಿದಂತೆ ಎಲ್ಲಾ ಬಹುತೇಕ ಎಲ್ಲಾ ಚಿತ್ರರಂಗದವರೂ 'ಕೆಜಿಎಫ್ 2' ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಒಪ್ಪಿಕೊಳ್ಳುವ ಅನಿವಾರ್ಯತೆಯನ್ನು 'ಕೆಜಿಎಫ್ 2' ಹುಟ್ಟು ಹಾಕಿದೆ.
ಬಾಲಿವುಡ್‌ನಲ್ಲಿ
ರಕ್ಷಿತ್
ಶೆಟ್ಟಿ
ಹವಾ:
'777
ಚಾರ್ಲಿ'
ಹಿಂದಿ
ವಿತರಣಾ
ಹಕ್ಕು
ಸೋಲ್ಡ್!
'ಕೆಜಿಎಫ್ 2' ಬಗ್ಗೆ ಈಗಾಗಲೇ ಸಾಕಷ್ಟು ಕಲಾವಿದರು, ಸ್ಟಾರ್ ನಟರು ಮಾತನಾಡಿದ್ದಾರೆ. ಈಗ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಕೂಡ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. 'ಕೆಜಿಎಫ್ 2' ಮತ್ತು ಯಶ್ ಬಗ್ಗೆ ಸಂದರ್ಶನವೊಂದರಲ್ಲಿ ರಣ್ವೀರ್ ಮಾತನಾಡಿದ್ದಾರೆ. ರಣ್ವೀರ್ ಏನು ಹೇಳಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ.
ಶ್ವೇತಾ
ಶ್ರೀವಾತ್ಸವ್
ಮಗಳು
ಅಶ್ಮಿತಾ
ಶ್ರೀವಾತ್ಸವ್
ಚಿತ್ರರಂಗಕ್ಕೆ
ಎಂಟ್ರಿ!

'ಕೆಜಿಎಫ್ 2' ಸಿನಿಮಾ ನೋಡಿದ ರಣ್ವೀರ್ ಸಿಂಗ್!
ಬಾಲಿವುಡ್ ನಟ ರಣ್ವೀರ್ ಸಿಂಗ್ 'ಕೆಜಿಎಫ್ 2' ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ರಣ್ವೀರ್ ಸಿಂಗ್ 'ಕೆಜಿಎಫ್ 2' ಮತ್ತು ಯಶ್‌ಗೆ ಫಿದಾ ಆಗಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ರೀತಿಯ ಚಿತ್ರಗಳು ನನಗೆ ತುಂಬಾ ಇಷ್ಟ ಆಗುತ್ತವೆ. ನಾನು ಒಬ್ಬನೇ ಕುಳಿತು ಸಿನಿಮಾ ನೋಡಿ ಚಪ್ಪಾಳೆ ತಟ್ಟುತ್ತೇನೆ. ಜನರ ಜೊತೆಗೆ ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ.

ಕೆಜಿಎಫ್ 2, ಯಶ್ ಅದ್ಭುತ ಎಂದ ರಣ್ವೀರ್
'ಕೆಜಿಎಫ್ 2' ಸಿನಿಮಾ ರಣ್ವೀರ್ ಸಿಂಗ್‌ಗೆ ಬಹಳ ಇಷ್ಟವಾಗಿದೆಯಂತೆ. ಜೊತೆಗೆ ರಾಕಿಂಗ್ ಸ್ಟಾರ್ ಅಭಿನಯವನ್ನೂ ಕೂಡ ಮೆಚ್ಚಿಕೊಂಡಿದ್ದಾರೆ. "ಕೆಜಿಎಫ್: ಚಾಪ್ಟರ್ 2 ನೋಡಿದಾಗ, ನನಗೆ ತುಂಬಾನೇ ಖುಷಿ ಆಯ್ತು. ಅದ್ಭುತ ಅನಿಸಿತ್ತು. ಸಿನಿಮಾದುದ್ದಕ್ಕೂ 'ಯಶ್ ಅವನನ್ನು ಕೊಂದುಬಿಡು' ಅಂತಿದ್ದೆ. ಈ ರೀತಿಯ ಸಿನಿಮಾಗಳು ನನಗೆ ಇಷ್ಟವಾಗುತ್ತವೆ. ಇಂತಹ ಚಿತ್ರಗಳು ನನ್ನ ಫಸ್ಟ್ ಲವ್. 'ಮಗಧೀರ' ಆಗಲಿ ಅಥವಾ 'ಕೆಜಿಎಫ್ 2' ಆಗಿರಲಿ ಇಂತಹ ಚಿತ್ರಗಳನ್ನು ರಾತ್ರಿ ಒಂಟಿಯಾಗಿ ನೋಡಿ ಚಪ್ಪಾಳೆ ತಟ್ಟುತ್ತೇನೆ. ಇಂತಹ ಚಿತ್ರಗಳು ನನಗೆ ಇಷ್ಟ." ಎಂದು ಹೇಳಿಕೊಂಡಿದ್ದಾರೆ.
ರಾಕಿ ಭಾಯ್ ಅವತಾರದಲ್ಲಿ ರಣ್ವೀರ್ ಸಿಂಗ್!
ನಟ ರಣ್ವೀರ್ ಸಿಮಗ್ ಬಾಲಿವುಡ್‌ನಲ್ಲಿ ಸದಾ ವಿಭಿನ್ನ ಕಾಸ್ಟ್ಯೂಮ್ ಪ್ರಯೋಗ ಮಾಡುವವರಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಅವರು ಹಲವು ಬಾರಿ ತಮ್ಮ ಲುಕ್ ಮೂಲಕ ಹೊಸ ಟ್ರೆಂಡ್ ಹುಟ್ಟು ಹಾಕುತ್ತಾರೆ. ಅಂತೆಯೇ ಈಗ 'ಕೆಜಿಎಫ್ 2'ನಲ್ಲಿ ಯಶ್ ಹಾಕಿರುವ ಮಾದರಿಯ ಕಾಸ್ಟ್ಯೂಮ್ ತೊಟ್ಟು ಫೋಟೊವನ್ನು ಇನ್ಸ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ 'ರಾಕಿ ಭಾಯ್ ವೈಬ್ಸ್' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಮುಂದುವರೆದ 'ಕೆಜಿಎಫ್ 2' ಬಾಕ್ಸಾಫೀಸ್ ಬೇಟೆ!
'ಕೆಜಿಎಫ್ 2' ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. ಆದರೆ ಚಿತ್ರದ ಗಳಿಕೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡು ಬಂದಿಲ್ಲ. 25 ದಿನಕ್ಕೆ 'ಕೆಜಿಎಫ್ 2' 1170 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಮಾಡುತ್ತಿದೆ. ಅತಿ ಹೆಚ್ಚು ಗಳಿಕೆ ಮಾಡಿರುವ ಚಿತ್ರಗಳ ಪಟ್ಟಿಯಲ್ಲಿ 'ಕೆಜಿಎಫ್ 2', 3ನೇ ಸ್ಥಾನದಲ್ಲಿ ಇದೆ. ಈ ಗಳಿಕೆ ಹೀಗೆ ಮುಂದುವರೆದರೆ ಶೀಘ್ರದಲ್ಲೇ 2ನೇ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ.