»   » ನಾಯಕನಾಗಿ ಎಂಟ್ರಿ ಕೊಡಲಿದ್ದಾರೆ ಕ್ರೇಜಿಸ್ಟಾರ್ ಎರಡನೇ ಪುತ್ರ.!

ನಾಯಕನಾಗಿ ಎಂಟ್ರಿ ಕೊಡಲಿದ್ದಾರೆ ಕ್ರೇಜಿಸ್ಟಾರ್ ಎರಡನೇ ಪುತ್ರ.!

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮೊದಲ ಪುತ್ರ ಮನೋರಂಜನ್ ಈಗಾಗಲೇ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮನೋರಂಜನ್ ಅಭಿನಯದ ಚೊಚ್ಚಲ ಚಿತ್ರ 'ಸಾಹೇಬ' ತೆರೆಕಾಣಲು ಸಜ್ಜಾಗಿದ್ದು, ಬೆಳ್ಳಿತೆರೆ ಮೇಲೆ ಕ್ರೇಜಿಪುತ್ರ ಜರ್ನಿ ಅದ್ಧೂರಿಯಾಗಿ ಶುರುವಾಗುತ್ತಿದೆ.

ಹೀಗಿರುವಾಗ, ರವಿಚಂದ್ರನ್ ಅವರ ಎರಡನೇ ಮಗ ಕೂಡ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡ್ತಿದ್ದಾರೆ. ಹೌದು, ಹಲವು ದಿನಗಳಿಂದ ಕ್ರೇಜಿಸ್ಟಾರ್ ಅವರ ಎರಡನೇ ಮಗ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಆಗಾಗ ಕೇಳಿ ಬರುತ್ತಲೇ ಇತ್ತು. ಈಗ ಈ ಸುದ್ದಿ ನಿಜವಾಗಿದೆ.

ಹಾಗಿದ್ರೆ, ರವಿಚಂದ್ರನ್ ಎರಡನೇ ಪುತ್ರನ ಹೊಸ ಸಿನಿಮಾ ಯಾವುದು? ಯಾರು ಡೈರೆಕ್ಷನ್? ಯಾವಾಗ ಶುರು ಎಂದು ತಿಳಿದುಕೊಳ್ಳಲು ಮುಂದೆ ಓದಿ......

ವಿಕ್ರಂ ನಾಯಕನಾಗಿ ಚೊಚ್ಚಲ ಚಿತ್ರ

ರವಿಚಂದ್ರನ್ ಅವರ ಎರಡನೇ ಮಗ ವಿಕ್ರಂ ಈಗಾಗಲೇ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಅಭಿನಯದ 'ಮಲ್ಲ', 'ಕ್ರೇಜಿಸ್ಟಾರ್' ಸಿನಿಮಾಗಳು ಸೇರಿದಂತೆ ಕೆಲವು ಚಿತ್ರಗಳಲ್ಲಿ ಬೇರೆ ಬೇರೆ ಪಾತ್ರವನ್ನ ನಿರ್ವಹಿಸಿದ್ದಾರೆ. ಆದ್ರೆ, ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿರಲಿಲ್ಲ. ಈಗ ಆ ಸಮಯ ಬಂದಿದ್ದು, ಚೊಚ್ಚಲ ಚಿತ್ರಕ್ಕೆ ಸಜ್ಜಾಗಿದ್ದಾರೆ.

ರವಿಚಂದ್ರನ್ ಅವರ ಮುದ್ದು ಮಕ್ಕಳು ಒಂದೇ ಫ್ರೇಮ್ ನಲ್ಲಿ ಸೆರೆಯಾದಾಗ....

ನಾಗಶೇಖರ್ ನಿರ್ದೇಶನ

ವಿಕ್ರಂ ಅಭಿನಯಿಸಲಿರುವ ಚೊಚ್ಚಲ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದು ನಿರ್ದೇಶಕ ನಾಗಶೇಖರ್. ಈಗಾಗಲೇ ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನ ನೀಡಿರುವ ನಿರ್ದೇಶಕ ಈಗ ವಿಕ್ರಂ ಅವರ ಮೊದಲ ಚಿತ್ರಕ್ಕೆ ಸಾರಥ್ಯ ವಹಿಸಲಿದ್ದಾರೆ. ನಾಗಶೇಖರ್ ಅವರು ಈ ಹಿಂದೆನೇ ಒಂದು ಕಥೆ ಸಿದ್ದಮಾಡಿದ್ದರಂತೆ. ಆ ಕಥೆಯನ್ನ ರವಿಚಂದ್ರನ್ ಅವರು ಒಪ್ಪಿಕೊಂಡರಂತೆ, ಈಗ ಅದೇ ಕಥೆಯನ್ನ ಸಿನಿಮಾ ಮಾಡುತ್ತಿದ್ದಾರಂತೆ.

ಟ್ರೈಲರ್: ಕ್ರೇಜಿಸ್ಟಾರ್ ಹಾದಿಯಲ್ಲೇ ಕ್ರೇಜಿಪುತ್ರನ 'ಸಾಹೇಬ' ಎಂಟ್ರಿ

ಆರ್.ಎಸ್.ಪ್ರೊಡಕ್ಷನ್ ನಿರ್ಮಾಣ

ಈ ಚಿತ್ರಕ್ಕೆ ಬಂಡವಾಳ ಹಾಕಲಿರುವುದು ಕನಕಪುರ ಶ್ರೀನಿವಾಸ್. ಈ ಮೊದಲು ಆರ್.ಎಸ್ ಪ್ರೊಡಕ್ಷನ್ ಮತ್ತು ನಿರ್ದೇಶಕ ನಾಗಶೇಖರ್ ಜೋಡಿಯಲ್ಲಿ 'ಗಡಿಯಾರ' ಎಂಬ ಚಿತ್ರ ಬರಬೇಕಿತ್ತು. ಕಾರಣಾಂತರಗಳಿಂದ ಅದು ಬರಲಿಲ್ಲ. ಹೀಗಾಗಿ, ಈಗ ಅದೇ ಮಾತುಕತೆಯಂತೆ ಹೊಸ ಚಿತ್ರವನ್ನ ಶುರು ಮಾಡುತ್ತಿದ್ದು, ಈ ಚಿತ್ರಕ್ಕೆ ರವಿಚಂದ್ರನ್ ಅವರ ಎರಡನೇ ಪುತ್ರ ನಾಯಕನನ್ನಾಗಿಸಿದ್ದಾರೆ.

ಅಪ್ಪನ ಎವರ್ ಗ್ರೀನ್ ಹಾಡಿಗೆ 'ಮನೋರಂಜನ್' ಮಸ್ತ್ ಡ್ಯಾನ್ಸ್ !

ಸ್ವಂತ ಬ್ಯಾನರ್ ನಲ್ಲಿ ಪರಿಚಯಿಸುವ ಕನಸಿತ್ತು

ಅಂದ್ಹಾಗೆ, ರವಿಚಂದ್ರನ್ ತಮ್ಮ ಮಕ್ಕಳನ್ನ ತಮ್ಮದೇ ಆದ ಸ್ವಂತ ಬ್ಯಾನರ್ ನಲ್ಲಿ ಪರಿಚಯಿಸುವ ಕನಸು ಕಂಡಿದ್ದರು. ಆದ್ರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಮನೋರಂಜನ್ ಗೆ ಚೊಚ್ಚಲ ಚಿತ್ರವಾಗಿ 'ರಣಧೀರ' ಚಿತ್ರಕ್ಕೆ ಅದ್ದೂರಿಯಾಗಿ ಚಾಲನೆ ಕೊಟ್ಟಿದ್ದರು. ಕೊನೆಗೂ ಆ ಸಿನಿಮಾ ಶುರುವಾಗಲೇ ಇಲ್ಲ. ಇನ್ನು ವಿಕ್ರಂ ಚಿತ್ರವನ್ನ ತಮ್ಮ ಬ್ಯಾನರ್ ನಲ್ಲೇ ತರಬೇಕು ಎಂಬ ಕನಸು ಇತ್ತು. ಈಗ ಅದು ಕೂಡ ಈಡೇರಲಿಲ್ಲ.

'ವಿಐಪಿ' ಮನೋರಂಜನ್ ಜೊತೆ 'ಈ' ಚೆಲುವೆ ಡ್ಯುಯೆಟ್ ಹಾಡ್ತಾರಾ.?

ಕನ್ನಡ-ತಮಿಳಿನಲ್ಲಿ ಸಿನಿಮಾ

ಅಂದ್ಹಾಗೆ, ಈ ಸಿನಿಮಾ ಕನ್ನಡ ಮತ್ತು ತಮಿಳು ಎರಡು ಭಾಷೆಗಳಲ್ಲಿಯೂ ಮೂಡಿಬರಲಿದೆ ಎನ್ನಲಾಗಿದೆ. ಸದ್ಯ, ನಾಯಕ ಮತ್ತು ಕಥೆ ಮಾತ್ರ ಓಕೆ ಆಗಿದ್ದು, ಮತ್ತೇನೂ ಅಂತಿಮವಾಗಿಲ್ಲವಂತೆ. ಈಗ ಆಷಾಡ ಮಾಸ. ಆಷಾಡ ಮುಗಿದ ಮೇಲೆ ವಿಕ್ರಂ ಸಿನಿಮಾ ಸೆಟ್ಟೇರಲಿದೆಯಂತೆ.

ಡಾ.ರಾಜ್ ನಂತರ, ಮುಂದಿನ 'ಚೆಂಗುಮಣಿ' ಆಗ್ತಾರಾ ಮನೋರಂಜನ್.?

English summary
Ravichandran Second Son Vikram to make Sandalwood Debut as a hero through untitled Kannada Movie directed by Naga Shekar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada