»   » ಟಾಲಿವುಡ್ ಮಾಸ್ ಮಹಾರಾಜ ರವಿತೇಜಾ ಕನ್ನಡಕ್ಕೆ!

ಟಾಲಿವುಡ್ ಮಾಸ್ ಮಹಾರಾಜ ರವಿತೇಜಾ ಕನ್ನಡಕ್ಕೆ!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ' ಚಿತ್ರದ ''ಬಾಸು ನಮ್ ಬಾಸು....'' ಹಾಡನ್ನ ಹೇಗೆ ತಾನೆ ಮರೆಯೋಕೆ ಸಾಧ್ಯ ಹೇಳಿ...ವರ್ಷದ ಹಿಟ್ ಲಿಸ್ಟ್ ನಲ್ಲಿ ನಂಬರ್ ಒನ್ ಆಗಿದ್ದ ಈ ಹಾಡಲ್ಲಿ, ಶಿವಣ್ಣನ ಜೊತೆ ಶ್ರೀಮುರುಳಿ, ವಿಜಯ್ ರಾಘವೇಂದ್ರ, ಆದಿತ್ಯ, ಶ್ರೀನಗರ ಕಿಟ್ಟಿ, ಲೂಸ್ ಮಾದ ಯೋಗಿ, ನೀನಾಸಂ ಸತೀಶ್ ಕುಣಿದು ಕುಪ್ಪಳಿಸಿದ್ದರು.

ಈ ಹಾಡಿನ ಕಥೆ ಈಗ ಯಾಕೆ ಅಂದ್ರೆ, ಇದೇ ಹಾಡಿನಂತೆ 'ವಜ್ರಕಾಯ' ಚಿತ್ರದಲ್ಲಿ ಶಿವಣ್ಣನ ಇಂಟ್ರೊಡಕ್ಷನ್ ಸಾಂಗ್ ಚಿತ್ರೀಕರಿಸಲಾಗುತ್ತಿದೆ. 'ಭಜರಂಗಿ' ಚಿತ್ರದಲ್ಲಿ ಶಿವಣ್ಣನಿಗೆ ಕನ್ನಡದ ಯುವ ನಟರು ಸಲಾಂ ಹೊಡೆದಿದ್ದರು. ಆದ್ರೆ, 'ವಜ್ರಕಾಯ' ಚಿತ್ರದಲ್ಲಿ ಕೊಂಚ ವಿಭಿನ್ನ.


Ravi Teja makes Sandalwood entry with Shivarajkumar's Vajrakaya

ಕನ್ನಡದ ಸೂಪರ್ ಹೀರೋ ಜೊತೆಗೆ ಪರಭಾಷಾ ನಟರು ಶಿವಣ್ಣನ ಜೊತೆ ಸ್ಪೆಪ್ ಹಾಕಲಿದ್ದಾರೆ. ಈಗಾಗಲೇ ನೀವು 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ ಹಾಗೆ, ಶಿವರಾಜ್ ಕುಮಾರ್ ಜೊತೆ ಕ್ರೇಜಿ ಸ್ಟಾರ್ ರವಿಚಂದ್ರನ್ ಡಾನ್ಸ್ ಮಾಡಿದ್ದಾರೆ. [ಶಿವಣ್ಣ-ಕ್ರೇಜಿಸ್ಟಾರ್ ಮತ್ತೆ ಒಂದಾಗೋ ಸಿನಿಮಾ ಬರ್ತಿದೆ]


ಇದೇ ಹಾಡಿನಲ್ಲಿ ಕಾಲಿವುಡ್ ನ ಧನುಷ್, ಶಿವಕಾರ್ತಿಕೇಯನ್, ಮಲೆಯಾಳಂನ ದಿಲೀಪ್ ಕುಮಾರ್ ಹೆಜ್ಜೆ ಹಾಕಲಿದ್ದಾರೆ. ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಇದೇ ಹಾಡಿಗೆ ಟಾಲಿವುಡ್ ನ 'ಮಾಸ್ ಮಹಾರಾಜ' ರವಿತೇಜಾ ಕೂಡ ಲುಂಗಿ ಡಾನ್ಸ್ ಮಾಡಲಿದ್ದಾರೆ. [ಕನ್ನಡಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್]


Ravi Teja makes Sandalwood entry with Shivarajkumar's Vajrakaya

ಹೌದು, ''ವಜ್ರಕಾಯ' ಶಿವಣ್ಣನ ಸಿನಿಮಾ. ಅವರ ಇಂಟ್ರೊಡಕ್ಷನ್ ಸಾಂಗ್ ನಲ್ಲಿ ನೀವೊಂದು ಡಾನ್ಸ್ ಮಾಡಬೇಕು'' ಅಂತ ನಿರ್ಮಾಪಕರು ರವಿತೇಜಾ ರನ್ನ ಕೇಳಿದ ತಕ್ಷಣ, ಹಿಂದು ಮುಂದು ನೋಡದೆ ರವಿತೇಜಾ ಒಪ್ಪಿಕೊಂಡಿದ್ದಾರೆ. ಆ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಎರಡನೇ ಬಾರಿ ಕಾಲಿಡಲಿದ್ದಾರೆ ರವಿತೇಜಾ.


ವರ್ಷಗಳ ಹಿಂದೆ 'ವಂದೇ ಮಾತರಂ' ಅನ್ನುವ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ರವಿತೇಜಾ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಟಾಲಿವುಡ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದ ರವಿತೇಜಾ, ಇದೀಗ 'ವಜ್ರಕಾಯ' ಮೂಲಕ ಶಿವಣ್ಣ ಜೊತೆ ಪರದೆ ಹಂಚಿಕೊಳ್ಳುತ್ತಿದ್ದಾರೆ.


ಈಗಾಗಲೇ ರವಿತೇಜಾ ಜೊತೆ ಚಿತ್ರತಂಡ ಮಾತುಕತೆ ನಡೆಸಿದ್ದು, ಚಿತ್ರೀಕರಣದ ದಿನಾಂಕ ಫೈನಲ್ ಆಗಬೇಕಿದೆ. ಹೇಳಿ ಕೇಳಿ 'ವಜ್ರಕಾಯ' ನಿರ್ದೇಶಕ ಹರ್ಷ. ಅಂದ್ಮೇಲೆ ಹಾಡು, ನೃತ್ಯದ ಬಗ್ಗೆ ಕೆಮ್ಮಂಗಿರುವುದಿಲ್ಲ. [ಕನ್ನಡ ಹಾಡು ಹಾಡಲು ನಟ ಧನುಷ್ ಗೆ ರು. 4 ಲಕ್ಷ ]

Ravi Teja makes Sandalwood entry with Shivarajkumar's Vajrakaya

ಪರಭಾಷಾ ನಟರನ್ನೆಲ್ಲಾ ಒಂದೇ ಹಾಡಲ್ಲಿ ಗುಡ್ಡೆ ಹಾಕಿ, ಹರ್ಷ 'ವಜ್ರಕಾಯ' ಚಿತ್ರದಲ್ಲಿ ವಿಭಿನ್ನ ಪ್ರಯೋಗ ಮಾಡಿದ್ದಾರೆ. ಅದನ್ನ ತೆರೆಮೇಲೆ ನೋಡೋಕೆ ಸ್ವಲ್ಪ ದಿನ ಕಾಯಿರಿ. (ಏಜೆನ್ಸೀಸ್)

English summary
After Dhanush, Sivakarthikeyan, its now Ravi Teja's turn. According to the reports in Gandhinagara, Tollywood Mass Maharaja Ravi Teja to make Sandalwood entry with Shivarajkumar's upcoming flick Vajrakaya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada