For Quick Alerts
  ALLOW NOTIFICATIONS  
  For Daily Alerts

  "ಕಾಂತಾರ' ನೋಡಿ ಮೆಸೇಜ್ ಮಾಡ್ದೆ.. ನನ್ನ ಯಾರು ಬ್ಯಾನ್ ಮಾಡಿಲ್ಲ.. ಕನ್ನಡ ಸಿನಿಮಾ ಅಂದ್ರೆ ಪ್ರೀತಿ ಇದೆ": ರಶ್ಮಿಕಾ

  |

  ಕರ್ನಾಟಕದಲ್ಲಿ ರಶ್ಮಿಕಾ ಮಂದಣ್ಣ ಸಿನಿಮಾಗಳನ್ನು ಬ್ಯಾನ್‌ ಮಾಡಬೇಕು ಎನ್ನುವ ಅರ್ಥದಲ್ಲಿ ಕೆಲವರು ಟ್ರೆಂಡ್ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದ ಈ ವಿಚಾರ ದೊಡ್ಡದಾಗಿ ಸದ್ದು ಮಾಡುತ್ತಿದೆ. ಈ ಬಗ್ಗೆ ಮೌನ ಮುರಿದಿರುವ ನಟಿ ರಶ್ಮಿಕಾ ಮಂದಣ್ಣ "ನನ್ನನ್ನು ಯಾರು ಬ್ಯಾನ್ ಮಾಡಿಲ್ಲ, ಇದೆಲ್ಲಾ ಸುಳ್ಳು ಪ್ರಚಾರ" ಎಂದಿದ್ದಾರೆ.

  ನಟಿ ರಶ್ಮಿಕಾ ಮಂದಣ್ಣ ಪದೇ ಪದೇ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚೆಗೆ 'ಕಾಂತಾರ' ಇನ್ನು ನೋಡಿಲ್ಲ ಎಂದಿದ್ದು, ಸಂದರ್ಶನದಲ್ಲಿ ಪರಂವಃ ಸ್ಟುಡಿಯೋಸ್ ಹೆಸರು ಹೇಳದೇ ಕೈ ಸನ್ನೆ ಮಾಡಿದ್ದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ರಶ್ಮಿಕಾ ಮಂದಣ್ಣ ಸಿನಿಮಾಗಳನ್ನು ನೋಡಬಾರದು, ಆಕೆಯ ಸಿನಿಮಾಗಳು ರಾಜ್ಯದಲ್ಲಿ ಬಿಡುಗಡೆ ಆಗುವುದು ಬೇಡ, ಆಕೆಯನ್ನು ಬ್ಯಾನ್ ಮಾಡಿ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಮಾಡಿದ್ದರು. ನಿನ್ನೆ(ಡಿಸೆಂಬರ್ 8) ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಶ್ಮಿಕಾ ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

  "ಯಾರೋ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇದರಲ್ಲಿ ಸತ್ಯಾಂಶ ಇಲ್ಲ. ಅವರು ಏನು ಹೇಳುತ್ತಿದ್ದಾರೆ ಅದು ಸರಿನೋ ತಪ್ಪೋ ಎನ್ನುವುದನ್ನು ಅವರ ವಿವೇಚನೆಗೆ ಬಿಡುತ್ತೇನೆ" ಎಂದು ರಶ್ಮಿಕಾ ಎಂದಿದ್ದಾರೆ.

  ನನ್ನನ್ನು ಯಾರು ಬ್ಯಾನ್ ಮಾಡಿಲ್ಲ

  ನನ್ನನ್ನು ಯಾರು ಬ್ಯಾನ್ ಮಾಡಿಲ್ಲ

  ರಶ್ಮಿಕಾನ ಬ್ಯಾನ್ ಮಾಡಬೇಕು ಎನ್ನುತ್ತಿರುವುದು ಸೋಶಿಯಲ್ ಮೀಡಿಯಾ ಚರ್ಚೆ ಅಷ್ಟೆ. ಚಿತ್ರರಂಗದಿಂದ ಯಾರು ಈ ಮಾತನ್ನು ಹೇಳಿಲ್ಲ. ಇದೇ ವಿಚಾರವನ್ನು ರಶ್ಮಿಕಾ ಕೂಡ ಹೇಳಿದ್ದಾರೆ. "ಕನ್ನಡ ಚಿತ್ರರಂಗದಿಂದ ನನ್ನನ್ನು ಬ್ಯಾನ್ ಮಾಡಿದ್ದಾರೆ ಎಂದು ಹೇಳುತ್ತಿರುವ ಸುದ್ದಿಯಲ್ಲಿ ವಾಸ್ತವ ಇಲ್ಲ. ಈವರೆಗೆ ಇಂತಹ ವಿಚಾರ ನನ್ನ ಬಳಿಗೆ ಬಂದಿಲ್ಲ." ಎಂದಿದ್ದಾರೆ.

