For Quick Alerts
  ALLOW NOTIFICATIONS  
  For Daily Alerts

  ತೆಲುಗಿನಲ್ಲಿ ರಶ್ಮಿಕಾಗೆ ದೊಡ್ಡ ಕಾಂಪಿಟೇಶನ್ ಈ ನಟಿಯೇ

  |

  ರಶ್ಮಿಕಾ ಮಂದಣ್ಣ ಕರ್ನಾಟಕದ ಕ್ರಶ್ ಆಗಿದ್ದರು. ಈಗ ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗುತ್ತಿದ್ದಾರೆ. ರಶ್ಮಿಕಾ ತೆಲುಗು ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಮುಂದೆ ಹೋಗುತ್ತಿದ್ದಾರೆ.

  ಇದೇ ರೀತಿ ರಶ್ಮಿಕಾ ಜೊತೆಗೆ ಲಕ್ ಇದ್ದರೆ ಅವರು ಆದಷ್ಟು ಬೇಗ ಸ್ಟಾರ್ ನಟಿ ಆಗುತ್ತಾರೆ. ಆದರೆ, ರಶ್ಮಿಕಾಗೆ ಟಾಲಿವುಡ್ ನ ಮತ್ತೊಬ್ಬ ನಟಿ ಸಿಕ್ಕಾಪಟ್ಟೆ ಕಾಂಪಿಟೇಶನ್ ನೀಡುತ್ತಿದ್ದಾರೆ.

  ಅಂತೆ ಕಂತೆಗಳು ನಿಜವಾಯ್ತು : ಮಹೇಶ್ ಬಾಬು ಜೊತೆ ರಶ್ಮಿಕಾ ರೋಮ್ಯಾನ್ಸ್

  ತೆಲುಗಿನಲ್ಲಿ ಈಗಾಗಲೇ ಕೆಲ ನಟಿಯರು ಸ್ಟಾರ್ ನಟಿಯರಾಗಿ ಅಗ್ರ ಸ್ಥಾನದಲ್ಲಿ ಇದ್ದಾರೆ. ಆದರೆ, ರಶ್ಮಿಕಾ ರೀತಿಯ ಐದಾರು ಸಿನಿಮಾ ಮಾಡಿರುವ ನಟಿ ಆಕೆಗೆ ಒಳ್ಳೆಯ ಪೈಪೋಟಿ ನೀಡುತ್ತಿದ್ದಾರೆ. ಬಿಗ್ ಹೀರೋ ಸಿನಿಮಾಗೆ ರಶ್ಮಿಕಾ ಅಥವಾ ಆ ನಟಿ ನಡುವೆ ಸ್ಪರ್ಧೆ ಏರ್ಪಡುತ್ತಿದೆ.

  ಅಂದಹಾಗೆ, ಟಾಲಿವುಡ್ ಯುವರಾಣಿಯರಾಗಿರುವ ರಶ್ಮಿಕಾ ಗೆ ಕಾಂಪಿಟೇಶ್ ನೀಡ್ತಿರೋದು ಮಂಗಳೂರು ಚಲುವೆ ಪೂಜಾ ಹೆಗ್ಡೆ...

  ರಶ್ಮಿಕಾ ಖಾತೆಯಲ್ಲಿ 7 ಸಿನಿಮಾಗಳು

  ರಶ್ಮಿಕಾ ಖಾತೆಯಲ್ಲಿ 7 ಸಿನಿಮಾಗಳು

  ನಟಿ ರಶ್ಮಿಕಾ ಮಂದಣ್ಣ ಕ್ರೇಜ್ ಟಾಲಿವುಡ್ ನಲ್ಲಿ ಜೋರಾಗಿದೆ. ಸದ್ಯ ಅವರು ನಟಿರುವ ಮೂರು ಚಿತ್ರಗಳು ಬಿಡುಗಡೆಯಾಗಿದ್ದು, ಮೂರೂ ಕೂಡ ಹಿಟ್ ಆಗಿವೆ. ಹೀಗಾಗಿ, ಅವರು ನಾಲ್ಕು ತೆಲುಗು ಚಿತ್ರಕ್ಕೆ ಬುಕ್ ಆಗಿದ್ದಾರೆ. ಇದರಲ್ಲಿ ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ಮಹೇಶ್ ಬಾಬು ನಿತಿನ್ ಸಿನಿಮಾಗಳು ಇವೆ.

  ರಶ್ಮಿಕಾ ಮಂದಣ್ಣ ಮಾತಿಗೆ ಸಮಂತಾ ಫ್ಯಾನ್ಸ್ ಶಾಕ್ ಆಗಿದ್ದೇಕೆ?

  ಪೂಜಾ ಮಾಡಿರೋದು 6 ಸಿನಿಮಾ

  ಪೂಜಾ ಮಾಡಿರೋದು 6 ಸಿನಿಮಾ

  ನಟಿ ಪೂಜಾ ಹೆಗ್ಡೆ ಕೂಡ ಈವರೆಗೆ 6 ತೆಲುಗು ಸಿನಿಮಾ ಮಾಡಿದ್ದಾರೆ. ನಾಗಚೈತನ್ಯ, ಅಲ್ಲು ಅರ್ಜುನ್, ಜೂನಿಯರ್ ಎನ್ ಟಿ ಆರ್, ಮಹೇಶ್ ಬಾಬು ಜೊತೆಗೆ ಪೂಜಾ ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೆ ಬಿಡುಗಡೆಯಾದ 'ಮಹರ್ಷಿ' ಸೂಪರ್ ಹಿಟ್ ಆಗಿದೆ. ಈ ರೀತಿ ಪೂಜಾ ಕೂಡ ಮುಂದೆ ಮುಂದೆ ಹೋಗುತ್ತಿದ್ದಾರೆ.

  ರಶ್ಮಿಕಾ - ಪೂಜಾ ಟಾಲಿವುಡ್ ಯುವರಾಣಿಯರು

  ರಶ್ಮಿಕಾ - ಪೂಜಾ ಟಾಲಿವುಡ್ ಯುವರಾಣಿಯರು

  ಸದ್ಯ, ಟಾಲಿವುಡ್ ನ ಟ್ರೆಂಡಿಂಗ್ ಹೀರೋಯಿನ್ ಗಳ ಸಾಲಿನಲ್ಲಿ ಪ್ರಮುಖವಾಗಿರುವುದು ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ. ಸ್ಟಾರ್ ಸಿನಿಮಾಗಳು ಅಂದರೆ ಈ ಇಬ್ಬರ ಹೆಸರು ಮೊದಲು ಬರುತ್ತಿದೆ. ಇಬ್ಬರ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಇಬ್ಬರು ನಟಿಯರಿಗೆ ಇದೇ ರೀತಿ ಒಳ್ಳೆಯ ಅವಕಾಶ ಸಿಗುತ್ತಿದ್ದರೆ, ಟಾಲಿವುಡ್ ನಲ್ಲಿ ರಾಣಿ ಪಟ್ಟಕ್ಕೆ ಏರುತ್ತಾರೆ.

  ಇತರ ನಟಿಯರ ಸಿನಿಮಾಗಳು

  ಇತರ ನಟಿಯರ ಸಿನಿಮಾಗಳು

  ಪೂಜಾ ಹೆಗಡೆ ಬಿಟ್ಟರೆ, ನಟಿ ತಮನ್ನಾ, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್ ಹಾಗೂ ಸಾಯಿ ಪಲ್ಲವಿ ಸೇರಿದಂತೆ ಕೆಲವು ನಟಿಯರ ಜೊತೆಗೆ ರಶ್ಮಿಕಾ ಪೈಪೋಟಿ ಮಾಡಬೇಕಿದೆ. ತೆಲುಗಿನಲ್ಲಿ ಸಾಯಿ ಪಲ್ಲವಿ ದಿನೇ ದಿನೇ ಬೆಳೆಯುತ್ತಿದ್ದಾರೆ.

  ಮಹೇಶ್ ಬಾಬು ಚಿತ್ರದಲ್ಲಿ ರಶ್ಮಿಕಾ

  ಮಹೇಶ್ ಬಾಬು ಚಿತ್ರದಲ್ಲಿ ರಶ್ಮಿಕಾ

  ರಶ್ಮಿಕಾ ಮಂದಣ್ಣಗೆ ಈಗ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ. ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವರು' ಚಿತ್ರದಲ್ಲಿ ಅವರೇ ನಾಯಕಿಯಾಗಿದ್ದಾರೆ. ನಿನ್ನೆ (ಶುಕ್ರವಾರ) ಆ ಸಿನಿಮಾ ಲಾಂಚ್ ಆಗಿದೆ. ಇದರ ಜೊತೆಗೆ ಅಲ್ಲು ಅರ್ಜುನ್ ಹಾಗೂ ತಮಿಳು ನಟ ವಿಜಯ್ ರ 64 ನೇ ಚಿತ್ರಕ್ಕೆ ರಶ್ಮಿಕಾ ಆಯ್ಕೆ ಆಗಿದ್ದಾರೆ.

  English summary
  Actress Rashmika Mandanna having competition with Pooja Hegde in tollywood

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X