For Quick Alerts
  ALLOW NOTIFICATIONS  
  For Daily Alerts

  ಜೀವನದ 20 ಮರೆಯಲಾಗದ ಘಟನೆಗಳನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ

  |

  'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಇತ್ತೀಚಿಗಷ್ಟೆ 20 ಮಿಲಿಯನ್ ಆಗಿತ್ತು. ಈ ಸಂತಸವನ್ನು ಬಹಳ ವಿಶೇಷವಾಗಿ ಆಚರಿಸಿದ ನಟಿ ತಮ್ಮ ಜೀವನದಲ್ಲಿ ಎಂದೂ ಮರೆಯಲಾಗದ 20 ಪ್ರಮುಖ ಘಟನೆಗಳನ್ನು ಹಂಚಿಕೊಂಡಿದ್ದಾರೆ.

  2016ರಲ್ಲಿ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಇಂದು ಭಾರತೀಯ ಚಿತ್ರರಂಗದ ಬೇಡಿಕೆಯ ನಟಿ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಕಲಾವಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಬಹುಭಾಷೆ ತಾರೆಯಾಗಿ ಮಿಂಚುತ್ತಿದ್ದಾರೆ.

  ಸ್ಟಾರ್ ನಟಿಯರನ್ನು ಹಿಂದಿಕ್ಕಿದ ರಶ್ಮಿಕಾ ಮಂದಣ್ಣರಿಂದ ಹೊಸ ಸಾಧನೆಸ್ಟಾರ್ ನಟಿಯರನ್ನು ಹಿಂದಿಕ್ಕಿದ ರಶ್ಮಿಕಾ ಮಂದಣ್ಣರಿಂದ ಹೊಸ ಸಾಧನೆ

  ರಶ್ಮಿಕಾ ಹಂಚಿಕೊಂಡಿರುವ 20 ಪ್ರಮುಖ ಘಟನೆಗಳ ಕಡೆ ಒಂದು ನೋಟ.

  - ಮೊದಲ ಮ್ಯಾಗ್‌ಜಿನ್ (ಪುಟ್ಟ ಬಾಲಕಿಯಾಗಿದ್ದಾಗ)

  - ಚಿತ್ರಮಂದಿರದಲ್ಲಿ ನೋಡಿದ ಮೊದಲ ಸಿನಿಮಾ ತಮಿಳು ನಟ ವಿಜಯ್ ಅಭಿನಯದ 'ಗಿಲ್ಲಿ'

  - ಸಿನಿಮಾಗಾಗಿ ನೀಡಿದ ಮೊದಲ ಆಡಿಷನ್ ತುಣುಕು

  - ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಚಿತ್ರ 'ಕಿರಿಕ್ ಪಾರ್ಟಿ'

  - ಮೊದಲ ತಮಿಳು ಸಿನಿಮಾ- ಕಾರ್ತಿ ಜೊತೆ ನಟಿಸಿದ 'ಸುಲ್ತಾನ'

  - ಬಾಲಿವುಡ್‌ನಲ್ಲಿ ಕ್ಲಿಕ್ಕಿಸಿದ ಮೊದಲ ಚಿತ್ರ (ಸಿದ್ಧಾರ್ಥ್ ಮಲ್ಹೋತ್ರ ಜೊತೆ 'ಗುಡ್ ಬೈ' ಸಿನಿಮಾ)

  - ಕಾಲೇಜಿನಲ್ಲಿದ್ದಾಗ ಮಾಡಿದ ಮೊದಲ ಸ್ಟೇಜ್ ಡ್ಯಾನ್ಸ್

  - ಮೊದಲ ಡ್ಯಾನ್ಸಿಂಗ್ ವಿಡಿಯೋ ಆಲ್ಬಮ್ (ಟಾಪ್ ಟಕ್ಕರ್-ಹಿಂದಿ)

  - ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಮೊದಲ ಪೋಸ್ಟ್ (ಅಕ್ಷಯ್ ಕುಮಾರ್-ರಾಣಾ ದಗ್ಗುಬಾಟಿ ಜೊತೆ)

  - ಬಾಲ್ಯದ ಮೊದಲ ಫೋಟೋಗಳು...

  - ಮೊದಲ ಸಿನಿಮಾ ಪ್ರಶಸ್ತಿ

  - ಸಿನಿಮಾ ಬರುವುದಕ್ಕೂ ಮೊದಲು ಪಡೆದ ಪ್ರಶಸ್ತಿ

  ಹೀಗೆ ರಶ್ಮಿಕಾ ಮಂದಣ್ಣ ಜೀವನದಲ್ಲಿ ನಡೆದ ಹಲವು ಮೊದಲುಗಳ ಪರಿಚಯ ಮಾಡಿಕೊಟ್ಟಿದ್ದಾರೆ. 'ಕಿರಿಕ್ ಪಾರ್ಟಿ' ನಂತರ ಪುನೀತ್ ರಾಜ್ ಕುಮಾರ್ ಜೊತೆ ಅಂಜನಿಪುತ್ರ, ಗಣೇಶ್ ಜೊತೆ ಚಮಕ್, ದರ್ಶನ್ ಜೊತೆ ಯಜಮಾನ, ಧ್ರುವ ಸರ್ಜಾ ಜೊತೆ ಪೊಗರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪೊಗರು ಸಿನಿಮಾದ ನಂತರ ಕನ್ನಡದ ಯಾವ ಚಿತ್ರದಲ್ಲಿಯೂ ರಶ್ಮಿಕಾ ಅಭಿನಯಿಸುತ್ತಿಲ್ಲ. ತೆಲುಗಿನಲ್ಲಿ ಚಲೋ, ಗೀತಾ ಗೋವಿಂದಂ, ದೇವದಾಸ್, ಡಿಯರ್ ಕಾಮ್ರೇಡ್, ಸರಿಲೇರು ನೀಕೆವ್ವರು, ಭೀಷ್ಮ, ತಮಿಳಿನಲ್ಲಿ ಸುಲ್ತಾನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  'ದೊಡ್ಡ ಕೆಲಸಗಳು ಮಾಡುವ ಹುಡುಗಿಗೆ ಸಣ್ಣ ವಿಷಯಗಳು ತಲುಪಲ್ಲ' 'ದೊಡ್ಡ ಕೆಲಸಗಳು ಮಾಡುವ ಹುಡುಗಿಗೆ ಸಣ್ಣ ವಿಷಯಗಳು ತಲುಪಲ್ಲ'

  ಪ್ರಸ್ತುತ, ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಶರ್ವಾನಂದ್ ಜೊತೆ ಹೊಸ ಸಿನಿಮಾವೊಂದು ಮಾಡುತ್ತಿದ್ದಾರೆ. ಆ ಕಡೆ ಬಾಲಿವುಡ್‌ನಲ್ಲಿ 'ಗುಡ್ ಬೈ' ಚಿತ್ರೀಕರಣ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ನೀನಾ ಗುಪ್ತಾ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಿದ್ಧಾರ್ಥ್ ಮಲ್ಹೋತ್ರ ಜೊತೆ 'ಮಿಷನ್ ಮಜ್ನು' ಸಿನಿಮಾದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ.

  Rashmika Mandanna Shared her 20 moments of firsts in life

  ರಶ್ಮಿಕಾ ಮಂದಣ್ಣ ನಂತರ ಅತಿ ಹೆಚ್ಚು ಇನ್ಸ್ಟಾಗ್ರಾಂ ಫಾಲೋವರ್ಸ್ ಹೊಂದಿರುವವರ ಪಟ್ಟಿ ನೋಡುವುದಾದರೆ, 'ಫ್ಯಾಮಿಲಿ ಮ್ಯಾನ್ 2' ಸಕ್ಸಸ್‌ನಲ್ಲಿರುವ ಸಮಂತಾ ಅಕ್ಕಿನೇನಿಗೆ ಇನ್ಸ್ಟಾಗ್ರಾಂನಲ್ಲಿ 18 ಮಿಲಿಯನ್ ಫಾಲೋವರ್ಸ್ ಇದ್ದಾರೆ. 'ಭರತ್ ಅನೇ ನೇನು' ಸಿನಿಮಾ ಮೂಲಕ ಸಕ್ಸಸ್ ಕಂಡ ಕಿಯಾರಾ ಅಡ್ವಾಣಿ 18.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಇದೇ ವರ್ಷ ವೈವಾಹಿಕ ಬದುಕು ಆರಂಭಿಸಿದ ಕಾಜಲ್ ಅಗರ್‌ವಾಲ್ 19.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಪೂಜಾ ಹೆಗ್ಡೆಗೆ 14.3 ಮಿಲಿಯನ್ ಫಾಲೋವರ್ಸ್, ರಕುಲ್ ಪ್ರೀತ್ ಸಿಂಗ್ 17.3 ಮಿಲಿಯನ್ ಫಾಲೋವರ್ಸ್, ಜಾಹ್ನವಿ ಕಪೂರ್ 12.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

  English summary
  Kannada actress Rashmika Mandanna Shared her 20 moments of firsts in life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X