For Quick Alerts
  ALLOW NOTIFICATIONS  
  For Daily Alerts

  ಅಂದು 'ಮಿಸ್ಟರ್ ಶೋ ಆಫ್' ಎಂದಿದ್ದ ರಶ್ಮಿಕಾಗೀಗ ಯಶ್ ಜೊತೆ ಕೆಲಸ ಮಾಡೋ ಆಸೆ: ಈಡೇರುತ್ತಾ?

  |

  ದೇಶದ ಉದ್ದಗಲಕ್ಕೂ ರಶ್ಮಿಕಾ ಮಂದಣ್ಣ ಹೆಸರೇ ಓಡಾಡುತ್ತಿದೆ. ಒಮ್ಮೆ ವಿವಾದದಲ್ಲಿ ಸಿಕ್ಕಿಕೊಂಡರೆ ಮತ್ತೊಮ್ಮೆ ಭೇಷ್ ಎನಿಸಿಕೊಳ್ಳುತ್ತಾರೆ. ಹೊಸ ವರ್ಷದ ಹೊಸ್ತಿಲಲ್ಲಿ ರಶ್ಮಿಕಾ ಮತ್ತೊಂದು ಸಂದರ್ಶನ ನೀಡಿದ್ದಾರೆ. ಇದರಲ್ಲಿ ರಾಕಿ ಭಾಯ್ ಯಶ್ ಬಗ್ಗೆನೂ ಮಾತಾಡಿದ್ದಾರೆ.

  ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಜೊತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ತೆಲುಗು, ತಮಿಳು ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ರಾಮ್ ಚರಣ್, ಯಶ್, ಪ್ರಭಾಸ್ ಜೊತೆನೂ ನಟಿಸೋ ಆಸೆ ವ್ಯಕ್ತಪಡಿಸಿದ್ದಾರೆ.

  " ಪಬ್ಲಿಕ್ ಫಿಗರ್ ಅಂದ್ಮೇಲೆ ಹಾರ, ಮೊಟ್ಟೆ ಎಲ್ಲಾ ಬೀಳುತ್ತೆ.. ಎಚ್ಚರಿಕೆ ಇರ್ಬೇಕು": ರಶ್ಮಿಕಾಗೆ ಕಿಚ್ಚನ ಬುದ್ಧಿಮಾತು

  ರಾಕಿ ಭಾಯ್ ಜೊತೆನೂ ಸಿನಿಮಾ ಮಾಡ್ಬೇಕು ಅಂದಿರೋ ಸಂದರ್ಶನವೀಗ ವೈರಲ್ ಆಗುತ್ತಿದೆ. ಈ ಹಿಂದೆ ರಾಕಿ ಭಾಯ್ ಯಶ್ ಬಗ್ಗೆ ರಶ್ಮಿಕಾ ಕೊಟ್ಟ ಹೇಳಿಕೆ ಕೂಡ ಚರ್ಚೆಗೆ ಬಂದಿದೆ. ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದಿದ್ದೇನು? ಅಂದು ಏನಂದಿದ್ರು? ಇಂದು ಏನಂತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  "ಯಶ್ ಸರ್ ಜೊತೆ ಕೆಲಸ ಮಾಡ್ಬೇಕು"

  ಹೊಸ ವರ್ಷವನ್ನು ರಶ್ಮಿಕಾ ಮಂದಣ್ಣ ಶುಭಾರಂಭ ಮಾಡಿದ್ದಾರೆ. ಗುಲ್ಟೆ ವೆಬ್‌ ಸೈಟ್‌ಗೆ ರಶ್ಮಿಕಾ ಮಂದಣ್ಣ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ದಕ್ಷಿಣ ಭಾರತದ ಪ್ರಮುಖ ಸ್ಟಾರ್ ನಟರೊಂದಿಗೆ ಕೆಲಸ ಮಾಡ್ಬೇಕು ಅಂತ ಆಸೆ ಪಟ್ಟಿದ್ದಾರೆ. ಯಶ್ ಜೊತೆನೂ ಕೆಲಸ ಮಾಡೋ ಆಸೆಯಿಂದೆ ಅಂತ ಹೇಳಿದ್ದಾರೆ. "ನನಗೆ ಬಹಳಷ್ಟು ಜನರೊಂದಿಗೆ ಕೆಲಸ ಮಾಡಬೇಕು ಅಂತ ಆಸೆಯಿದೆ. ರಾಮ್‌ ಚರಣ್ ಸರ್ ಜೊತೆ ಕೆಲಸ ಮಾಡುವ ಆಸೆಯಿದೆ. ಪ್ರಭಾಸ್ ಸರ್ ಜೊತೆ ಕೆಲಸ ಮಾಡಬೇಕು. ಬನ್ನಿ (ಅಲ್ಲು ಅರ್ಜುನ್) ಸರ್ ಜೊತೆ ಕೆಲಸ ಮಾಡುತ್ತಿದ್ದೇನೆ. ನನಗೆ ಖಂಡಿತವಾಗಿಯೂ ಯಶ್‌ ಸರ್ ಜೊತೆ ಕೆಲಸ ಮಾಡಬೇಕು. ಹಾಗೇ ದುಲ್ಖರ್ ಸಲ್ಮಾನ್ ಜೊತೆ ಕೆಲಸ ಮಾಡಬೇಕು." ಎಂದು ಹೇಳಿದ್ದಾರೆ.

  ಯಶ್ 'ಮಿಸ್ಟರ್ ಶೋ ಆಫ್' ಎಂದಿದ್ದ ರಶ್ಮಿಕಾ

  ಯಶ್ 'ಮಿಸ್ಟರ್ ಶೋ ಆಫ್' ಎಂದಿದ್ದ ರಶ್ಮಿಕಾ

  ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿಯೇ ರಶ್ಮಿಕಾ ಮಂದಣ್ಣ ವಿವಾದಕ್ಕೆ ಸಿಕ್ಕಿಕೊಂಡಿದ್ದರು. ಇಂತಹದ್ದೇ ಸಂದರ್ಶನವೊಂದರಲ್ಲಿ ನಿರೂಪಕರು ಕನ್ನಡದಲ್ಲಿ ಶೋ ಆಫ್ ನಟ ಯಾರು? ಅಂತ ಕೇಳಿದ್ದರು. ಅದಕ್ಕೆ ರಶ್ಮಿಕಾ ಮಂದಣ್ಣ ಯಶ್ ಹೆಸರು ಎತ್ತಿದ್ದರು. ಇದು ರಾಕಿಂಗ್ ಸ್ಟಾರ್ ಅಭಿಮಾನಿಗಳ ನಿದ್ದೆ ಕಡೆಸಿತ್ತು. ಈ ಸಂಬಂಧ ರಶ್ಮಿಕಾ ಮಂದಣ್ಣ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಯಶ್ ಕೂಡ ರಿಯಾಕ್ಟ್ ಮಾಡಿದ್ದರು.

  ಯಶ್ ನೀಡಿದ್ದ ಪ್ರತಿಕ್ರಿಯೆ ಏನು?

  ಯಶ್ ನೀಡಿದ್ದ ಪ್ರತಿಕ್ರಿಯೆ ಏನು?

  ರಶ್ಮಿಕಾ ಮಂದಣ್ಣ 'ಮಿಸ್ಟರ್ ಶೋ ಆಫ್' ಯಶ್ ಎನ್ನುತ್ತಿದ್ದಂತೆ ರಾಕಿಂಗ್ ಸ್ಟಾರ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಆ ವೇಳೆ ಯಶ್ ಮಧ್ಯ ಪ್ರವೇಶ ಮಾಡಿ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿ ಪ್ರಕರಣವನ್ನು ಶಾಂತಗೊಳಿಸಿದ್ದರು. " ನಾನೊಬ್ಬ ನಟನಾಗಿ ನಿಮ್ಮ ಪ್ರೀತಿ ಮತ್ತು ಅಭಿಮಾನ ಸಂಪಾದಿಸುವುದಷ್ಟೇ ಗುರಿಯಾಗಿಟ್ಟುಕೊಂಡಿದ್ದೇನೆ. ಆ ನಿಟ್ಟಿನಲ್ಲಿಯೇ ನಾನು ಕೆಲಸ ಮಾಡುತ್ತಿದ್ದೇನೆ. ಕೆಲವೊಮ್ಮೆ ಎದುರಾಗುವ ಇಂತಹ ಅನಗತ್ಯ ವಿಷಯಗಳನ್ನು ನಿರ್ಲ್ಯಕ್ಷಿಸುವ ಸ್ವಭಾವವನ್ನು ಬೆಳೆಸಿಕೊಂಡಿದ್ದೇನೆ. ಕೆಲವೊಮ್ಮೆ ನನ್ನನ್ನು ಪ್ರೀತಿಸುವ ಮನಸ್ಸುಗಳಿಗೆ ನೋವಾದಾಗ ಪ್ರತಿಕ್ರಿಯೆ ನೀಡದೆ ಇರೋದು ಸಾಧ್ಯವಿಲ್ಲ. ರಶ್ಮಿಕಾ ಅವರು ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ. ಇದುವರೆಗೂ ಅವರನ್ನೂ ಭೇಟಿ ಮಾಡಿಲ್ಲ. ಮಾತು ಕೂಡ ಆಡಿಲ್ಲ. ಹಾಗಂದ ಮಾತ್ರಕ್ಕೆ ರಶ್ಮಿಕಾಗೆ ನನ್ನ ಬಗ್ಗೆ ಇಂತಹ ಅಭಿಪ್ರಾಯ ಇರಬಾರದಂತೇನೂ ಇಲ್ಲ. ಅವರ ಅಭಿಪ್ರಾಯ ಅವರದ್ದು. ಅದನ್ನು ಹೀಯಾಳಿಸುವ ಕೆಲಸ ಯಾರೂ ಮಾಡಬೇಡಿ." ಎಂದು ಯಶ್ ಹೇಳಿದ್ದರು.

  'ವಾರಿಸು' ಸಿನಿಮಾ ಬಿಡುಗಡೆಗೆ ಸಿದ್ಧತೆ

  'ವಾರಿಸು' ಸಿನಿಮಾ ಬಿಡುಗಡೆಗೆ ಸಿದ್ಧತೆ

  ರಶ್ಮಿಕಾ ಮಂದಣ್ಣ ಸದ್ಯ ದಳಪತಿ ವಿಜಯ್ ಜೊತೆ 'ವಾರಿಸು' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಸಂದರ್ಶನ ನೀಡುತ್ತಿದ್ದು, ಈ ವೇಳೆ ರಶ್ಮಿಕಾ ಮಂದಣ್ಣ 'ಕೆಜಿಎಫ್' ಸ್ಟಾರ್ ರಾಕಿ ಭಾಯ್ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

  English summary
  Rashmika Mandanna Wants to Work With Yash; Will Fans Forgive Her Show-Off Statement?, Know More.
  Wednesday, January 4, 2023, 14:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X