»   » ರವಿಮಾಮ ಮೊದಲ ಬಾರಿಗೆ ಬ್ರ್ಯಾಂಡ್ ಅಂಬಾಸಿಡರ್..

ರವಿಮಾಮ ಮೊದಲ ಬಾರಿಗೆ ಬ್ರ್ಯಾಂಡ್ ಅಂಬಾಸಿಡರ್..

By: ಜೀವನರಸಿಕ
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಮೀಡಿಯಾದವ್ರಿಂದ ದೂರ ಇರ್ತಿದ್ರು. ಫ್ಯಾನ್ಗಳಿಗೂ ಅಷ್ಟೊಂದು ಸುಲಭವಾಗಿ ಸಿಗದ ಸ್ಟಾರ್ ಅಂದ್ರೆ ಕ್ರೇಜಿಸ್ಟಾರ್. ರವಿಮಾಮ ದಿನದ 24 ಗಂಟೆ ವರ್ಷದ 365 ದಿನವೂ ಯಾರಿಗೂ ಸಿಗದಷ್ಟು ಬ್ಯುಸಿ ಇರೋದು ಸಿನಿಮಾ ಬಗ್ಗೆ ತಲೆಕೆಡಿಸಿಕೊಳ್ಳೋದ್ರಲ್ಲಿ..

ಮಾಧ್ಯಮದವ್ರಿಗೆ ರವಿಚಂದ್ರನ್ರ ಒಂದು ಬೈಟ್ ತೆಗೆದುಕೊಳ್ಳೋದು ಸವಾಲಿನ ಕೆಲಸವೇ ಆಗಿತ್ತು. ಎಲೆಕ್ಟ್ರಾನಿಕ್ ಮೀಡಿಯಾದವರಿಗಂತೂ ಅಂಬರೀಷ್ ಶಿವಣ್ಣರಂತಹಾ ಸ್ಟಾರ್ಗಳು ಸುಲಭವಾಗಿ ಗಂಟೆಗಟ್ಟಲೇ ಮಾತಿಗೆ ಸಿಕ್ಕಿಬಿಡ್ತಿದ್ರು, ಆದ್ರೆ ರವಿಚಂದ್ರನ್ ವಿಷ್ಯದಲ್ಲಿ ಇದು ಅಸಾಧ್ಯದ ಮಾತು. ಆದ್ರೆ ಈಗ ರವಿಮಾಮ ಓಪನ್.[ಟಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಮಿಂಚ್ತಾರೆ ರವಿಚಂದ್ರನ್]

Ravichandran brand abassador for real estate company

ಈಗ ಕ್ರೇಜಿಸ್ಟಾರ್ ರಿಯಲ್ ಎಸ್ಟೇಟ್ ಒಂದರ ಬ್ರ್ಯಾಂಡ್ ಅಂಬಾಸಿಡಾರ್ ಆಗಿದ್ದಾರೆ. ಕಿರುತೆರೆಯಲ್ಲಿ, ಎಫ್ಎಂನಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ ಶುರುವಾಗಿದ್ದು, ರಿಯಲ್ ಎಸ್ಟೇಟ್ ಕಂಪನಿ ರವಿಮಾಮನಿಗೆ ಸ್ಕೆಚ್ ಹಾಕಿ ದೊಡ್ಡ ಮೊತ್ತಕ್ಕೆ ಕ್ಯಾಚ್ ಹಾಕಿದೆಯಂತೆ.[ಸೆಪ್ಟೆಂಬರ್ ನಲ್ಲಿ 'ಲವ್ ಯು ಆಲಿಯ' ರಿಲೀಸ್ ಫಿಕ್ಸ್]

ಒಂದು ಕಾಲದಲ್ಲಿ ರವಿಮಾಮನ ಇಂಟರ್ವ್ಯೂವ್ಗಳು ಪ್ರೆಸ್ಮೀಟ್ನಲ್ಲಿ ಸಿಗೋದೇ ಕಷ್ಟವಾಗ್ತಿತ್ತು. ಇನ್ನು ಮನೆಗೆ ಬಂದ್ರೆ ಕ್ರೇಜಿಸ್ಟಾರ್ ಕಾನ್ಸೆಪ್ಟ್, ಮ್ಯೂಸಿಕ್, ಲಿರಿಕ್ಸ್ ಅಂತ ಸದಾ ಬ್ಯುಸಿ ಇರ್ತಿದ್ರು. ಆದ್ರೆ ಇಲ್ಲಿ ನೋಡಿ ಇಷ್ಟಕ್ಕೂ ಇಲ್ಲಿ ಕುಳಿತು ಊಟ ಮಾಡ್ತಿರೋದು ಬ್ರ್ಯಾಂಡ್ ಅಂಬಾಸಿಡಾರ್ ಮಾಡಿದ ಕ್ರೇಜಿಸ್ಟಾರ್ರ ಸಿನಿಮಾ ಫ್ಯಾನ್ಗಳಾಗಿರೋ ಮಾಕರ್ೇಟಿಂಗ್ನವ್ರು. ಸ್ವತಃ ರವಿಚಂದ್ರನ್ ಪತ್ನಿಯವರೇ ಅವ್ರಿಗೆ ಊಟವನ್ನ ಬಡಿಸ್ತಿದ್ದಾರೆ ಕೂಡ.

English summary
Crazy Star Ravichandran, who was totally immersed in Kannada movie making, small screen reality shows and FM radio, has been made brand ambassador for a big real estate company. Congratulations to you Kanasugara.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada