For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಗೆ ಅಪ್ಪನಾಗಿ ಕ್ರೇಜಿಸ್ಟಾರ್ ರವಿಚಂದ್ರನ್

  By Rajendra
  |

  ನಲ್ಲ ಮತ್ತು ಮಲ್ಲರ ಕಾಂಬಿನೇಷನ್ ನಲ್ಲಿ ಚಿತ್ರವೊಂದು ಬರುತ್ತಿರುವುದು ಗೊತ್ತೇ ಇದೆಯಲ್ಲಾ. ಇದೇ ಮೊಟ್ಟಮೊದಲ ಬಾರಿಗೆ ಕಿಚ್ಚ ಸುದೀಪ್ ಜೊತೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ಇನ್ನೂ ಹೆಸರಿಡ ಈ ಚಿತ್ರ ಆಗಸ್ಟ್ 12ರಂದು ಸೆಟ್ಟೇರುತ್ತಿದೆ.

  ಮೂಲಗಳ ಪ್ರಕಾರ, ಚಿತ್ರದಲ್ಲಿ ಸುದೀಪ್ ಅವರದು ಮಗನ ಪಾತ್ರವಾದರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಂದೆಯಾಗಿ ಕಾಣಿಸುತ್ತಿದ್ದಾರೆ. ಎಂಎನ್ ಕುಮಾರ್ ನಿರ್ಮಿಸುತ್ತಿರುವ ಚಿತ್ರದಲ್ಲಿ ಸುದೀಪ್ ಗೆ ಜೋಡಿಯಾಗಿ ಗೋಲ್ಡನ್ ಗರ್ಲ್ ರಮ್ಯಾ ನಟಿಸುವ ಸಾಧ್ಯತೆಗಳಿವೆ.

  ಅಂದಹಾಗೆ ಇದು ತೆಲುಗಿನ ಯಶಸ್ವಿ ಮಾಸ್ ಮಸಲಾ ಚಿತ್ರ 'ಮಿರ್ಚಿ' ರೀಮೇಕ್. ಮೂಲ ಚಿತ್ರದಲ್ಲಿ ಪ್ರಭಾಸ್, ಸತ್ಯರಾಜ್, ಅನುಷ್ಕಾ ಶೆಟ್ಟಿ, ರಿಚಾ ಗಂಗೋಪಾಧ್ಯಾಯ ಮುಂತಾದವರು ಅಭಿನಯಿಸಿದ್ದರು. ಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದ 'ಮಿರ್ಚಿ' ಚಿತ್ರ ಬಾಕ್ಸ್ ಆಫೀಸಲ್ಲಿ ರು.103 ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ.

  ಈ ಚಿತ್ರದ ಆಕ್ಷನ್ ಕಟ್ ಜೊತೆಗೆ ಕಥೆ, ಚಿತ್ರಕಥೆಯನ್ನೂ ಸುದೀಪ್ ಅವರೇ ಹೆಣೆದಿರುವುದು ವಿಶೇಷ. ಇಬ್ಬರು ಹೀರೋಗಳು ಎಂದ ಮೇಲೆ ನಾಯಕಿಯರೂ ಇಬ್ಬರು ಇರಲೇಬೇಕಲ್ಲವೆ? ಸುದೀಪ್ ಗೆ ಜೋಡಿ ಯಾರೆಂದು ಬಹುತೇಕ ಗೊತ್ತಾಗಿದೆ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿ ಹುಡುಕುವುದೇ ಪ್ರಯಾಸದ ಕೆಲಸ. (ಏಜೆನ್ಸೀಸ್)

  English summary
  Crazy Star Ravichandran to plays Sudeep's father role in upcoming Kannada film. This is the first time that the likes of Sudeep and Ravichandran coming together. The untitled movie being produced by MN Kumar. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X