For Quick Alerts
  ALLOW NOTIFICATIONS  
  For Daily Alerts

  2022ರಲ್ಲಿ ರಶ್ಮಿಕಾ ಮಂದಣ್ಣ ಫ್ಲಾಪ್; ಎಲ್ಲಾ ಚಿತ್ರ ಸೇರಿಸಿದ್ರೂ 25 ಕೋಟಿ ಮುಟ್ಟಲ್ಲ ಕಲೆಕ್ಷನ್!

  |

  ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ರಂಗವೇನು ಎಂಬುದನ್ನು ಕಂಡ ನಟಿ ರಶ್ಮಿಕಾ ಮಂದಣ್ಣ ನಂತರ ಕನ್ನಡದ ಸ್ಟಾರ್ ನಟರಾದ ಪುನೀತ್ ರಾಜ್‌ಕುಮಾರ್, ಗಣೇಶ್ ಹಾಗೂ ದರ್ಶನ್ ಚಿತ್ರಗಳಲ್ಲಿ ಅಭಿನಯಿಸಿದರು ಹಾಗೂ ಚಲೋ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಪ್ರವೇಶಿಸಿದರು.

  ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ ಎರಡನೇ ಚಿತ್ರ ಗೀತಾ ಗೋವಿಂದಂ ದೊಡ್ಡ ಬ್ರೇಕ್ ಕೊಟ್ಟಿತು. ಚಿತ್ರದಲ್ಲಿನ ಕೆಲ ಬೋಲ್ಡ್ ದೃಶ್ಯಗಳಿಂದ ಸಾಕಷ್ಟು ವೈರಲ್ ಆದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲೂ ಗೆಲುವು ಕಂಡಿತ್ತು. ಈ ಚಿತ್ರದ ನಂತರ ರಶ್ಮಿಕಾ ಮಂದಣ್ಣಗೆ ದೇಶವ್ಯಾಪಿ ಗುರುತಿಸುವಿಕೆ ಸಿಕ್ಕಿತು ಎಂದರೆ ತಪ್ಪಾಗಲಾರದು. ಈ ಚಿತ್ರದ ನಂತರ ದರ್ಶನ್ ಅಭಿನಯದ ಯಜಮಾನ ಹಾಗೂ ಧೃವ ಸರ್ಜಾ ಅಭಿನಯದ ಪೊಗರು ಚಿತ್ರಗಳಲ್ಲಿ ಅಭಿನಯಿಸಿದ ರಶ್ಮಿಕಾ ಮಂದಣ್ಣ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿಯೇ ಕೆಲಸ ನಿರ್ವಹಿಸಿದ್ದಾರೆ.

  ತೆಲುಗಿನ ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ರೀತಿಯ ಸ್ಟಾರ್ ನಟರ ಚಿತ್ರಗಳಲ್ಲಿಯೂ ಅಭಿನಯಿಸಿದ ರಶ್ಮಿಕಾ ಮಂದಣ್ಣ ಕಾರ್ತಿ ಅಭಿನಯದ ಸುಲ್ತಾನ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಸದ್ಯ ತಮಿಳಿನ ವಿಜಯ್ ಅಭಿನಯದ ವಾರಿಸು ಹಾಗೂ ತೆಲುಗಿನ ಪುಷ್ಪ ಪಾರ್ಟ್ 2 ಚಿತ್ರಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಅಭಿನಯದ ಕೇವಲ ಮೂರು ಚಿತ್ರಗಳು ಮಾತ್ರ 2022ರಲ್ಲಿ ಬಿಡುಗಡೆಗೊಂಡಿವೆ. ಈ ಮೂರು ಚಿತ್ರಗಳ ಪೈಕಿ ಎರಡು ಚಿತ್ರಗಳಲ್ಲಿ ಮಾತ್ರ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ಎರಡೂ ಚಿತ್ರಗಳೂ ಸಹ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ.

