Just In
Don't Miss!
- Sports
ಐಪಿಎಲ್ 2021: ಎಲ್ಲಾ 8 ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಸಂಪೂರ್ಣ ಪಟ್ಟಿ
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಪಶ್ಚಿಮ ಬಂಗಾಳದಲ್ಲಿ ಮತ್ತೆ ಮತ್ತೆ ಮೊಳಗಿದ 'ಗೋಲಿ ಮಾರೋ' ಘೋಷಣೆ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಖಿಲ್ ಕುಮಾರಸ್ವಾಮಿ ಮದುವೆ ಟೀಕಿಸಿ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದ ರವೀನಾ ಟಂಡನ್
ನಟಿ ರವೀನಾ ಟಂಡನ್ ಇದ್ದಕ್ಕಿದ್ದಂತೆ ತಮ್ಮ ಟ್ವೀಟ್ ಒಂದನ್ನು ಡಿಲೀಟ್ ಮಾಡಿದ್ದಾರೆ. ಅದೊಂದು ಸಾಮಾನ್ಯ ಟ್ವೀಟ್ ಆಗಿದ್ದರೆ ಅಚ್ಚರಿ ಇರುತ್ತಿರಲಿಲ್ಲ, ಬದಲಿಗೆ ಅವರು ಡಿಲೀಟ್ ಮಾಡಿರುವುದು ನಿಖಿಲ್ ಕುಮಾರಸ್ವಾಮಿ ವಿರುದ್ಧ ಮಾಡಿದ್ದ ಟ್ವೀಟ್.
ನಿಖಿಲ್ ಕುಮಾರಸ್ವಾಮಿ-ರೇವತಿ ಮದುವೆ ಸಮಾರಂಭ ಇಂದು ನಡೆದಿದೆ. ಕೊರೊನಾ ಕಾರಣದಿಂದ ಕೆಲವೇ ಮಂದಿ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಸಮಾರಂಭ ಮಾಡಲಾಗಿದೆ.
ನಿಖಿಲ್-ರೇವತಿ ಮದುವೆ ಬಗ್ಗೆ ನಟಿ ರವೀನಾ ಟಂಡನ್ ಅಸಮಾಧಾನ
ಈ ಬಗ್ಗೆ ಟ್ವೀಟ್ ಮಾಡಿದ್ದ ರವೀನಾ ಟಂಡನ್, ಮದುವೆ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂಥಹಾ ಸಮಯದಲ್ಲಿ ಸಂಭ್ರಮದ ಆಚರಣೆಗಳ ಬಗ್ಗೆ ತಕರಾರು ಅವರ ಟ್ವೀಟ್‌ನಲ್ಲಿ ಇಣುಕುತ್ತಿತ್ತು. ಆದರೆಕೋ ಅವರು ಟ್ವೀಟ್ ಅನ್ನೇ ಡಿಲೀಟ್ ಮಾಡಿಬಿಟ್ಟಿದ್ದಾರೆ.

ರವೀನಾ ಮಾಡಿದ್ದ ಟ್ವೀಟ್ ಇದು
ದೇಶದ ಬಹುತೇಕ ಜನ ಹಸಿವಿನಿಂದ ಒದ್ದಾಡುತ್ತಿದ್ದಾರೆ, ಕೋಟ್ಯಂತರ ಮಂದಿ ತಮ್ಮ ಕುಟುಂಬವನ್ನೂ ತಲುಪಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ ಎಂಬುದು ಕೆಲ ಬಡ ಆತ್ಮಗಳಿಗೆ ಅರ್ಥವೇ ಆಗಿಲ್ಲ ಎಂದು ರವೀನಾ ಟಂಡನ್ ಅಸಮಾಧಾನ ಹೊರಹಾಕಿದ್ದರು.

ಸಂಭ್ರಮಾಚರಣೆಯ ಸಮಯ ಅಲ್ಲ ಎಂದಿದ್ದ ರವೀನಾ
ಮುಂದುವರೆದು, ಇವರು ಸಂಭ್ರಮದ ಆಚರಣೆಯಲ್ಲಿ ತೊಡಗಿದ್ದಾಗ ಉಳಿದವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದಿರುವ ರವೀನಾ, ''ಅಂದಹಾಗೆ ವಿವಾಹ ಭೋಜನಕ್ಕೆ ಏನೇನು ಅಡುಗೆ ಮಾಡಿಸಿದ್ದರು ಎಂಬ ಕುತೂಹಲವಿದೆ'' ಎಂದು ವ್ಯಂಗ್ಯವಾಡಿದ್ದರು. ಆದರೆ ಈಗ ಏಕಾ-ಏಕಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.
ನಿಖಿಲ್ ಮದುವೆಯಲ್ಲಿ ಸಾಮಾಜಿಕ ಅಂತರ, ಲಾಕ್ಡೌನ್ ನಿಯಮ ಉಲ್ಲಂಘನೆ?

ಏಕಾ-ಏಕಿ ಟ್ವೀಟ್ ಏಕೆ ಡಿಲೀಟ್ ಮಾಡಿದರು?
ರವೀನಾ ಟಂಡನ್ ಹೀಗೆ ಏಕಾ-ಏಕಿ ಟ್ವೀಟ್ ಡಿಲೀಟ್ ಮಾಡಿದ್ದಕ್ಕೆ ಕಾರಣ ಗೊತ್ತಾಗಿಲ್ಲ. ನಿಖಿಲ್ ಕುಮಾರಸ್ವಾಮಿ ಸಹ ಸಿನಿಮಾ ಉದ್ಯಮಕ್ಕೆ ಸೇರಿದವರು ಎಂದು ತಿಳಿದು ಟ್ವೀಟ್ ಡಿಲೀಟ್ ಮಾಡಿದರೆ ಎಂಬ ಅನುಮಾನ ಎದ್ದಿದೆ.

ಸರ್ಕಾರದ ಮಾರ್ಗಸೂಚಿಯಂತೆ ಮದುವೆ: ಎಚ್‌ಡಿಕೆ
ಮದುವೆ ಸಮಾರಂಭದ ನಂತರ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ, ಸರ್ಕಾರದ ಮಾರ್ಗಸೂಚಿ ಅನ್ವಯ ಸರಳವಾಗಿ, ಕಡಿಮೆ ಮಂದಿಯ ಉಪಸ್ಥಿತಿಯಲ್ಲಿ ಮದುವೆ ಮಾಡಿದ್ದೇವೆ ಎಂದು ಟ್ವೀಟ್ ಮಾಡಿದ್ದರು. ಸರ್ಕಾರದ ಅನುಮತಿ ಪಡೆದು ವಿವಾಹ ನಡೆಸಿದ್ದಾರೆಂದು ತಿಳಿದು ತಮ್ಮ ಟೀಕಾತ್ಮಕ ಟ್ವೀಟ್ ಅನ್ನು ರವೀನಾ ಟಂಡನ್ ಡಿಲೀಟ್ ಮಾಡಿರುವ ಸಂಭವವೂ ಇದೆ.
ಲಾಕ್ಡೌನ್ ನಡುವೆ ಮಗ ನಿಖಿಲ್ ಸರಳ ಮದುವೆ: ಕುಮಾರಸ್ವಾಮಿ ಹೇಳಿದ್ದೇನು?

ಕೆಜಿಎಫ್ 2 ನಲ್ಲಿ ಪವರ್‌ಫುಲ್ ಪಾತ್ರದಲ್ಲಿ ರವೀನಾ
ಇನ್ನು, ರವೀನಾ ಟಂಡನ್, ಕೆಜಿಎಫ್ 2 ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರ ಭಾಗದ ದೃಶ್ಯಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ ಎನ್ನಲಾಗುತ್ತಿದೆ. ಯಶ್ ಮತ್ತು ರವೀನಾ ಒಟ್ಟಿಗೆ ನಟಿಸಿರುವ ದೃಶ್ಯದ ಚಿತ್ರ ವೈರಲ್ ಆಗಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್-ರೇವತಿಗೆ ಶುಭಹಾರೈಸಿದ ಸ್ಯಾಂಡಲ್ ವುಡ್ ಸ್ಟಾರ್ಸ್