  ಕನ್ನಡ ಸಿನಿಮಾ ಅಂದ್ರೆ ಪ್ರೀತಿ ಇದೆ

  ಕನ್ನಡ ಸಿನಿಮಾ ಅಂದ್ರೆ ಪ್ರೀತಿ ಇದೆ

  ಬೇರೆ ಚಿತ್ರರಂಗದಲ್ಲಿ ಸಕ್ಸಸ್ ಸಿಕ್ಕಿದ ಕೂಡಲೇ ರಶ್ಮಿಕಾ ಕನ್ನಡ ಸಿನಿಮಾಗಳನ್ನು, ಕನ್ನಡ ಚಿತ್ರರಂಗವನ್ನು ಮರೆತುಬಿಟ್ಟರು. ಹತ್ತಿದ ಏಣಿಯನ್ನು ಒದ್ದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇದಕ್ಕೆ ಉತ್ತರಿಸಿರುವ ರಶ್ಮಿಕಾ "ಕನ್ನಡ ಸಿನಿಮಾಗಳ ಬಗ್ಗೆ ನನಗೆ ಯಾವಾಗ ಪ್ರೀತಿ ಇದ್ದೇ ಇರುತ್ತದೆ. ವಾಸ್ತವ ತಿಳಿದುಕೊಳ್ಳದೇ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  'ಕಾಂತಾರ' ನೋಡಿ ಮೆಸೇಜ್ ಮಾಡಿದ್ದೆ

  'ಕಾಂತಾರ' ನೋಡಿ ಮೆಸೇಜ್ ಮಾಡಿದ್ದೆ

  'ಕಾಂತಾರ' ಸಿನಿಮಾ ನೋಡಿಲ್ಲ ಎಂದು ರಶ್ಮಿಕಾ ಹೇಳಿದ್ದು ಕೆಲವರು ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. "'ಕಾಂತಾರ' ಬಿಡುಗಡೆಯಾದ ಎರಡು ದಿನಕ್ಕೆ ಸಿನಿಮಾ ನೋಡಿದ್ರಾ? ಎಂದು ಕೇಳಿದ್ದರು. ನೋಡಿರಲಿಲ್ಲ. ಅದಕ್ಕೆ ಸರಿಯಾಗಿ ಸ್ಪಂದಿಸಿರಲಿಲ್ಲ. ಆ ನಂತರ ಸಿನಿಮಾ ನೋಡಿ ಚಿತ್ರತಂಡಕ್ಕೆ ಮೆಸೇಜ್ ಮಾಡಿದ್ದೆ. ಅವರು ಥ್ಯಾಂಕ್ಯೂ ಎಂದು ರಿಪ್ಲೇ ಮಾಡಿದ್ದರು" ಎಂದಿದ್ದಾರೆ.

  ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ

  ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ

  "ನನ್ನ ವೈಯಕ್ತಿಕ ವಿಚಾರಗಳನ್ನು ಕ್ಯಾಮರಾ ಇಟ್ಟು ಪ್ರಪಂಚಕ್ಕೆ ತೋರಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ನನ್ನ ವೈಯಕ್ತಿಕ ವಿಚಾರಗಳು ಪ್ರಪಂಚಕ್ಕೆ ಬೇಕಾಗಿಲ್ಲ. ವೃತ್ತಿಪರವಾಗಿ ನನ್ನ ಸಿನಿಮಾಗಳ ಬಗ್ಗೆ ಮಾತನಾಡುವುದು ನನ್ನ ಜವಾಬ್ದಾರಿ. ನನ್ನ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದನ್ನೆಲ್ಲಾ ಅವರ ವಿವೇಚನೆಗೆ ಬಿಡುತ್ತೇನೆ" ಎಂದು ರಶ್ಮಿಕಾ ಹೇಳಿದ್ದಾರೆ.

  English summary
  Rashmika Mandanna Reacts On Her BAN issue From Kannada Film Industry. Rashmika Mandana Comments About Kantara Movie. know more
  Friday, December 9, 2022, 8:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X