»   » ಜನ್ಮದಿನದಂದು ರವಿಚಂದ್ರನ್ ತಮ್ಮ ಫ್ಯಾನ್ಸ್ ಗೆ ಕೊಟ್ಟ ಉಡುಗೊರೆ ಏನು?

ಜನ್ಮದಿನದಂದು ರವಿಚಂದ್ರನ್ ತಮ್ಮ ಫ್ಯಾನ್ಸ್ ಗೆ ಕೊಟ್ಟ ಉಡುಗೊರೆ ಏನು?

Posted By:
Subscribe to Filmibeat Kannada

ನಿಜ ಜೀವನದಲ್ಲಿ ವಿದ್ಯೆ ನೈವೇದ್ಯ ಆದ್ರೂ, ಸಿನಿಮಾದ ತಾಂತ್ರಿಕತೆಯಲ್ಲಿ ರವಿಚಂದ್ರನ್ 'ಜಾಣ'. ಒನ್ ಮ್ಯಾನ್ ಆರ್ಮಿಯಂತೆ ಚಿತ್ರರಂಗದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನ ಮೂಡಿಸಿದವರು ಈ ಕನಸುಗಾರ. ಯಾವುದೇ ಸೆಲೆಬ್ರಿಟಿ ಅಥವಾ ನಟನ ಕಾಲ್ ಶೀಟ್ ಕೇಳದೆ ಶೂಟಿಂಗ್ ಶೆಡ್ಯೂಲ್ ಪ್ರಿಪೇರ್ ಮಾಡುವ ಏಕೈಕ ಡೈರೆಕ್ಟರ್ ಅಂದ್ರೆ ಅದು ವಿ.ರವಿಚಂದ್ರನ್.

ತಾವು ಕನಸು ಕಂಡ ಹಾಗೆ ಸಿನಿಮಾ ಮಾಡಿ, ಅದೇ ತರಹ ಚಿತ್ರೀಕರಿಸುವ ಛಲವಾದಿ ಈ ನಮ್ಮ 'ಹಠವಾದಿ'. ರವಿಚಂದ್ರನ್ ಅಂದುಕೊಂಡಂತೆ ಸೀನ್ ಓಕೆ ಆಗ್ದೇಯಿದ್ದರೆ, ಅದಕ್ಕೆ ಲಾಸ್ ಆದರೂ ನೋ ಕಾಂಪ್ರಮೈಸ್. ಇದೇ ಕಾರಣಕ್ಕೆ 'ಶಾಂತಿ ಕ್ರಾಂತಿ' ಚಿತ್ರದಿಂದ ಹಿಡಿದು ಲೇಟೆಸ್ಟ್ 'ಅಪೂರ್ವ'ವರೆಗೂ ರವಿಚಂದ್ರನ್ ನಿರ್ದೇಶಿಸಿರುವ ಚಿತ್ರಗಳು ತಡವಾಗಿ ಬಿಡುಗಡೆ ಆಗುತ್ತಿರುವುದು. [ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ]


ಕನ್ನಡ ಚಿತ್ರರಂಗದ 'ಕಲಾವಿದ' ಅಂತಲೇ ಕರೆಯಿಸಿಕೊಳ್ಳುವ ಕ್ರೇಜಿ ಸ್ಟಾರ್ ರವಿಚಂದ್ರನ್ ರವರಿಗಿಂದು 55ನೇ ಹುಟ್ಟುಹಬ್ಬ.


ಕಳೆದ ಕೆಲ ವರ್ಷಗಳಿಂದ ತಮ್ಮ ಜನ್ಮದಿನವನ್ನು ಸಿಂಪಲ್ ಆಗಿ ಆಚರಿಸಿಕೊಳ್ಳುತ್ತಿದ್ದ ರವಿಚಂದ್ರನ್, ಇವತ್ತು ಗ್ರ್ಯಾಂಡ್ ಆಗಿ ಅಭಿಮಾನಿಗಳ ಜೊತೆ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆಲ್ಲಾ ಕಾರಣ 'ಅಪೂರ್ವ'.


ಕನಸುಗಾರನ ಹೊಸ ಕನಸು 'ಅಪೂರ್ವ' ಮೊನ್ನೆಯಷ್ಟೇ ತೆರೆಗೆ ಬಂದಿದೆ. ಅದೇ ಖುಷಿಯಲ್ಲಿ ಇವತ್ತು ಇಡೀ ದಿನವನ್ನ ಅಭಿಮಾನಿಗಳಿಗೆ ಮೀಸಲಿಟ್ಟಿದ್ದಾರೆ ರವಿಚಂದ್ರನ್. 'ಅಪೂರ್ವ' ಬಗ್ಗೆ ಟೀಕೆಗಳು ವ್ಯಕ್ತವಾಗಿರುವ ಬೆನ್ನಲ್ಲೆ, ಅಭಿಮಾನಿಗಳಿಗೆ ಇಂದು ರವಿಚಂದ್ರನ್ ವಿಶೇಷ ಉಡುಗೊರೆ ನೀಡಿದ್ದಾರೆ. ಮುಂದೆ ಓದಿ.....


ಹುಟ್ಟುಹಬ್ಬದ ದಿನ ರವಿಚಂದ್ರನ್ ಮಾತು.!

''ನನ್ನ ಹುಟ್ಟುಹಬ್ಬದ ಪ್ರಯುಕ್ತ ಅಪೂರ್ವ' ರಿಲೀಸ್ ಆಗಿದೆ. ಅದೇ ಖುಷಿ ನನಗೆ. ಹೀಗಾಗಿ ಇವತ್ತು ಅಭಿಮಾನಿಗಳ ಜೊತೆ ಬರ್ತಡೆ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದೇನೆ'' ಎನ್ನುತ್ತಾರೆ ವಿ.ರವಿಚಂದ್ರನ್.


'ಅಪೂರ್ವ' ಬಗ್ಗೆ ರವಿಚಂದ್ರನ್ ಮಾತು

''ಅಪೂರ್ವ' ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸಹಜ. ನನ್ನ 'ಪ್ರೇಮಲೋಕ' ಚಿತ್ರಕ್ಕೂ ಮೊದ ಮೊದಲು ಹೀಗೆ ಆಗಿತ್ತು. ನಂತರ ಇತಿಹಾಸ ಸೃಷ್ಟಿಸಿತು'' - ವಿ.ರವಿಚಂದ್ರನ್


ವಿಭಿನ್ನ ಪ್ರಯೋಗದ 'ಅಪೂರ್ವ'

''ಅಪೂರ್ವ' ರೆಗ್ಯುಲರ್ ಸಿನಿಮಾ ಆಗಿದ್ದರೆ, ವರ್ಷದ ಹಿಂದೆಯೇ ಅದನ್ನ ರಿಲೀಸ್ ಮಾಡುತ್ತಿದ್ದೆ. ಇಷ್ಟೊಂದು ಸಮಯ ಬೇಕಾಗಿರ್ಲಿಲ್ಲ. 'ಅಪೂರ್ವ' ಹೊಸ ಪ್ರಯತ್ನ ಹಾಗೂ ಹೊಸ ಪ್ರಯೋಗ. 'ಅಪೂರ್ವ' ಚಿತ್ರವನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕು. ಹೀಗಾಗಿ ನಾನು ಕಾಯುತ್ತೇನೆ'' - ವಿ.ರವಿಚಂದ್ರನ್


ಬರ್ತಿದೆ 'ಅಪೂರ್ವ' ಎರಡನೇ ಆವೃತ್ತಿ

''ಅಪೂರ್ವ' ಚಿತ್ರದ ಫಸ್ಟ್ ಹಾಫ್ ಸ್ಲೋ, ಸೆಕೆಂಡ್ ಹಾಫ್ ಚೆನ್ನಾಗಿದೆ ಅಂತ ಜನ ಹೇಳುತ್ತಿದ್ದಾರೆ. ಕೆಲ ವರ್ಗದ ಪ್ರೇಕ್ಷಕರಿಗೆ ಹೀಗೆ ಅನಿಸುವುದು ಸಹಜ ಎಂಬುದು ನನಗೆ ಮೊದಲೇ ಗೊತ್ತಿತ್ತು. ಅದಕ್ಕಾಗಿಯೇ, ನಾನು 'ಅಪೂರ್ವ' ಎರಡನೇ ಆವೃತ್ತಿ ರೆಡಿ ಮಾಡಿದ್ದೆ'' - ವಿ.ರವಿಚಂದ್ರನ್


ಹುಟ್ಟುಹಬ್ಬದ ಉಡುಗೊರೆ ಏನು?

ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ಅಭಿಮಾನಿಗಳಿಗಾಗಿ 'ಅಪೂರ್ವ' ಎರಡನೇ ಆವೃತ್ತಿಯನ್ನ ಇದೇ ವಾರ ರವಿಚಂದ್ರನ್ ಬಿಡುಗಡೆ ಮಾಡುತ್ತಿದ್ದಾರೆ. ಈ ಬಾರಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ 'ಅಪೂರ್ವ' ಇರಲಿದೆ ಎಂಬುದು ರವಿಚಂದ್ರನ್ ನಂಬಿಕೆ.


ನೀವು ವಿಶ್ ಮಾಡಿದ್ರಾ.?

''ಪ್ರೇಮಲೋಕ'ದಿಂದ ಆರಂಭವಾದ ಅವರ ಸಿನಿ ಪಯಣದಲ್ಲಿ, ಗೆಲುವಿಗಿಂತ ಸೋಲಿನ ರುಚಿಯನ್ನ ಉಂಡಿದ್ದೇ ಹೆಚ್ಚು. ಆದ್ರೂ, ಛಲ ಬಿಡದ 'ಹಠವಾದಿ', 'ಏಕಾಂಗಿ'ಯಾಗಿ ಹೋರಾಡುತ್ತಿರುವ ಶಿಸ್ತಿನ 'ಸಿಪಾಯಿ' ಕ್ರೇಜಿ ಸ್ಟಾರ್ ಗೆ ಈ ಹುಟ್ಟುಹಬ್ಬ, 'ಅಪೂರ್ವ' ಮರುಹುಟ್ಟು ಕೊಡಲಿ ಅಂತ ನೀವೂ ಶುಭ ಹಾರೈಸಿ. ನಿಮ್ಮ ವಿಶಸ್ ನ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ....


English summary
Crazy Star V.Ravichandran is celebrating his 55th birthday today (May 30). On this occasion, V.Ravichandran has announced to release 'Apoorva' second version, based on Public Pulse.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada