'ಕಿಚ್ಚ ಸುದೀಪ್ ಗೆ ನಾಚಿಕೆ ಜಾಸ್ತಿ': ಹಿರಿಯ ಪತ್ರಕರ್ತ ರವಿ ಬೆಳಗೆರೆ

Recommended Video

Ravi belagere and Sudeep released a book | FILMIBEAT KANNADA

ಅಭಿನಯ ಚಕ್ರವರ್ತಿ ಕಿಚ್ಟ ಸುದೀಪ್ ಮತ್ತು ರವಿ ಬೆಳಗೆರೆ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕಾರ್ಯಕ್ರಮದ ನಂತರ ಸುದೀಪ್ ಮತ್ತು ರವಿ ಬೆಳಗೆರೆ ಇಬ್ಬರು ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಕಿಚ್ಚ ಸುದೀಪ್ ಕಾಲೆಳೆದು ತಮಾಷೆ ಮಾಡಿದ್ದಾರೆ.

ಇತ್ತೀಚಿಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಬರೆದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ರವಿಬೆಳಗೆರೆ, ಕಿಚ್ಚ ಸುದೀಪ್ ಮತ್ತು ನಟಿ ತಾರಾ ಗೆಸ್ಟ್ ಆಗಿ ಆಮಿಸಿದ್ದರು. ಈ ಸಮಯದಲ್ಲಿ ರವಿ ಬೆಳಗೆರೆ ಸುದೀಪ್ ಬಗ್ಗೆ ಮಾತನಾಡುತ್ತ "ಕಿಚ್ಚ ಸುದೀಪ್ ಗೆ ನಾಚಿಕೆ ಜಾಸ್ತಿ. ಅದರಲ್ಲೂ ಗಂಡಸರ ಮದ್ಯೆ ಇದರೆ ಜಾಸ್ತಿನೇ ನಾಚಿಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.

ರವಿ ಬೆಳಗೆರೆ ಮಾತಿಗೆ ಪ್ರತಿಯಾಗಿ ಸುದೀಪ್ "ಹುಡುಗಿಯರ ಹತ್ತಿರ ನಾಚಿಕೆ ಮಾಡಿಕೊಂಡರೆ ಆಗೋ ಕೆಲಸ ಆಗುವುದಿಲ್ಲ. ಇದನ್ನ ರವಿ ಬೆಳಗೆರೆ ಅವರೆ ಚಿಕ್ಕ ವಯಸ್ಸಿನಲ್ಲಿ ಹೇಳಿಕೊಟ್ಟಿದ್ದಾರೆ" ಎಂದು ಹೇಳಿ ತಮಾಷೆ ಮಾಡಿದ್ರು. ನಂತರ ಪುಸ್ತಕದ ಬಗ್ಗೆ ಮಾತನಾಡಿದ ಸುದೀಪ್ ಬರವಣಿಗೆ ಒಂದು ಕಲೆಯಾದರೆ ಓದುವುದು ಕೂಡ ಕಲೆ ಎಂದು ಹೇಳಿದರು.

Ravi Belagere And Sudeep Released Book Written By Ganesh Kasaragod

ಸುದೀಪ್ ಸದ್ಯ ಕೋಟಿಗೊಬ್ಬ-3 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಮುಂದಿನ ತಿಂಗಳಿಂದ ಅನೂಪ್ ಭಂಡಾರಿ ನಿರ್ದೇಶನದ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಎದುರು ವಿಲನ್ ಆಗಿ ಅಬ್ಬರಿಸಿರುವ ದಬಾಂಗ್-3 ಸಿನಿಮಾ ಮುಂದಿನ ತಿಂಗಳು 20ಕ್ಕೆ ತೆರೆಗೆ ಬರುತ್ತಿದೆ.

More from Filmibeat

English summary
Senior journalist Ravi belagere and Sudeep released book written by Ganesh Kasaragod.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X