For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ-ರವಿಚಂದ್ರನ್ ಜೋಡಿಯ ಚಿತ್ರಕ್ಕೆ ಟೈಟಲ್ ಬದಲಾವಣೆ

  |

  ಎಲ್ಲ ಅಂದುಕೊಂಡಂತೆ ಆಗಿದ್ದರೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಜೋಡಿಯ ಹೊಸ ಸಿನಿಮಾ ಇಷ್ಟೊತ್ತಿಗಾಗಲೇ ಶೂಟಿಂಗ್ ಶುರು ಮಾಡಬೇಕಿತ್ತು. ಸಿನಿಮಾ ಮುಹೂರ್ತ ಮಾಡಿಕೊಂಡಿದ್ದ ಚಿತ್ರತಂಡ ಆಮೇಲೆ ಸೈಲೆಂಟ್ ಆಗಿತ್ತು.

  Brahma ಚಿತ್ರದ ಅದ್ದೂರಿ ತೆರೆ ಹಿಂದಿನ ದೃಶ್ಯಗಳು | Behind the scenes | Filmibeat Kannada

  ಎರಡು ವರ್ಷದ ಬಳಿಕ ಚಿತ್ರದ ಬಗ್ಗೆ ಅಪ್‌ಡೇಟ್ ಹೊರಬಿದ್ದಿದೆ. ಈ ಹಿಂದೆ ಮಲ್ಟಿಸ್ಟಾರ್ ಚಿತ್ರಕ್ಕೆ 'ರವಿ-ಚಂದ್ರ' ಎಂದು ಟೈಟಲ್ ಇಡಲಾಗಿತ್ತು. ಆದರೀಗ, ಸಿನಿಮಾದ ಟೈಟಲ್ ವಿಚಾರದಲ್ಲಿ ಚಿತ್ರತಂಡ ಬದಲಾವಣೆ ಬಯಸಿದೆ. ಹಾಗಾದ್ರೆ, ರವಿಚಂದ್ರನ್ ಮತ್ತು ಉಪೇಂದ್ರ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಏನು? ಮುಂದೆ ಓದಿ...

  'ರವಿಚಂದ್ರ' ಬದಲು 'ವೇದವ್ಯಾಸ'

  'ರವಿಚಂದ್ರ' ಬದಲು 'ವೇದವ್ಯಾಸ'

  ಈ ಹಿಂದೆ ರವಿಚಂದ್ರನ್ ಮತ್ತು ಉಪೇಂದ್ರ ಕಾಂಬಿನೇಷನ್ ಚಿತ್ರಕ್ಕೆ ರವಿಚಂದ್ರ ಎಂದು ಟೈಟಲ್ ಘೋಷಣೆ ಮಾಡಲಾಗಿತ್ತು. 1980ರಲ್ಲಿ ಡಾ ರಾಜ್ ಕುಮಾರ್ ಸಹ ಈ ಹೆಸರಿನಲ್ಲಿ ಸಿನಿಮಾ ಮಾಡಿದ್ದರು. 2018ರಲ್ಲಿ ಹೊಸ ಚಿತ್ರದ ಮುಹೂರ್ತ ಮಾಡಿಕೊಂಡಿತ್ತು. ಇದೀಗ, ರವಿಚಂದ್ರ ಬದಲಿಗೆ 'ವೇದವ್ಯಾಸ' ಎಂದು ಮರುನಾಮಕರಣ ಮಾಡಲಾಗಿದೆ.

  'ರವಿಚಂದ್ರ' ಸಿನಿಮಾದಿಂದ ಬಂದ ಅಚ್ಚರಿಯ ಸುದ್ದಿ'ರವಿಚಂದ್ರ' ಸಿನಿಮಾದಿಂದ ಬಂದ ಅಚ್ಚರಿಯ ಸುದ್ದಿ

  ತೆಲುಗು ಚಿತ್ರದ ರೀಮೇಕ್!

  ತೆಲುಗು ಚಿತ್ರದ ರೀಮೇಕ್!

  ವೇದವ್ಯಾಸ ಸಿನಿಮಾ ತೆಲುಗಿನ ಬಲುಪು ಚಿತ್ರದ ರೀಮೇಕ್. ರವಿತೇಜ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ತಂದೆಯ ಪಾತ್ರ ಮಾಡಿದ್ದರು. ಅಲ್ಲಿ ತಂದೆ-ಮಗನ ಕಥೆಯನ್ನು ಕನ್ನಡಕ್ಕೆ ಅಣ್ಣ-ತಮ್ಮನ ಕಥೆಯನ್ನಾಗಿ ಬದಲಾವಣೆ ಮಾಡಲಾಗಿದೆ. ಉಪೇಂದ್ರ ಅವರು ರವಿತೇಜರ ಪಾತ್ರಕ್ಕೆ ಹಾಗೂ ರವಿಚಂದ್ರನ್ ಸಹೋದರನ ಪಾತ್ರದಲ್ಲಿ ನಟಿಸಲಿದ್ದಾರೆ.

  ಫೋಟೋಶೂಟ್ ಸಹ ಮುಗಿದಿದೆ

  ಫೋಟೋಶೂಟ್ ಸಹ ಮುಗಿದಿದೆ

  ಅಂದ್ಹಾಗೆ, ವೇದವ್ಯಾಸ ಚಿತ್ರದ ಫೋಟೋಶೂಟ್ ಸಹ ಮುಗಿದಿದೆ. ರವಿಚಂದ್ರನ್, ಉಪೇಂದ್ರ, ಶಾನ್ವಿ ಶ್ರೀವತ್ಸವ್ ಈ ಫೋಟೋಶೂಟ್‌ನಲ್ಲಿ ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ ಉಪೇಂದ್ರ ಮತ್ತು ರವಿಚಂದ್ರನ್ ಕಾಂಬಿನೇಷನ್ ತೆರೆಮೇಲೆ ಬರುತ್ತಿರುವುದರಿಂದ ಸಹಜವಾಗಿ ಕನ್ನಡ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.

  ಓಂ ಪ್ರಕಾಶ್ ರಾವ್ ನಿರ್ದೇಶನ

  ಓಂ ಪ್ರಕಾಶ್ ರಾವ್ ನಿರ್ದೇಶನ

  ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಲಿದ್ದಾರೆ. ಕನಕಪುರ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಉಪೇಂದ್ರಗೆ ಜೋಡಿಯಾಗಿ ಶಾನ್ವಿ ಶ್ರೀವತ್ಸವ್ ನಟಿಸುತ್ತಿದ್ದಾರೆ. ನಿಮಿಕಾ ರತ್ನಾಕರ್ ಸಹ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ನೀಡಲಿದ್ದಾರೆ.

  English summary
  Kannada actor Ravichandran and Upendra's new movie to be Titled As 'Veda-Vyasa'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X