»   » ಅಲ್ಲು ಅರ್ಜುನ್ ಚಿತ್ರಕ್ಕೆ ಕನ್ನಡಿಗ ರವಿವರ್ಮಾ ಸಾಹಸ

ಅಲ್ಲು ಅರ್ಜುನ್ ಚಿತ್ರಕ್ಕೆ ಕನ್ನಡಿಗ ರವಿವರ್ಮಾ ಸಾಹಸ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಫೇವರಿಟ್ ಸ್ಟಂಟ್ ಮಾಸ್ಟರ್ ಆಗಿರುವ ರವಿವರ್ಮಾಗೆ ಟಾಲಿವುಡ್ ನಲ್ಲಿ ಡಿಮ್ಯಾಂಡ್ ಹೆಚ್ಚಾಗುತ್ತಿದೆ.

ಇತ್ತೀಚೆಗಷ್ಟೆ ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ಅಭಿನಯದ ಬಿಗ್ ಬಜೆಟ್ ಸಿನಿಮಾ 'ಅಖಿಲ್'ಗೆ ಮೈನವಿರೇಳಿಸುವ ಸಾಹಸ ಸಂಯೋಜನೆ ಮಾಡಿದ್ದ ರವಿವರ್ಮಾಗೆ ಇದೀಗ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ರಿಂದ ಬುಲಾವ್ ಬಂದಿದೆ. [ಫೈಟ್ ಮಾಸ್ಟರ್ ರವಿವರ್ಮ ಈಗ ನಾಯಕ ನಟ]

Ravi Varma to choreograph stunts for Allu Arjun

'ಸಿಂಹ', 'ಲೆಜೆಂಡ್', 'ದಮ್ಮು' ಚಿತ್ರಗಳ ಖ್ಯಾತಿಯ ಬೋಯಪಾಟಿ ಶ್ರೀನು ನಿರ್ದೇಶಿಸಲಿರುವ ಅಲ್ಲು ಅರ್ಜುನ್ ಮುಖ್ಯ ಭೂಮಿಕೆಯಲ್ಲಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ರವಿವರ್ಮಾ ಆಕ್ಷನ್ ಕೊರಿಯೋಗ್ರಫಿ ಮಾಡಲಿದ್ದಾರೆ. [ಸಲ್ಲು, ಶಾರುಖ್ ಗೆ ಸ್ಟಂಟ್ ಮಾಡಿಸೋ ಮಂಡ್ಯ ಹೈದ]

ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನಲ್ಲಿ ರವಿವರ್ಮಾ ಅವರ ಅಬ್ಬರದ ಆಕ್ಷನ್ ನೋಡಿ ಅಲ್ಲು ಅರ್ಜುನ್ ಮತ್ತು ಬೋಯಪಾಟಿ ಶ್ರೀನು ಇಂಪ್ರೆಸ್ ಆಗಿರುವ ಪರಿಣಾಮ ರವಿವರ್ಮಾಗೆ ಈ ಚಾನ್ಸ್ ಸಿಕ್ಕಿದೆ.

Ravi Varma to choreograph stunts for Allu Arjun

ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಅಭಿನಯದ 'ಜೈ ಹೋ', ಶಹೀದ್ ಕಪೂರ್ ನಟಿಸಿದ 'ರ್ಯಾಂಬೋ ರಾಜ್ ಕುಮಾರ್' ಚಿತ್ರಗಳಿಗೆ ರವಿವರ್ಮಾ ಸಾಹಸ ಸಂಯೋಜಿಸಿದ್ದರು. ಅಲ್ಲಿಂದ ಬಾಲಿವುಡ್ ನಲ್ಲಿ ರವಿವರ್ಮಾ ದಿ ಮೋಸ್ಟ್ ವಾಂಟೆಡ್ ಸ್ಟಂಟ್ ಮಾಸ್ಟರ್ ಆಗಿದ್ದಾರೆ. [ಪುನೀತ್-ಶಿವಣ್ಣ-ರಾಘಣ್ಣ ಚಿತ್ರಕ್ಕೆ ಮುಹೂರ್ತ ಫಿಕ್ಸ್..!]

ಇದೀಗ ಟಾಲಿವುಡ್ ನಲ್ಲಿ ಖಾತೆ ತೆರೆದಿರುವ ರವಿವರ್ಮಾ, ಇಲ್ಲೂ ಡಿಮ್ಯಾಂಡ್ ಹೆಚ್ಚಿಸಿಕೊಳ್ಳುವುದರಲ್ಲಿ ಡೌಟ್ ಬೇಡ.

English summary
Kannada Stunt Choreographer Ravi Varma to choreograph stunts for Tollywood Actor Allu Arjun's next. Tollywood Director Boyapati Srinu is directing Allu Arjun's next movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada