For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟಿಯರನ್ನು ಹಿಂದಿಕ್ಕಿದ ರಶ್ಮಿಕಾ ಮಂದಣ್ಣರಿಂದ ಹೊಸ ಸಾಧನೆ

  |

  'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಎರಡು ಹಿಂದಿ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದು, ಬಿಡುಗಡೆಗೂ ಮುಂಚೆಯೇ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ರಕುಲ್ ಪ್ರೀತ್ ಸಿಂಗ್, ಪೂಜಾ ಹೆಗ್ಡೆ, ಜಾಹ್ನವಿ ಕಪೂರ್ ಅಂತಹ ಸ್ಟಾರ್ ನಟಿಯರನ್ನು ಹಿಂದಿಕ್ಕಿ ಹೊಸ ದಾಖಲೆ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

  ಮುಂಬೈನಿಂದ ಅಭಿಮಾನಿಗೆ ಬುದ್ದಿ ಹೇಳಿದ ರಶ್ಮಿಕ! | Filmmibeat Kannada

  ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಂ ಹಿಂಬಾಲಕರ ಸಂಖ್ಯೆ 20 ಮಿಲಿಯನ್ ದಾಟಿದೆ. ಈ ಮೂಲಕ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರ ಪಟ್ಟಿಯಲ್ಲಿ ಸ್ಟಾರ್ ಸೆಲೆಬ್ರಿಟಿಗಳನ್ನು ಹಿಂದಿಕ್ಕಿ ಮುಂದೆ ಸಾಗಿದ್ದಾರೆ. ವಿಶೇಷ ಅಂದ್ರೆ ಕಳೆದ 25 ದಿನದಲ್ಲಿ 1 ಮಿಲಿಯನ್ ಹಿಂಬಾಲಕರು ರಶ್ಮಿಕಾ ಅವರನ್ನು ಹೊಸದಾಗಿ ಫಾಲೋ ಮಾಡಿದ್ದಾರೆ.

  ಬ್ರೇಕಪ್ ಬಳಿಕ ಟ್ರೋಲ್ ಕಾಟ ಎದುರಿಸಿದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು?ಬ್ರೇಕಪ್ ಬಳಿಕ ಟ್ರೋಲ್ ಕಾಟ ಎದುರಿಸಿದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು?

  ರಶ್ಮಿಕಾ ಮಂದಣ್ಣ ಸಿನಿಮಾಗಳು ಹೆಚ್ಚುತ್ತಿದ್ದಂತೆ ಅಭಿಮಾನಿ ಬಳಗವೂ ದೊಡ್ಡದಾಗಿ ಬೆಳೆಯುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸುತ್ತಿರುವ ರಶ್ಮಿಕಾಗೆ ಪ್ಯಾನ್ ಇಂಡಿಯಾ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದರ ಪರಿಣಾಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿಯೂ ಹಿಂಬಾಲಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

  ಸಮಂತಾ ಅಕ್ಕಿನೇನು, ಕಿಯಾರಾ ಅಡ್ವಾಣಿ, ಕಾಜಲ್ ಅಗರ್‌ವಾಲ್ ಅಂತಹ ಸ್ಟಾರ್ ಹೀರೋಯಿನ್‌ಗಳನ್ನು ಸಹ ಇನ್ಸ್ಟಾ ಫಾಲೋವರ್ಸ್ ಸಂಖ್ಯೆಯಲ್ಲಿ ಕೊಡಗಿನ ಕುವರಿ ಹಿಂದಿಕ್ಕಿದ್ದಾರೆ. ಈಗ ಬಾಲಿವುಡ್ ತಾರೆಗಳನ್ನು ಸೈಡಿಗಟ್ಟಿದ್ದಾರೆ. ಇನ್ಸ್ಟಾದಲ್ಲಿ 20 ಮಿಲಿಯನ್ ಫಾಲೋವರ್ಸ್ ಆದ ಹಿನ್ನೆಲೆ ಹೊಸ ಫೋಟೋವೊಂದನ್ನು ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ''ಲವ್ ಯೂ'' ಎಂದಿದ್ದಾರೆ.

  ಅಮಿತಾಬ್ ಬಚ್ಚನ್‌ ಜೊತೆ ನಟಸಿದ ಸಿಹಿ ಅನುಭವ ಹಂಚಿಕೊಂಡ ರಶ್ಮಿಕಾಅಮಿತಾಬ್ ಬಚ್ಚನ್‌ ಜೊತೆ ನಟಸಿದ ಸಿಹಿ ಅನುಭವ ಹಂಚಿಕೊಂಡ ರಶ್ಮಿಕಾ

  ಇನ್ನು 'ಫ್ಯಾಮಿಲಿ ಮ್ಯಾನ್ 2' ಸಕ್ಸಸ್‌ನಲ್ಲಿರುವ ಸಮಂತಾ ಅಕ್ಕಿನೇನಿಗೆ ಇನ್ಸ್ಟಾಗ್ರಾಂನಲ್ಲಿ 18 ಮಿಲಿಯನ್ ಫಾಲೋವರ್ಸ್ ಇದ್ದಾರೆ. 'ಭರತ್ ಅನೇ ನೇನು' ಸಿನಿಮಾ ಮೂಲಕ ಸಕ್ಸಸ್ ಕಂಡ ಕಿಯಾರಾ ಅಡ್ವಾಣಿ 18.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಇದೇ ವರ್ಷ ವೈವಾಹಿಕ ಬದುಕು ಆರಂಭಿಸಿದ ಕಾಜಲ್ ಅಗರ್‌ವಾಲ್ 19.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಪೂಜಾ ಹೆಗ್ಡೆಗೆ 14.3 ಮಿಲಿಯನ್ ಫಾಲೋವರ್ಸ್, ರಕುಲ್ ಪ್ರೀತ್ ಸಿಂಗ್ 17.3 ಮಿಲಿಯನ್ ಫಾಲೋವರ್ಸ್, ಜಾಹ್ನವಿ ಕಪೂರ್ 12.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

  Rashmika Mandanna Crossed 20 million followers in Instagram

  ಟ್ರೋಲ್ ಮಾಡುವವರಿಗೆ ತಿರುಗೇಟು ಕೊಟ್ಟ ರಶ್ಮಿಕಾ

  "19ನೇ ವಯಸ್ಸಿನಲ್ಲೇ ನನಗೆ ಟ್ರೋಲ್ ಕಾಟ ಶುರುವಾಗಿತ್ತು. ಆದರೀಗ ನಾನು ಕಲ್ಲಾಗಿದ್ದೇನೆ. ಈಗ ನನಗೆ ಟ್ರೋಲ್ ಯಾವುದೇ ಮ್ಯಾಟರ್ ಆಗಲ್ಲ. ಈಗ ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತೇನೆ. ಟ್ರೋಲ್ ನೋಡಿದರೆ ಹಾ..ಹಾ.. ಎಂದು ನಗುತ್ತೇನೆ ಅಷ್ಟೆ. ಓ ದೇವರೆ ಹಾಗಿಯಿತು, ಹೀಗಾಯಿತು ಅಂತ ಎಲ್ಲಾ ಸ್ಟಾರ್ಸ್ ಗೂ ಅನುಭವವಾಗಿದೆ" ಎಂದು ರಶ್ಮಿಕಾ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದರು.

  "ಜನ ಎಲ್ಲಾ ಕಡೆಯಿಂದ ಪಂಚ್ ಮಾಡುತ್ತಲ್ಲೇ ಇದ್ದಾಗ ಮಾಡಿ ಎಂದು ಸುಮ್ಮನಾಗುವುದು ಅಷ್ಟೆ. ನೀವು ನನಗೆ ಏನು ಕೊಟ್ಟರೂ ತೆಗೆದುಕೊಳ್ಳುತ್ತೇನೆ. ಜನರು ನನ್ನ ಬಗ್ಗೆ ಒಳ್ಳೆಯಮಾತುಗಳನ್ನು ಆಡಿದ್ದಾರೆ. ತನ್ನ ಕೆಲಸವನ್ನು ಇಷ್ಟಪಟ್ಟಿದ್ದಾರೆ. ಎಲ್ಲಾ ಕಡೆ ಕೆಟ್ಟದ್ದು ಮತ್ತು ಒಳ್ಳೆಯದ್ದು ಎರಡು ಇರುತ್ತದೆ. ಜನರು ನನ್ನನ್ನು ಸಾನ್ವಿ ಎನ್ನುತ್ತಾರೆ, ಲಿಲ್ಲಿ ಎನ್ನುತ್ತಾರೆ, ಗೀತಾ ಎಂದು ಕರೆಯುತ್ತಾರೆ ಇದು ತುಂಬಾ ಸಂತೋಷವಾಗುತ್ತದೆ" ಎಂದು ಹೇಳಿದ್ದಾರೆ.

  ಇನ್ನು ಅಮಿತಾಭ್ ಬಚ್ಚನ್ ನಟಿಸುತ್ತಿರುವ 'ಗುಡ್ ಬೈ' ಸಿನಿಮಾದಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಸಿದ್ಧಾರ್ಥ್ ಮಲ್ಹೋತ್ರ ಜೊತೆ 'ಮಿಷನ್ ಮಜ್ನು' ಸಿನಿಮಾದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಂಡಿರುವ 'ಪುಷ್ಪ' ಸಿನಿಮಾ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ತೆಲುಗಿನಲ್ಲಿ ಶರ್ವಾನಂದ್ ಜೊತೆ 'ಆಡವಳ್ಳು ಮೀಕು ಜೋಹರ್ಲು' ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

  English summary
  Indian Actress Rashmika Mandanna has now 20 million Instagram followers and beats Pooja Hegde, Rakul Preet, Janhvi Kapoor

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X