»   » ಪವರ್ ಸ್ಟಾರ್ ಹೊಸ ಚಿತ್ರಕ್ಕೆ 'ಕಿರಿಕ್' ಸಾನ್ವಿ ನಾಯಕಿ!

ಪವರ್ ಸ್ಟಾರ್ ಹೊಸ ಚಿತ್ರಕ್ಕೆ 'ಕಿರಿಕ್' ಸಾನ್ವಿ ನಾಯಕಿ!

Posted By:
Subscribe to Filmibeat Kannada

ಅದೊಂದು ಚಿತ್ರ, ರಶ್ಮಿಕಾ ಮಂದಣ್ಣ ಅವರ ವೃತ್ತಿ ಜೀವನನ್ನೇ ಬದಲಾಯಿಸಿದೆ ಅಂದ್ರೆ ತಪ್ಪಾಗಲಾರದು. 'ಕಿರಿಕ್ ಪಾರ್ಟಿ' ಚಿತ್ರದಲ್ಲಿನ ಅಭಿನಯಕ್ಕೆ ಈಗ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ.

'ಕಿರಿಕ್ ಪಾರ್ಟಿ' ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 49ನೇ ಚಿತ್ರದಲ್ಲಿ ನಾಯಕಿಯಾಗಿರುವ ರಶ್ಮಿಕಾ, ಅದರ ಬೆನ್ನಲ್ಲೆ ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಚಮಕ್' ಚಿತ್ರದಲ್ಲೂ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ.[ವಿಡಿಯೋ: 'ಕಿರಿಕ್' ಸಾನ್ವಿ ಜೊತೆ ಸಂಕ್ರಾಂತಿ ಸಂಭ್ರಮ!]

ಹೀಗೆ, ಮೊದಲ ಮೂರು ಚಿತ್ರಗಳು ದೊಡ್ಡ ಸ್ಟಾರ್ ಗಳ ಜೊತೆ ಅಭಿನಯಿಸುವ ಅವಕಾಶ ಪಡೆದುಕೊಂಡ ರಶ್ಮಿಕಾ, ಈಗ ಪುನೀತ್ ರಾಜ್ ಕುಮಾರ್ ಅವರ ಹೊಸ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಪುನೀತ್ ಚಿತ್ರಕ್ಕೆ ರಶ್ಮಿಕಾ ನಾಯಕಿ!

'ಕಿರಿಕ್ ಪಾರ್ಟಿ' ಚಿತ್ರದ ಅದ್ಭುತ ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ, ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಅವಕಾಶ ಪಡೆದುಕೊಳ್ಳುತ್ತಿರುವ ರಶ್ಮಿಕಾ, ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಸ ಚಿತ್ರಕ್ಕೂ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಹರ್ಷ ನಿರ್ದೇಶನದ ಚಿತ್ರ!

ನೃತ್ಯ ಸಂಯೋಜಕ ಹರ್ಷ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇದೀಗ, ಈ ಚಿತ್ರದಲ್ಲಿ ಅಪ್ಪು ಜೊತೆ ಅಭಿನಯಿಸಲು 'ಕಿರಿಕ್ ಪಾರ್ಟಿ' ಸಾನ್ವಿ ಆಯ್ಕೆಯಾಗಿದ್ದಾರೆ.[ಪುನೀತ್ ರಾಜ್ ಕುಮಾರ್-ಹರ್ಷ ಮಹಾಸಂಗಮದ ಇಂಟ್ರೆಸ್ಟಿಂಗ್ ಡೀಟೈಲ್ಸ್]

'ಕಿರಿಕ್ ಪಾರ್ಟಿ'ಯಿಂದ ಒಲಿದ ಅದೃಷ್ಟ!

ಪುನೀತ್ ಅವರ ಈ ಚಿತ್ರಕ್ಕೆ ನಿರ್ದೇಶಕ ಹರ್ಷ ಹೊಸ ನಾಯಕಿಯ ಹುಡುಕಾಟದಲ್ಲಿದ್ದರಂತೆ. ಆದ್ರೆ, 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ರಶ್ಮಿಕಾ ಅವರ ಪ್ರತಿಭೆ ನೋಡಿ ಇಷ್ಟವಾಯಿತ್ತಂತೆ. ಹೀಗಾಗಿ ರಶ್ಮಿಕಾ ಅವರ ಮೇಲೆ ಭರವಸೆ ಇಟ್ಟು ಸೆಲೆಕ್ಟ್ ಮಾಡಿಕೊಂಡಿದ್ದಾರಂತೆ.[ದರ್ಶನ್ ಮಾಡಬೇಕಿದ್ದ ಚಿತ್ರಕ್ಕೀಗ ಪುನೀತ್ ನಾಯಕ!]

ತಮಿಳಿನ 'ಪೂಜೈ' ರೀಮೇಕ್!

ಅಂದ್ಹಾಗೆ, ಹರ್ಷ ಹಾಗೂ ಪುನೀತ್ ಕಾಂಬಿನೇಷನ್ ನಲ್ಲಿ ಮೂಡಲಿರುವ ಈ ಹೊಸ ಚಿತ್ರ, ತಮಿಳಿನ 'ಪೂಜೈ' ಚಿತ್ರದ ರೀಮೇಕ್. ಈ ಚಿತ್ರವನ್ನ ಎಂ.ಎನ್.ಕುಮಾರ್ ಮತ್ತು ಜಯಶ್ರೀದೇವಿ ನಿರ್ಮಾಣ ಮಾಡಲಿದ್ದಾರೆ. ವಿಶೇಷ ಪಾತ್ರದಲ್ಲಿ ರಮ್ಯಾಕೃಷ್ಣ ಕಾಣಿಸಿಕೊಳ್ಳಲಿದ್ದು, ರವಿಶಂಕರ್, ಚಿಕ್ಕಣ್ಣ ಕೂಡ ಅಭಿನಯಿಸಲಿದ್ದಾರಂತೆ. ಅರ್ಜುನ್ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ. ಮೂಲಗಳ ಪ್ರಕಾರ ಫೆಬ್ರವರಿ ತಿಂಗಳಲ್ಲಿ ಶುರು ಮಾಡುವ ತಯಾರಿಯಲ್ಲಿದೆ ಚಿತ್ರತಂಡ.[ಪವರ್ ಸ್ಟಾರ್ ಮುಂದಿನ ಚಿತ್ರದಲ್ಲಿ ಬಹುಭಾಷಾ ನಟಿ ಅಭಿನಯ]

ಸ್ಟಾರ್ ಗಳ ಲಕ್ಕಿ ಹೀರೋಯಿನ್ ರಶ್ಮಿಕಾ!

ರಕ್ಷಿತ್ ಶೆಟ್ಟಿ ಅವರ 'ಕಿರಿಕ್ ಪಾರ್ಟಿ' ಚಿತ್ರದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 49ನೇ ಚಿತ್ರಕ್ಕೆ ರಶ್ಮಿಕಾ ಬುಕ್ ಆಗಿದ್ದಾರೆ. ಇದರ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಚಮಕ್' ಚಿತ್ರದಲ್ಲೂ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಹೀಗಾಗಿ ಸತತ ಮೂರು ಚಿತ್ರಗಳು ದೊಡ್ಡ ನಟರ ಜೊತೆ ಚಾನ್ಸ್ ಪಡೆದಿರುವ ರಶ್ಮಿಕಾ, ಈಗ 4ನೇ ಸಿನಿಮಾನೂ ದೊಡ್ಡ ನಟರ ಜೊತೆಯಲ್ಲಿ ಎಂಬುದು ವಿಶೇಷ.[ದರ್ಶನ್ 49ನೇ ಚಿತ್ರಕ್ಕೆ ಒಬ್ಬರು ಶೃತಿ ಹರಿಹರನ್, ಮತ್ತೊಬ್ಬರು?]

English summary
Rashmika Mandanna has being Paired opposite Puneeth Rajkumar in Harsha’s Upcoming directorial, A remake of Poojai. Harsha confirms that Rashmika is on board and says that he is happy to have roped in a Kannada heroine for his film.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X