  2022ರಲ್ಲಿ ರಶ್ಮಿಕಾ ಮಂದಣ್ಣ ಫ್ಲಾಪ್

  2022ರಲ್ಲಿ ರಶ್ಮಿಕಾ ಮಂದಣ್ಣ ಫ್ಲಾಪ್

  ಈ ವರ್ಷ ಇಲ್ಲಿಯವರೆಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವುದು ತೆಲುಗಿನ 'ಆಡವಾಳ್ಳು ಮೀಕು ಜೋಹಾರ್ಲು' ಹಾಗೂ ಹಿಂದಿಯ 'ಗುಡ್ ಬೈ' ಚಿತ್ರಗಳಲ್ಲಿ ಮಾತ್ರ. ಈ ಪೈಕಿ ಆಡವಾಳ್ಳು ಮೀಕು ಜೋಹಾರ್ಲು ಚಿತ್ರ ಒಟ್ಟಾರೆ 13.50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತು ಹಾಗೂ ಗುಡ್ ಬೈ 9.66 ಕೋಟಿ ಕಲೆಕ್ಷನ್ ಮಾಡಿತು. ಈ ಮೂಲಕ ರಶ್ಮಿಕಾ ಮಂದಣ್ಣ ನಟಿಯಾಗಿ ಕಾಣಿಸಿಕೊಂಡಿದ್ದ ಈ ಎರಡೂ ಚಿತ್ರಗಳೂ ಸೇರಿದರೆ ಕಲೆಕ್ಷನ್ 23.16 ಕೋಟಿ ರೂಪಾಯಿಗಳಾಗಲಿದೆ.

  ಹಾಕಿದ್ದ ಬಂಡವಾಳ ಕೂಡ ಕಲೆಕ್ಷನ್ ಮೂಲಕ ಬರಲಿಲ್ಲ

  ಹಾಕಿದ್ದ ಬಂಡವಾಳ ಕೂಡ ಕಲೆಕ್ಷನ್ ಮೂಲಕ ಬರಲಿಲ್ಲ

  ಇನ್ನು ರಶ್ಮಿಕಾ ಮಂದಣ್ಣ ಶರ್ವಾನಂದ್ ಜತೆ ನಟಿಸಿದ್ದ ತೆಲುಗಿನ ಆಡವಾಳ್ಳು ಮೀಕು ಜೋಹಾರ್ಲು 15 ಕೋಟಿ ವೆಚ್ಚದಲ್ಲಿ ತಯಾರಾಗಿತ್ತು ಹಾಗೂ ಅಮಿತಾಬ್ ಬಚ್ಚನ್ ಜತೆ ನಟಿಸಿದ್ದ ಹಿಂದಿಯ ಗುಡ್ ಬೈ ಚಿತ್ರ ಇಪ್ಪತ್ತು ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿತ್ತು. ಈ ಮೂಲಕ ಎರಡೂ ಚಿತ್ರದ ಕಲೆಕ್ಷನ್ ಕೂಡ ಬಜೆಟ್ ಅನ್ನು ವಾಪಸ್ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಡಿಜಿಟಲ್, ಆಡಿಯೋ ಹಾಗೂ ಸ್ಯಾಟಲೈಟ್ ಮೂಲಕ ಬಜಟ್ ವಾಪಸ್ ಬಂದಿತಾದರೂ ಚಿತ್ರಗಳು ದೊಡ್ಡ ಗಳಿಕೆ ಮಾಡಲಿಲ್ಲ.

  ರಶ್ಮಿಕಾ ಕಾಣಿಸಿಕೊಂಡಿದ್ದ ಸೀತಾ ರಾಮಂ ನೂರು ಕೋಟಿ!

  ರಶ್ಮಿಕಾ ಕಾಣಿಸಿಕೊಂಡಿದ್ದ ಸೀತಾ ರಾಮಂ ನೂರು ಕೋಟಿ!

  ಅತ್ತ ದುಲ್ಕರ್ ಸಲ್ಮಾನ್ ನಟನೆಯ ಸೀತಾ ರಾಮಮ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಗಳಿಕೆ ಮಾಡಿತು. ಈ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡ ಕಾಣಿಸಿಕೊಂಡಿದ್ದರು. ಆದರೆ ಈ ಚಿತ್ರದಲ್ಲಿ ರಶ್ಮಿಕಾ ಪೋಷಕ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ಕಾರಣ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಈ ಚಿತ್ರವನ್ನು ಪರಿಗಣಿಸಿಲ್ಲ. ಹೆಚ್ಚಾಗಿ ಈ ಚಿತ್ರದಲ್ಲಿ ದುಲ್ಕರ್‌ಗೆ ನಾಯಕಿಯಾಗಿ ನಟಿಸಿದ್ದು ಮೃಣಾಲ್ ಠಾಕೂರ್, ಆದ್ದರಿಂದ ರಶ್ಮಿಕಾ ಬಾಕ್ಸ್ ಆಫೀಸ್‌ ಲೆಕ್ಕಾಚಾರಕ್ಕೆ ಸೀತಾ ರಾಮಂ ಸೇರಿಲ್ಲ ಎಂದು ಕೆಲ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಹೇಳಿದರೆ ಇನ್ನೂ ಕೆಲ ಮಂದಿ ಈ ಚಿತ್ರವನ್ನೂ ಸಹ ಪರಿಗಣಿಸಬಹುದು ಎನ್ನುತ್ತಾರೆ.

  English summary
  Rashmika Mandanna starrer films failed to cross 25 crores at box office in 2022. Read on
  Saturday, November 12, 2022, 16:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X