For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸೊಸೆ ಜೊತೆ ಸೇರಿ ಕ್ಯಾರೆಟ್ ಹಲ್ವಾ ಮಾಡಿದ ರಶ್ಮಿಕಾ ಮಂದಣ್ಣ

  |

  ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಈಗ ತೆಲುಗಿನಲ್ಲಿ ಸಖತ್ ಹವಾ ಎಬ್ಬಿಸಿದ್ದಾರೆ. ಕೆಲವೇ ಸಮಯದಲ್ಲಿ ತೆಲುಗು ಸಿನಿ ಉದ್ಯಮದಲ್ಲಿ ಛಾಪು ಮೂಡಿಸಿರುವ ರಶ್ಮಿಕಾ. ಅಲ್ಲಿ ಹಲವಾರು ಗೆಳೆಯರನ್ನೂ ಅವರು ಮಾಡಿಕೊಂಡಿದ್ದಾರೆ.

  ಸಾಲು-ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ಬಿಡುವು ಮಾಡಿಕೊಂಡು, ಚಿರಂಜೀವಿ ಸೊಸೆ, ರಾಮ್‌ಚರಣ್ ತೇಜಾ ಪತ್ನಿ ಉಪಾಸನಾ ಅವರೊಟ್ಟಿಗೆ ಸೇರಿ ಅಡುಗೆ ಮಾಡಿದ್ದಾರೆ!

  ವಿಜಯ್ ದೇವರಕೊಂಡ ಸಹೋದರ ಚಿತ್ರ ನೋಡಿ ಗುಣಗಾನ ಮಾಡಿದ ರಶ್ಮಿಕಾವಿಜಯ್ ದೇವರಕೊಂಡ ಸಹೋದರ ಚಿತ್ರ ನೋಡಿ ಗುಣಗಾನ ಮಾಡಿದ ರಶ್ಮಿಕಾ

  ಹೌದು, ಉಪಾಸನಾ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಅತಿಥಿಯಾಗಿ ಭಾಗವಹಿಸಿದ್ದು, ಕ್ಯಾರೆಟ್ ಹಲ್ವಾ ಮಾಡಿದ್ದಾರೆ. ಜೊತೆಗೆ ಉಪಾಸನಾ ಜೊತೆಗೆ ತುಸು ಹರಟೆ ಸಹ ಹೊಡೆದಿದ್ದಾರೆ. ರಶ್ಮಿಕಾ ಅಡುಗೆ ಮಾಡಿರುವ ಯೂಟ್ಯೂಬ್ ವಿಡಿಯೋ ಇದೀಗ ವೈರಲ್ ಆಗಿದೆ.

  'ಭಾನುವಾರ ಇಷ್ಟವಾಗಿದ್ದ ತಿನ್ನುತ್ತೇನೆ, ಉಳಿದ ದಿನ ಇಲ್ಲ'

  'ಭಾನುವಾರ ಇಷ್ಟವಾಗಿದ್ದ ತಿನ್ನುತ್ತೇನೆ, ಉಳಿದ ದಿನ ಇಲ್ಲ'

  ಕ್ಯಾರೆಟ್ ಹಲ್ವಾ ಮಾಡುತ್ತಾ ಹಲವು ವಿಷಯಗಳ ಬಗ್ಗೆ ಮಾತನಾಡಿರುವ ರಶ್ಮಿಕಾ, 'ನಾನು ಒಂದು ದಿನ ಚೀಟ್‌ ಡೇ (ಏನನ್ನಾದರೂ ತಿನ್ನಬಹುದಾದ ದಿನ) ಇಟ್ಟುಕೊಂಡಿರುತ್ತೇವೆ ಅದು ಭಾನುವಾರ, ಆ ದಿನದಲ್ಲಿ ತಿಂದದ್ದೆಲ್ಲವನ್ನೂ ಉಳಿದ ಆರು ದಿನ ವರ್ಕೌಟ್‌ ಮಾಡಿ ಕರಗಿಸುತ್ತೇನೆ' ಎಂದಿದ್ದಾರೆ ರಶ್ಮಿಕಾ.

  ಶ್ರೀಮಂತರ ಸಮಸ್ಯೆಗಳು: ರಶ್ಮಿಕಾ ಕಾಲೆಳೆದ ಉಪಾಸನಾ

  ಶ್ರೀಮಂತರ ಸಮಸ್ಯೆಗಳು: ರಶ್ಮಿಕಾ ಕಾಲೆಳೆದ ಉಪಾಸನಾ

  ಮುಂದುವರೆದು, 'ಭಾನುವಾರ ಸಹ ನಾನು ನನ್ನ ನಾಲಗೆಗೆ ಲಗಾಮು ಹಾಕಿಕೊಂಡರೆ, ವ್ಯಾಯಾಮ ಮಾಡುವ ಅವಶ್ಯಕತೆಯೇ ಇರುವುದಿಲ್ಲ' ಎನ್ನುತ್ತಾರೆ ರಶ್ಮಿಕಾ. ಇದಕ್ಕೆ ಪ್ರತಿಕ್ರಿಯಿಸುವ ಉಪಾಸನಾ, 'ನೋಡಿ ಇವು ದುಡ್ಡಿದ್ದವರ ಸಮಸ್ಯೆಗಳು' ಎಂದು ಸಟೈರ್ ಹೊಡೆಯುತ್ತಾರೆ.

  ಬಾಡಿ ಶೇಮಿಂಗ್ ಮಾಡಿದ್ರು, ಬೆದರಿಕೆ ಹಾಕಿದ್ರು ಆದರೂ ನಾನು ಅವಿತುಕೊಂಡಿಲ್ಲ: ರಶ್ಮಿಕಾ ಮಂದಣ್ಣಬಾಡಿ ಶೇಮಿಂಗ್ ಮಾಡಿದ್ರು, ಬೆದರಿಕೆ ಹಾಕಿದ್ರು ಆದರೂ ನಾನು ಅವಿತುಕೊಂಡಿಲ್ಲ: ರಶ್ಮಿಕಾ ಮಂದಣ್ಣ

  ರಶ್ಮಿಕಾ ಗೆ ಹಲ್ವಾ ತಿನ್ನಿಸುವ ಉಪಾಸನಾ

  ರಶ್ಮಿಕಾ ಗೆ ಹಲ್ವಾ ತಿನ್ನಿಸುವ ಉಪಾಸನಾ

  ರಶ್ಮಿಕಾ ಬಗ್ಗೆ ಮಾತನಾಡುವ ಉಪಾಸನಾ, 'ಈ ಕಿರಿಯ ಸೂಪರ್ ಸ್ಟಾರ್, ಈ ಕಾರ್ಯಕ್ರಮಕ್ಕಾಗಿ ಸಾಕಷ್ಟು ಕಷ್ಟಪಟ್ಟು ಸಮಯ ಹೊಂದಿಸಿಕೊಂಡು ಬಂದಿದ್ದಾರೆ. ನಾನು ಅವರಿಗಾಗಿ ಋಣಿಯಾಗಿದ್ದೇನೆ' ಎನ್ನುತ್ತಾ, ತಾವೇ ಸ್ವತಃ ಕ್ಯಾರೆಟ್ ಹಲ್ವಾ ಅನ್ನು ರಶ್ಮಿಕಾ ಗೆ ತಿನ್ನಿಸಿದರು.

  ಸೈಬರ್ ರಾಣೆ ಮೆಟ್ಟಿಲೇರಿದ Vinod Raj | Filmibeat Kannada
  ರಶ್ಮಿಕಾ ಕೊಟ್ಟಿದ್ದಾರೆ ಆಹಾರ, ಆರೋಗ್ಯ ಟಿಪ್ಸ್

  ರಶ್ಮಿಕಾ ಕೊಟ್ಟಿದ್ದಾರೆ ಆಹಾರ, ಆರೋಗ್ಯ ಟಿಪ್ಸ್

  ಉಪಾಸನಾ ಅವರು ಯೂಟ್ಯೂಬ್ ಚಾನೆಲ್‌ ನಲ್ಲಿ ಹಲವು ನಟಿಯರು ಆರೋಗ್ಯ ಟಿಪ್ಸ್‌ ಅನ್ನು ನೀಡುತ್ತಾರೆ. ರಶ್ಮಿಕಾ ಮಂದಣ್ಣ ಸಹ ಯೂಟ್ಯೂಬ್ ಚಾನೆಲ್‌ಗಾಗಿ ಆಹಾರ ಮತ್ತು ಆರೋಗ್ಯ ಟಿಪ್ಸ್ ಅನ್ನು ನೀಡಿದ್ದಾರೆ. ತಮ್ಮ ಆಹಾರ ರೊಟೀನ್‌ ಬಗ್ಗೆಯೂ ರಶ್ಮಿಕಾ ಮಾತನಾಡಿದ್ದಾರೆ.

  ಹೊಸ ಚಿತ್ರಕ್ಕೆ ಭಾರಿ ಸಂಭಾವನೆ ಪಡೆದ ರಶ್ಮಿಕಾ ಮಂದಣ್ಣಹೊಸ ಚಿತ್ರಕ್ಕೆ ಭಾರಿ ಸಂಭಾವನೆ ಪಡೆದ ರಶ್ಮಿಕಾ ಮಂದಣ್ಣ

  English summary
  Actress Rashmika Mandanna cook carrot halwa with Upasana Konidela for her you tube channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X