»   » ಹಾವು ನೋಡಿ ಬೆಚ್ಚಿಬಿದ್ದ ಅಭಿನಯ ಶಾರದೆ ಜಯಂತಿ

ಹಾವು ನೋಡಿ ಬೆಚ್ಚಿಬಿದ್ದ ಅಭಿನಯ ಶಾರದೆ ಜಯಂತಿ

Posted By:
Subscribe to Filmibeat Kannada
Actress Jayanthi
ಅಭಿನಯ ಶಾರದೆ ಜಯಂತಿ ಅವರ ಮನೆಗೆ ಅಪರೂಪದ ಅತಿಥಿಯೊಬ್ಬ ಇಂದು ದಿಢೀರ್ ಭೇಟಿ ನೀಡಿ ಅವರನ್ನು ಗಾಬರಿ ಬೀಳಿಸಿದ್ದಾನೆ. ಐದರಿಂದ ಆರು ಅಡಿ ಉದ್ದದ ಈ ಅತಿಥಿಯನ್ನು ನೋಡಿದರೆ ಎಂಥಹವರಿಗೂ ಎದೆ ಧಸಕ್ ಎನ್ನುತ್ತದೆ. ಯಾರಪ್ಪಾ ಆ ಅತಿಥಿ ಅಂತೀರಾ?

ಕನಕಪುರ ಬಳಿ ಇರುವ ಜಯಂತಿ ಅವರ ಮನೆಯ ಆವರಣದಲ್ಲಿ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಈ ಜಾತಿಯ ಹಾವು ದಟ್ಟಕಾಡಿನಲ್ಲಿ ಮಾತ್ರ ಕಂಡುಬರುತ್ತದಂತೆ. ಆದರೆ ಇಲ್ಲಿಗೆ ಹೇಗೆ ಬಂತೋ ಏನೋ ಗೊತ್ತಿಲ್ಲ. ಅಲ್ಲೇ ಕ್ರಿಕೆಟ್ ಆಡುತ್ತಿದ್ದ ಹುಡುಗರು ಈ ಹಾವನ್ನು ನೋಡಿ ವಿಷಯ ತಿಳಿಸಿದ್ದಾರೆ.

ತಕ್ಷಣ ಉರಗತಜ್ಞ ವಿನಯ್ ಅವರಿಗೆ ಜಯಂತಿ ಅವರು ಕರೆಮಾಡಿದ್ದಾರೆ. ವಿನಯ್ ಅವರು ಈ ಹಾವನ್ನು ಹಿಡಿದು ಕಾಡಿಗೆ ಕಳುಹಿಸಿದರು. "ಈ ಹಾವಿಗೆ ಬೆಕ್ಕಿನ ತರಹ ಕಣ್ಣು ಇರುವ ಕಾರಣ ಇದನ್ನು ಕ್ಯಾಟ್ ಸ್ನೇಕ್ ಎಂದು ಕರೆಯಲಾಗುತ್ತದೆ. ಇದು ಬಹಳ ಅಪರೂಪದ ಹಾವು. ಇಲ್ಲಿಗೆ ಹೇಗೆ ಬಂತು ಎಂಬುದು ಗೊತ್ತಿಲ್ಲ" ಎಂದಿದ್ದಾರೆ ವಿನಯ್. (ಒನ್‌ಇಂಡಿಯಾ ಕನ್ನಡ)

English summary
A rare species of Cat Snake appears at Kannada actress Abhinaya sharade Jayanthi residence near Kanakapura. After the snake was rescued by herpetologist Vinay.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada