TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ರಶ್ಮಿಕಾ ಮಂದಣ್ಣ ಚಿತ್ರಗಳಂದ್ರೆ ಯೂಟ್ಯೂಬ್ ಗೆ ಒಂಥರಾ ಇಷ್ಟ

ದರ್ಶನ್ ಸಿನಿಮಾ, ಪುನೀತ್ ರಾಜ್ ಕುಮಾರ್ ಸಿನಿಮಾ, ರಕ್ಷಿತ್ ಶೆಟ್ಟಿ ಸಿನಿಮಾ, ಗಣೇಶ್ ಸಿನಿಮಾ, ವಿಜಯ್ ದೇವರಕೊಂಡ ಸಿನಿಮಾ ಅಷ್ಟು ವೀವ್ಸ್ ಮಾಡಿದೆ ಇಷ್ಟು ವೀವ್ಸ್ ಮಾಡಿದೆ ಎಂಬ ಟ್ರೆಂಡ್ ಇರುವ ಸಮಯ ಇದು. ಆದ್ರೆ, ಹೀರೋಯಿನ್ ಕಡೆಯಿಂದ ನೋಡಿದಾಗ ಬಹುಶಃ ಇಷ್ಟೊಂದು ವೀವ್ಸ್ ಇತ್ತೀಚಿನ ದಿನಗಳಲ್ಲಿ ಯಾವ ನಟಿ ಖಾತೆಯಲ್ಲೂ ಇಲ್ಲ ಅನ್ಸುತ್ತೆ.
ಹೌದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಬಹುತೇಕ ಎಲ್ಲ ಚಿತ್ರಗಳು ಯೂಟ್ಯೂಬ್ ನಲ್ಲಿ ಒಳ್ಳೆಯ ವೀಕ್ಷಣೆ ಪಡೆದುಕೊಂಡಿದೆ.
ರಶ್ಮಿಕಾಗೆ ಪತ್ರ ಬರೆದ 8ರ ಪೋರ, ಈ ಬಾಲಕನ ಆಸೆ ಏನು ಗೊತ್ತಾ?
ಸದ್ಯ ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಯಜಮಾನ ಸಿನಿಮಾ 15 ಮಿಲಿಯನ್ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ. ಕಿರಿಕ್ ಪಾರ್ಟಿ ಟ್ರೈಲರ್ 3.8 ಮಿಲಿಯನ್ ಕ್ರಾಸ್ ಮಾಡಿದೆ. ಅಂಜನಿಪುತ್ರ ಟ್ರೈಲರ್ 3.7 ಮಿಲಿಯನ್ ವೀಕ್ಷಣೆ ಕಂಡಿದ್ರೆ, ಚಮಕ್ ಸಿನಿಮಾ 1 ಮಿಲಿಯನ್ ಗೂ ಅಧಿಕ ವೀವ್ಸ್ ಪಡೆದುಕೊಂಡಿದೆ.
ಇನ್ನು ತೆಲುಗಿನಲ್ಲಿ ತೆಲುಗಿನ ಗೀತಾ ಗೋವಿಂದಂ ಟೀಸರ್ ಚಿತ್ರ 10 ಮಿಲಿಯನ್ ಗೂ ಹೆಚ್ಚು ವೀವ್ಸ್ ಪಡೆದಿದೆ. ಚಲೋ ಸಿನಿಮಾದ ಟ್ರೈಲರ್ 4.7 ಮಿಲಿಯನ್ ದಾಟಿದೆ. ದೇವದಾಸ್ ಟ್ರೈಲರ್ 6.1 ಮಿಲಿಯನ್ ಆಗಿದೆ.
ರಶ್ಮಿಕಾ ಮಂದಣ್ಣ ಬಗ್ಗೆ ಕನ್ನಡ ಚಿತ್ರರಂಗ ಅಪ್ಸೆಟ್: ಯಾರ್ರೀ ಹೇಳಿದ್ದು? ಸಾಕ್ಷಿ ಕೊಡಿ!
ಈ ಎಲ್ಲ ಚಿತ್ರಗಳಲ್ಲು ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಒಂದೊಂದು ಸಿನಿಮಾದಲ್ಲೂ ಅವರ ಪಾತ್ರ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. ಸದ್ಯ ಕರ್ನಾಟಕ ಹಾಗೂ ಆಂಧ್ರದ ಪ್ರದೇಶದ ಕ್ರಶ್ ಆಗಿರುವ ರಶ್ಮಿಕಾ ಯೂಟ್ಯೂಬ್ ಗೆ ಲೇಡಿ ಬಾಸ್ ಆಗಿದ್ದಾರೆ.