For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗಕ್ಕೆ ಬಂದೇ ಬಿಟ್ರಲ್ಲ ಬಾಲಿವುಡ್ ನಟ ವಿವೇಕ್ ಒಬೆರಾಯ್.!

  By Harshitha
  |
  ಬಾಲಿವುಡ್‌ನಿಂದ ಶಿವಣ್ಣನ ಅಡ್ಡಕ್ಕೆ ಬಂದ ವಿವೇಕ್...!! | Oneindia Kannada

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಸಿನಿಮಾದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡ ನಟಿಸಲಿದ್ದಾರೆ ಎಂಬ ಗುಸುಗುಸು ಮೊನ್ನೆಯಷ್ಟೇ ಹರಿದಾಡಿತ್ತು.

  ಈಗ ಅದೇ ಸುದ್ದಿ ನಿಜವಾಗಿದೆ. 'ರುಸ್ತುಂ' ಚಿತ್ರಕ್ಕಾಗಿ ವಿವೇಕ್ ಒಬೆರಾಯ್ ಗೆ ಬುಲಾವ್ ನೀಡಿರುವುದು ಪಕ್ಕಾ. 'ರುಸ್ತುಂ' ಮೂಲಕ ವಿವೇಕ್ ಒಬೆರಾಯ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ಕೂಡ ಅಷ್ಟೇ ಸತ್ಯ. ಅದಕ್ಕೆ ಸಾಕ್ಷಿ ಈ ಫೋಟೋಗಳು...

  ಇತ್ತೀಚೆಗಷ್ಟೇ ಬಾಲಿವುಡ್ ನಟ ವಿವೇಕ್ ಒಬೆರಾಯ್ ರನ್ನ 'ರುಸ್ತುಂ' ನಿರ್ದೇಶಕ ರವಿ ವರ್ಮಾ ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ತೆಗೆದ ಸೆಲ್ಫಿಯನ್ನ ಸ್ಟಂಟ್ ಮಾಸ್ಟರ್ ರವಿ ವರ್ಮಾ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿರಿ...

  ಸ್ಯಾಂಡಲ್ ವುಡ್ ಗೆ ವೆಲ್ ಕಮ್.!

  ''ಡಿಯರ್ ವಿವೇಕ್ ಒಬೆರಾಯ್, ಕನ್ನಡ ಚಿತ್ರರಂಗಕ್ಕೆ ನಿಮಗೆ ಆತ್ಮೀಯ ಸ್ವಾಗತ'' ಎಂದು 'ರುಸ್ತುಂ' ನಿರ್ದೇಶಕ ರವಿ ವರ್ಮಾ ಟ್ವೀಟ್ ಮಾಡಿದ್ದಾರೆ. ಅಲ್ಲಿಗೆ, ವಿವೇಕ್ ಒಬೆರಾಯ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡುತ್ತಿರುವುದು ಕನ್ಫರ್ಮ್ ಅಂತಲೇ ಲೆಕ್ಕ.

  ಶಿವಣ್ಣನ ಜೊತೆಗೆ ತೆರೆಹಂಚಿಕೊಳ್ತಾರೆ ಬಾಲಿವುಡ್ ನಟ.! ಯಾರದು.?ಶಿವಣ್ಣನ ಜೊತೆಗೆ ತೆರೆಹಂಚಿಕೊಳ್ತಾರೆ ಬಾಲಿವುಡ್ ನಟ.! ಯಾರದು.?

  ವಿವೇಕ್ ಒಬೆರಾಯ್ ಪಾತ್ರ ಏನು.?

  ವಿವೇಕ್ ಒಬೆರಾಯ್ ಪಾತ್ರ ಏನು.?

  'ರುಸ್ತುಂ' ಚಿತ್ರಕ್ಕೆ ವಿವೇಕ್ ಒಬೆರಾಯ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬುದಷ್ಟೇ ಸದ್ಯದ ಬ್ರೇಕಿಂಗ್ ನ್ಯೂಸ್. 'ರುಸ್ತುಂ' ಚಿತ್ರದಲ್ಲಿ ಅವರ ಪಾತ್ರ ಏನು ಎಂಬ ಗುಟ್ಟನ್ನ ನಿರ್ದೇಶಕ ರವಿ ವರ್ಮಾ ಬಿಟ್ಟುಕೊಟ್ಟಿಲ್ಲ.

  ಶಿವಣ್ಣನ 'ರುಸ್ತುಂ' ಅಡ್ಡದಲ್ಲಿ ಕಾಲಿವುಡ್ ಕಲಾವಿದಶಿವಣ್ಣನ 'ರುಸ್ತುಂ' ಅಡ್ಡದಲ್ಲಿ ಕಾಲಿವುಡ್ ಕಲಾವಿದ

  ಶಿವಣ್ಣ ಮಾತ್ರ ಪೊಲೀಸ್.!

  ಶಿವಣ್ಣ ಮಾತ್ರ ಪೊಲೀಸ್.!

  'ರುಸ್ತುಂ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದಾರೆ. ಶಿವಣ್ಣನಂತೆಯೇ ವಿವೇಕ್ ಒಬೆರಾಯ್ ಕೂಡ ಪೊಲೀಸ್ ಆಧಿಕಾರಿಯೋ ಇಲ್ಲ ಖತರ್ನಾಕ್ ಕೇಡಿಯೋ ಎಂಬುದಿನ್ನೂ ಖಚಿತ ಆಗಿಲ್ಲ.

  ಸದ್ಯದಲ್ಲೇ ಶೂಟಿಂಗ್ ಶುರು

  ಸದ್ಯದಲ್ಲೇ ಶೂಟಿಂಗ್ ಶುರು

  ಈಗಾಗಲೇ 'ರುಸ್ತುಂ' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ 'ರುಸ್ತುಂ' ಅಡ್ಡಕ್ಕೆ ವಿವೇಕ್ ಒಬೆರಾಯ್ ಸೇರಿಕೊಳ್ಳಲಿದ್ದಾರೆ. 'ರುಸ್ತುಂ' ಚಿತ್ರಕ್ಕೆ ಜಯಣ್ಣ ಬಂಡವಾಳ ಹಾಕುತ್ತಿದ್ದಾರೆ.

  ಬೆಂಗಳೂರು ಅಳಿಯ

  ಬೆಂಗಳೂರು ಅಳಿಯ

  ವಿವೇಕ್ ಒಬೆರಾಯ್ ಬಾಲಿವುಡ್ ನಟ ಇರಬಹುದು. ಆದ್ರೆ, ಅವರು ಬೆಂಗಳೂರಿನ ಅಳಿಯ. ರಾಜಕಾರಣಿ ಜೀವರಾಜ್ ಹಾಗೂ ನಂದಿನಿ ಆಳ್ವಾ ಪುತ್ರಿ ಪ್ರಿಯಾಂಕಾ ಆಳ್ವಾ ರನ್ನ ವಿವೇಕ್ ಒಬೆರಾಯ್ ಮದುವೆ ಆಗಿದ್ದಾರೆ. ಹೀಗಾಗಿ ಆಗಾಗ ವಿವೇಕ್ ಒಬೆರಾಯ್ ಬೆಂಗಳೂರಿಗೆ ಬರ್ತಾನೇ ಇರ್ತಾರೆ.

  English summary
  Stunt Master cum Director Ravi Varma welcomes Vivek Oberoi to Shiva Rajkumar's 'Rustom'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X