For Quick Alerts
  ALLOW NOTIFICATIONS  
  For Daily Alerts

  ಅಸಭ್ಯವಾಗಿ ಕಮೆಂಟ್ ಮಾಡಿದವರಿಗೆ ಮಾತಿನಲ್ಲೇ ಚಾಟಿ ಬೀಸಿದ ರಶ್ಮಿಕಾ

  By Pavithra
  |
  ಕೆಟ್ಟದಾಗಿ ಮಾತನಾಡಿದ್ದಕ್ಕೆ ಕ್ಲಾಸ್ ತೆಗೆದುಕೊಂಡ ರಶ್ಮಿಕಾ ಮಂದಣ್ಣ..! | Filmibeat Kannada

  'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ 'ಚಮಕ್' ಕೊಡುತ್ತಾ ಕರ್ನಾಟಕ ಕ್ರಶ್ ಅಂತಾನೇ ಪ್ರಖ್ಯಾತಿ ಪಡೆದುಕೊಂಡ ನಟಿ ರಶ್ಮಿಕಾ ಮಂದಣ್ಣ. ಅಭಿನಯ ಮಾಡಿದ ಮೊದಲ ಸಿನಿಮಾದಿಂದಲೇ ಸಾಕಷ್ಟು ಅಭಿಮಾನಿಗಳನ್ನ ಸಂಪಾದನೆ ಮಾಡಿಕೊಂಡ ಕೊಡಗಿನ ಕುವರಿ ಸದ್ಯ ಟಾಲಿವುಡ್ ನಲ್ಲಿಯೂ ಸಖತ್ ಬೇಡಿಕೆಯ ನಟಿ.

  ಕನ್ನಡದಲ್ಲಿ 'ಯಜಮಾನ', 'ವೃತ್ತ' ಚಿತ್ರಗಳಲ್ಲಿ ಅಭಿನಯ ಮಾಡುತ್ತಿರುವ ರಶ್ಮಿಕಾ, ಟಾಲಿವುಡ್ ಅಂಗಳದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ರಶ್ಮಿಕಾ ಅಭಿನಯದ 'ಗೀತ ಗೋವಿಂದಂ' ಸಿನಿಮಾ ಎಲ್ಲೆಡೆ ಸುದ್ದಿ ಮಾಡುತ್ತಿದೆ.

  ಅನಿಲ್ ಕಪೂರ್ ಜೊತೆ ಹೆಜ್ಜೆ ಹಾಕಿದ ರಶ್ಮಿಕಾ ಮಂದಣ್ಣ ಅನಿಲ್ ಕಪೂರ್ ಜೊತೆ ಹೆಜ್ಜೆ ಹಾಕಿದ ರಶ್ಮಿಕಾ ಮಂದಣ್ಣ

  ಚಿತ್ರದ ಪೋಸ್ಟರ್ ಮತ್ತು ಹಾಡುಗಳು ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸುವಂತೆ ಮಾಡುತ್ತಿವೆ. ಇತ್ತೀಚಿಗಷ್ಟೆ ನಟಿ ರಶ್ಮಿಕಾ ಮಂದಣ್ಣ 'ಗೀತ ಗೋವಿಂದಂ' ಸಿನಿಮಾದ ಪೋಸ್ಟರ್ ಮತ್ತು ಟೀಸರ್ ಅನ್ನು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದರು. ಕೆಲವರು ಪೋಸ್ಟರ್ ನೋಡಿ ಅಸಭ್ಯವಾಗಿ ಕಮೆಂಟ್ ಮಾಡಿದ್ದಾರೆ. ಇದರಿಂದ ಕೋಪಗೊಂಡ 'ಚಮಕ್' ಚೆಲುವೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ. ಹಾಗಾದರೆ ರಶ್ಮಿಕಾ ಮಾಡಿರುವ ಕಮೆಂಟ್ ಗಳೇನು? ಇಲ್ಲಿದೆ ಮಾಹಿತಿ. ಮುಂದೆ ಓದಿ

  ಮಾತಿನಲ್ಲೇ ಚಾಟಿ ಏಟು ಕೊಟ್ಟ ಚಮಕ್ ಬೆಡಗಿ

  ಮಾತಿನಲ್ಲೇ ಚಾಟಿ ಏಟು ಕೊಟ್ಟ ಚಮಕ್ ಬೆಡಗಿ

  ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸುಮ್ಮನೆ ತರ್ಲೆ ಮಾಡುವವರಿಗೆ ಕಮೆಂಟ್ ಮೂಲಕವೇ ಬುದ್ದಿ ಕಲಿಸಿದ್ದಾರೆ. ವಯಕ್ತಿಕ ವಿಚಾರದ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ ಎನ್ನುವುದನ್ನು ತಮ್ಮದೇ ಸ್ಟೈಲ್ ನಲ್ಲಿ ಹೇಳಿದ್ದಾರೆ.

  ರಕ್ಷಿತ್ ಮರ್ಯಾದೆ ಹೋಗುತ್ತಿದೆಯಂತೆ

  ರಕ್ಷಿತ್ ಮರ್ಯಾದೆ ಹೋಗುತ್ತಿದೆಯಂತೆ

  ರಶ್ಮಿಕಾ, 'ಗೀತ ಗೋವಿಂದಂ' ಸಿನಿಮಾದ ಪೋಸ್ಟರ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದರು. ಅದಕ್ಕೆ ಸಾಕಷ್ಟು ಜನರು ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ. ನೀವು ಇಂತಹ ಪಾತ್ರ ಮಾಡುವುದರಿಂದ ರಕ್ಷಿತ್ ಶೆಟ್ಟಿ ಮರ್ಯಾದೆ ಹೋಗುತ್ತಿದೆ ಎಂದಿದ್ದಾರೆ. ಇದರಿಂದ ಕೋಪಗೊಂಡಿರುವ 'ಚಮಕ್' ಬೆಡಗಿ ತಮ್ಮ ಸ್ಟೈಲ್ ನಲ್ಲಿ ಉತ್ತರಿಸಿದ್ದಾರೆ.

  ನಮ್ಮ ಕೆಲಸ ನಾವು ಮಾಡಿದ್ದೇವೆ

  ನಮ್ಮ ಕೆಲಸ ನಾವು ಮಾಡಿದ್ದೇವೆ

  ಕಮೆಂಟ್ ಗಳಿಗೆ ಉತ್ತರಿಸಿರುವ ರಶ್ಮಿಕಾ ಮಂದಣ್ಣ, "ನಾವು ತೆರೆ ಮೇಲೆ ಕಲಾವಿದರು, ನಮ್ಮ ಕೆಲಸವನ್ನು ನಾನು ಅಚ್ಚುಕಟ್ಟಾಗಿ ಮಾಡಿದ್ದೇವೆ. ನನ್ನ ಸಿನಿಮಾ ಕೆಟ್ಟದಾಗಿದೆ ಎಂದು ನಿಮ್ಮ ಅಭಿಪ್ರಾಯ ಆದರೆ ನನಗೆ ಬೇಸರವಿಲ್ಲ. ಆದರೆ ನನ್ನ ವಯಕ್ತಿಕ ವಿಚಾರದ ಬಗ್ಗೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ" ಎಂದಿದ್ದಾರೆ.

  ನಾನು ಮತ್ತು ವಿಜಯ್ ಸ್ನೇಹಿತರು

  ನಾನು ಮತ್ತು ವಿಜಯ್ ಸ್ನೇಹಿತರು

  ನಾನು ಮತ್ತು ವಿಜಯ್ ದೇವರಕೊಂಡ ಇಬ್ಬರು ಒಳ್ಳೆ ಸ್ನೇಹಿತರು. ನನ್ನ ಸಿನಿಮಾದ ಪೋಸ್ಟರ್ ಆಗಿರುವ ಕಾರಣ ನಾನು ಅದನ್ನು ಅಪ್ಲೋಡ್ ಮಾಡಬೇಕಾಗಿದೆ ಅಷ್ಟೇ. ನಿಮಗೆ ಇಷ್ಟವಾಗಿಲ್ಲ ಎಂದರೆ ಬಿಟ್ಟುಬಿಡಿ. ಬೇರೆ ರೀತಿ ಕಮೆಂಟ್ ಮಾಡುವುದನ್ನು ನಿಲ್ಲಿಸಿ. ಎಂದು ಉತ್ತರ ನೀಡಿದ್ದಾರೆ.

  English summary
  Kannada actress Rashmika Mandanna starrings Geetha Govindam film posters receive negative comments in social media. Rashmika says, Nobody has the power to talk about my personal issues,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X