For Quick Alerts
  ALLOW NOTIFICATIONS  
  For Daily Alerts

  ಕಿರಿಕ್ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ

  By Pavithra
  |
  ಕಿರಿಕ್ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ | Filmibeat Kannada

  'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಕನ್ನಡಿಗರ ಮನಸ್ಸು ಗೆದ್ದು 'ಕರ್ನಾಟಕ ಕ್ರಶ್' ಅಂತಾನೆ ಪ್ರಖ್ಯಾತಿ ಪಡೆದುಕೊಂಡ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಚಿತ್ರರಂಗಕ್ಕೆ ಬಂದು ಎರಡೇ ವರ್ಷದಲ್ಲಿ ನಾಲ್ಕು ಹಿಟ್ ಸಿನಿಮಾಗಳನ್ನ ನೀಡಿರುವ ರಶ್ಮಿಕಾ ಇಂದು 22ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

  ನಿನ್ನೆ ರಾತ್ರಿಯಿಂದಲೇ ರಶ್ಮಿಕಾ ಹುಟ್ಟುಹಬ್ಬದ ಆಚರಣೆ ಶುರುವಾಗಿದ್ದು ಕಿರಿಕ್ ಪಾರ್ಟಿ ಚಿತ್ರತಂಡದವರೆಲ್ಲರೂ ಸೇರಿ ರಶ್ಮಿಕಾ ಮನೆಯಲ್ಲಿ ಬರ್ತಡೇ ಸೆಲಬ್ರೆಟ್ ಮಾಡಿದ್ದಾರೆ. ಹುಟ್ಟುಹಬ್ಬದ ಆಚರಣೆಯಲ್ಲಿ ನಿರ್ದೇಶಕ ಕಿರಣ್ ರಾಜ್, ರಿಶಬ್ ಶೆಟ್ಟಿ, ನಿರ್ಮಾಪಕ ಪುಷ್ಕರ್ ಇನ್ನೂ ಅನೇಕರು ಭಾಗಿ ಆಗಿದ್ದರು. ಸದ್ಯ ರಶ್ಮಿಕಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

  ಹೊಸ ಚಿತ್ರದಲ್ಲಿ ಕ್ರೀಡಾಪಟು ಆದ ರಶ್ಮಿಕಾ: ಯಾರು ಹೀರೋ.? ಹೊಸ ಚಿತ್ರದಲ್ಲಿ ಕ್ರೀಡಾಪಟು ಆದ ರಶ್ಮಿಕಾ: ಯಾರು ಹೀರೋ.?

  ಕೇವಲ ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ರಶ್ಮಿಕಾ ಟಾಲಿವುಡ್ ನಲ್ಲಿಯೂ ಗುರುತಿಸಿಕೊಂಡಿದ್ದು ಚಿರಂಜೀವಿ ಚಿತ್ರದಲ್ಲಿಯೂ ನಟಿಸುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆರಂಭದಿಂದಲೂ ಬಿಗ್ ಸ್ಟಾರ್ ಗಳ ಜೊತೆಯಲ್ಲಿಯೇ ಅಭಿನಯಿಸುತ್ತಾ ಬಂದಿರುವ ಕರ್ನಾಟಕದ ಶಾನ್ವಿಗೆ ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್ ಅಂತೂ ಕ್ರಿಯೆಟ್ ಆಗಿದೆ.

  ರಶ್ಮಿಕಾ ಹುಟ್ಟುಹಬ್ಬಕ್ಕೆ ರಕ್ಷಿತ್ ಶೆಟ್ಟಿ ಯಾವ ರೀತಿಯ ಉಡುಗೊರೆ ನೀಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿದ್ದು ಹುಟ್ಟುಹಬ್ಬದ ಸ್ಪೆಷಲ್ ಹಾಗೂ ವಿಶೇಷ ಉಡುಗೊರೆ ಬಗ್ಗೆ ಸಂಜೆ ವೇಳೆಗೆ ತಿಳಿಯಲಿದೆ.

  English summary
  Kannada actress Rashmika Mandanna celebrating her 22nd birthday. Currently she is acting as a heroine in Darshan's Yajamana movie.Director Kiran Raj, Rishab Shetty, producer Pushkar and others were present at the birthday ceremony

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X