For Quick Alerts
  ALLOW NOTIFICATIONS  
  For Daily Alerts

  ಅಂತರಾಷ್ಟ್ರೀಯ ಬ್ರ್ಯಾಂಡ್‌ಗೆ ರಾಯಭಾರಿ ಆದ ರಶ್ಮಿಕಾ ಮಂದಣ್ಣ

  |

  ಕನ್ನಡತಿ ರಶ್ಮಿಕಾ ಮಂದಣ್ಣ ಅವರ ವೃತ್ತಿಯ ಗ್ರಾಫು ಏರುತ್ತಲೇ ಸಾಗುತ್ತಿದೆ. ಒಂದರಹಿಂದೊಂದು ಭಾರಿ ಬಜೆಟ್‌ನ, ದೊಡ್ಡ ಸ್ಟಾರ್‌ಗಳ ಸಿನಿಮಾಗಳನ್ನು ಬಾಚಿಕೊಳ್ಳುತ್ತಿರುವ ರಶ್ಮಿಕಾ ಈಗ ಪ್ರಸಿದ್ಧ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗೆ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ.

  ಮೆಕ್ ಡೊನಾಲ್ಡ್ಸ್ ಗೆ ಬ್ರಾಂಡ್ ಅಂಬಾಸಿಡರ್ ಆದ್ರು ರಶ್ಮಿಕಾ ಮಂದಣ್ಣ | Filmibeat Kannada

  ವಿಶ್ವದ ಅತಿ ದೊಡ್ಡ ಫಾಸ್ಟ್‌ ಫುಡ್‌ ಜಾಯಿಂಟ್‌ ಎಂದು ಹೆಸರಾಗಿರುವ ಮೆಕ್‌ಡೊನಾಲ್ಡ್ಸ್ ಭಾರತದ ದಕ್ಷಿಣ ಹಾಗೂ ಪಶ್ಚಿಮ ಭಾಗಕ್ಕೆ ರಾಯಭಾರಿಯನ್ನಾಗಿ ರಶ್ಮಿಕಾ ಅನ್ನು ಆಯ್ಕೆ ಮಾಡಲಾಗಿದೆ. ದಕ್ಷಿಣ ಹಾಗೂ ಪಶ್ಚಿಮ ಭಾರತದ ರಾಜ್ಯಗಳಲ್ಲಿ ಮೆಕ್‌ಡೊನಾಲ್ಡ್ಸ್ ಜಾಹೀರಾತುಗಳಲ್ಲಿ ರಶ್ಮಿಕಾ ಮಂದಣ್ಣ ಮಿಂಚಲಿದ್ದಾರೆ.

  ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ದಕ್ಷಿಣ ಮತ್ತು ಪಶ್ಚಿಮ ಭಾಗದ ವ್ಯವಸ್ಥಾಪಕ ಅರವಿಂದ ಆರ್‌ಪಿ, 'ಯುವ ಸಮುದಾಯಕ್ಕೆ ರಶ್ಮಿಕಾ ಮಂದಣ್ಣ ಬಹುಬೇಗ ಕನೆಕ್ಟ್ ಆಗುತ್ತಾರೆ. ಅವರೊಬ್ಬ ಯೂತ್ ಐಕಾನ್ ಆಗಿದ್ದಾರೆ. ಅವರು ನಮ್ಮ ಜೊತೆ ಸೇರಿಕೊಳ್ಳುತ್ತಿರುವುದು ಸಂತಸ ತಂದಿದೆ' ಎಂದಿದ್ದಾರೆ.

  'ನ್ಯಾಷನಲ್ ಕ್ರಶ್' ಎಂದು ಸಹ ಕರೆಯಲ್ಪಡುವ ರಶ್ಮಿಕಾ ಮಂದಣ್ಣ ತಮ್ಮ ಆಹಾರ ಪ್ರೀತಿಯನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿರುತ್ತಾರೆ. ಕೊಡಗಿನ ಕುವರಿಯಾದ ರಶ್ಮಿಕಾ ಮಂದಣ್ಣ ಮಾಂಸಾಹಾರ ಪ್ರಿಯೆಯೂ ಆಗಿದ್ದು. ಸಸ್ಯಹಾರ, ಮಾಂಸಾಹಾರ ಎರಡನ್ನೂ ವಿತರಿಸುವ ಬೃಹತ್‌ ಫುಡ್‌ ಜಾಯಿಂಟ್‌ ಮೆಕ್‌ಡೊನಾಲ್ಡ್ಸ್‌ಗೆ ಸೂಕ್ತ ರಾಯಭಾರಿ ಆಗಬಹುದಾಗಿದೆ.

  ತಮಗೆ ಒದಗಿ ಬಂದಿರುವ ಹೊಸ ಅವಕಾಶದ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ, ಕಾಲೇಜು ದಿನಗಳಲ್ಲಿ ಮೆಕ್‌ಡಿಯಲ್ಲಿಯೇ ಕುಳಿತು ಗೆಳೆಯರೊಂದಿಗೆ ಸಮಯ ಕಳೆಯುತ್ತಿದ್ದೆ ಈಗ ಅದೇ ಬ್ರ್ಯಾಂಡ್‌ಗೆ ಅಂಬಾಸಿಡರ್ ಆಗಿದ್ದೇನೆ. ಇದು ಬಹಳ ಸಂತಸ ತಂದಿದೆ ಎಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಮಾಹಿತಿ ಹಂಚಿಕೊಂಡಿದ್ದಾರೆ ರಶ್ಮಿಕಾ.

  'ಈ ಬೃಹತ್ ಆಹಾರ ಸಂಸ್ಥೆಯು ಕಳೆದ 25 ವರ್ಷಗಳಿಂದಲೂ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ವಯೋಮಾನದವರ ಮೆಚ್ಚಿನ ಫಾಸ್ಟ್ ಫುಡ್ ಜಾಯಿಂಟ್ ಆಗಿ ಗುರುತಿಸಿಕೊಂಡಿದೆ ಮೆಕ್‌ಡಿ. ಇಂಥಹಾ ಒಳ್ಳೆಯ ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವುದಕ್ಕೆ ಸಂತೋಷವಿದೆ' ಎಂದಿದ್ದಾರೆ ರಶ್ಮಿಕಾ.

  English summary
  Actress Rashmika Mandanna is South and West India ambassador for International fast food joint McDonalds.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X