Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫೋರ್ಬ್ಸ್ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣಗೆ ಅಗ್ರಸ್ಥಾನ, ಯಶ್‌ಗೆ ಎಷ್ಟನೇ ಸ್ಥಾನ?
ಫೋರ್ಬ್ಸ್' ನಿಯತಕಾಲಿಕೆ ಪ್ರತಿವರ್ಷ ದೇಶ-ವಿದೇಶದಲ್ಲಿನ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ ಹೀಗೆ ಪ್ರತಿಯೊಂದು ಕ್ಷೇತ್ರದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಿ ಪ್ರತಿವರ್ಷ ಬಿಡುಗಡೆ ಮಾಡುತ್ತಿರುತ್ತದೆ. ಪ್ರತಿವರ್ಷ ಬಿಡುಗಡೆಯಾಗುವ ಪಟ್ಟಿಯಲ್ಲಿ, ಆ ವರ್ಷದಲ್ಲಿ ಆಯಾಯ ಕಾರ್ಯಕ್ಷೇತ್ರಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದವರು ಜೊತೆಗೆ ಆ ಕ್ಷೇತ್ರದ ಮೂಲಕ ಜನತೆಯನ್ನು ಇನ್‌ಫ್ಲುಯೆನ್ಸ್ ಮಾಡಬಲ್ಲವರು 'ಫೋರ್ಬ್ಸ್' ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ.
Recommended Video

ಇತ್ತೀಚಿನ ತನ್ನ ನಿಯತಕಾಲಿಕೆಯಲ್ಲಿ 'ಕೆಜಿಎಫ್' ಚಿತ್ರದ ನಂತರ ವಿಶ್ವದಾದ್ಯಂತ ಅಪಾರವಾದ ಖ್ಯಾತಿಯನ್ನು ಪಡೆದ
ಯಶ್ ಅವರ ಮುಖಪುಟವನ್ನು ಹೊತ್ತು ಬಿಡುಗಡೆಯಾಗಿತ್ತು. 'ಫೋರ್ಬ್ಸ್' ನಿಯತಕಾಲಿಕೆಯ ಕವರ್ ಪೇಜ್ ನಲ್ಲಿ ಸ್ಥಾನ ಪಡೆಯುವುದು ಸಾಮಾನ್ಯದ ವಿಷಯವಲ್ಲ. ಕವರ್ ಪೇಜ್ ನಲ್ಲಿ ಕಾಣಿಸಿ ಕೊಳ್ಳಬೇಕಾದರೆ ವ್ಯಕ್ತಿ ಅತ್ಯಂತ ಜನಪ್ರಿಯತೆಯನ್ನು ಹೊಂದಿರಬೇಕು. ದಕ್ಷಿಣ ಭಾರತದ ಕೆಲವೇ ಕೆಲವು ಮಂದಿಯಲ್ಲಿ ವಿಶೇಷವಾಗಿ ಕನ್ನಡದಿಂದ ಯಶ್ ಮೊದಲ ಬಾರಿಗೆ ಇಂತಹ ಗೌರವಕ್ಕೆ ಪಾತ್ರರಾಗಿದ್ದಾರೆ. ಈಗ ಇದೆ ಫೋರ್ಬ್ಸ್ ನಿಯತಕಾಲಿಕೆ ದಕ್ಷಿಣ ಭಾರತಕ್ಕೆ ಸಂಬಂಧಿಸಿದಂತೆ ಒಂದು ವಿಶೇಷವಾದ ಮತ್ತು ಆಸಕ್ತಿದಾಯಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ನಟ-ನಟಿಯರ ಒಂದು ಪಟ್ಟಿಯಾಗಿದೆ.
ಸೆಲೆಬ್ರಿಟಿಗಳಿಗೂ ಮತ್ತು ಸಾಮಾಜಿಕ ಜಾಲತಾಣಕ್ಕೆ ಬಿಡಿಸಲಾರದ ನಂಟು. ಸೆಲೆಬ್ರಿಟಿಗಳು ತಮ್ಮ ಸಿನಿಮಾ ಅಪ್ಡೇಟ್ ಗಳಿಂದ ಹಿಡಿದುಕೊಂಡು ತಮ್ಮ ಖಾಸಗಿ ಜೀವನದ ವಿಚಾರಗಳನ್ನು ಕೂಡ ಈ ಸೋಶಿಯಲ್ ಸೈಟುಗಳಲ್ಲಿ ಹಂಚಿಕೊಳ್ಳುತ್ತಾರೆ. ಜೊತೆಗೆ ತಮ್ಮ ಅಭಿಮಾನಿಗಳನ್ನು ಕೂಡ ಅತ್ಯಂತ ಸುಲಭವಾಗಿ ತಲುಪುವ ಮಾರ್ಗವಾಗಿ ಸೋಶಿಯಲ್ ಸೈಟುಗಳನ್ನು ಅವರು ಬಳಸಿಕೊಳ್ಳುತ್ತಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸಲೆಬ್ರಿಟಿಗಳು ಅದರಲ್ಲೂ ವಿಶೇಷವಾಗಿ ಸಿನಿ ಸೆಲೆಬ್ರಿಟಿಗಳ ಹವಾ ಜೋರಾಗಿದೆ. ಹೆಚ್ಚು ಫಾಲೋಯರ್ಸ್ ಹೊಂದುವ ವಿಚಾರದಲ್ಲಿ ಈ ಸಿನಿ ತಾರೆಗಳ ಮಧ್ಯೆ ದೊಡ್ಡ ಪೈಪೋಟಿ ಕೂಡ ನಡೆಯುತ್ತಿರುತ್ತದೆ.

ಪಟ್ಟಿ ಮಾಡಿರುವ ಫೋರ್ಬ್ಸ್
ಈಗ ಇದೇ ಕ್ರಮದಲ್ಲಿ 'ಫೋರ್ಬ್ಸ್' ಒಂದು ವಿಶೇಷ ಮತ್ತು ಆಸಕ್ತಿದಾಯಕ ಸಂಗತಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಇದು ಸೌತ್ ಫಿಲಂ ಇಂಡಸ್ಟ್ರಿಯ ನಟ- ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಯಾರು ಹೆಚ್ಚು ಫಾಲೋಯರ್ಸ್ ಹೊಂದಿದ್ದಾರೆ, ಹೆಚ್ಚು ಸಕ್ರಿಯರಾಗಿದ್ದು, ಯಾರ ಪೋಸ್ಟ್ ಗಳಿಗೆ ಪ್ರತಿಕ್ರಿಯೆಗಳು ಹೆಚ್ಚಿಗೆ ಬರುತ್ತದೆ ಮತ್ತು ಯಾರು ಹೆಚ್ಚು ಹೆಚ್ಚು ಸೋಶಿಯಲ್ ಮೀಡಿಯಾ ಗಳನ್ನು ಇನ್‌ಫ್ಲ್ಯುಯೆನ್ಸ್ ಮಾಡುತ್ತಿದ್ದಾರೆ ಎಂಬ ಎಲ್ಲಾ ಅಂಶಗಳನ್ನು ಆಧರಿಸಿ ತಯಾರಿಸಿರುವ ಪಟ್ಟಿ ನಿನ್ನೆ ಬಿಡುಗಡೆಗೊಳಿಸಿದೆ.

ರಶ್ಮಿಕಾಗೆ ಮೊದಲ ಸ್ಥಾನ- ಯಶ್ ಗೆ ಎಷ್ಟನೆ ಸ್ಥಾನ?
ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ಯಾರ ಹವಾ ಜೋರಾಗಿದೆ, ಎಂಬ ಪ್ರಶ್ನೆಗೆ 'ಫೋರ್ಬ್ಸ್' ಬಿಡುಗಡೆ ಮಾಡಿರುವ ಪಟ್ಟಿ ನೋಡಿದಾಗ ಸಖೇದಾಶ್ಚರ್ಯವನ್ನು ಉಂಟುಮಾಡುತ್ತದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಸದಾ ಒಂದಲ್ಲ ಒಂದು ವಿವಾದದಿಂದಲೇ ಸುದ್ದಿಯಲ್ಲಿರುವ ಸಮಂತಾಳನ್ನು ಕೂಡ ಹಿಂದಕ್ಕೆ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ 9. 88 ಪಾಯಿಂಟ್ ಗಳೊಂದಿಗೆ ಅಗ್ರಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಇನ್ನೂ ಆಸಕ್ತಿದಾಯಕ ಸಂಗತಿಯೆಂದರೆ ರಶ್ಮಿಕಾ ಕೆಮಿಸ್ಟ್ರಿ ಪಾರ್ಟ್ನರ್ ಅಂತಲೇ ಸದಾ ಸುದ್ದಿಯಲ್ಲಿರುವ ವಿಜಯ್ ದೇವರಕೊಂಡ ಪಟ್ಟಿಯಲ್ಲಿ 9.67 ಪಾಯಿಂಟ್ ಗಳೊಂದಿಗೆ 2ನೇ ಸ್ಥಾನಗಳಿಸಿದ್ದಾರೆ. ಇನ್ನು ನಮ್ಮ ಕನ್ನಡದ ಯಶ್
ಅವರು 9.54 ಪಾಯಿಂಟ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಯಾರಿಗೆ ಎಷ್ಟು ಪಾಯಿಂಟ್ಸ್?
ರಶ್ಮಿಕಾ ಮಂದಣ್ಣ: 9.88
ವಿಜಯ್ ದೇವರಕೊಂಡ: 9.67
ಯಶ್: 9.54
ಸಮಂತಾ ರುತ್ ಪ್ರಭು: 9.49
ಅಲ್ಲು ಅರ್ಜುನ್: 9.46
ದುಲ್ಕರ್ ಸಲ್ಮಾನ್: 9.42
ಪೂಜಾ ಹೆಗ್ಡೆ: 9.41
ಪ್ರಭಾಸ್: 9.40
ಸೂರ್ಯ: 9.37
ತಮನ್ನಾ ಭಾಟಿಯಾ: 9.36
ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಯಂಗ್ ಟೈಗರ್ ಜೂನಿಯರ್ ಎನ್ಟಿಆರ್, ಮೆಗಾ ಪ್ರಿನ್ಸ್ ವರುಣ್ ತೇಜ್, ಅಖಿಲ್, ಅಕ್ಕಿನೇನಿ ಮತ್ತು ಸಾಯಿ ಧರಮ್ ತೇಜ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
ಕೆಲಸದ ವಿಚಾರಕ್ಕೆ ಬರುವುದಾದರೆ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಪ್ರಸ್ತುತ ವಿಜಯ್, ಪುರಿ ಜಗನ್ನಾಥ್ ಜೊತೆ 'ಲಿಗರ್' ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದರೆ. ರಶ್ಮಿಕಾ ಪ್ರಸ್ತುತ 2 ಹಿಂದಿ ಮತ್ತು 2 ತೆಲುಗು ಒಂದು ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಯಶ್ ಯವರು 'ಕೆಜಿಎಫ್ 2' ಚಿತ್ರದ ಬಿಡುಗಡೆಗಾಗಿ ಎದುರುನೋಡುತ್ತಿದ್ದಾರೆ.