For Quick Alerts
  ALLOW NOTIFICATIONS  
  For Daily Alerts

  ರವಿಚಂದ್ರನ್ ಮಗಳು ಗೀತಾಂಜಲಿ ಈ ನಟನ ಅಭಿಮಾನಿಯಂತೆ

  |
  ಗೀತಾಂಜಲಿಗೆ ರವಿಚಂದ್ರನ್ ಬಿಟ್ಟು ಬೇರೆ ಒಬ್ಬರು ಸ್ಟಾರ್ ಕಂಡ್ರೆ ತುಂಬ ಇಷ್ಟ

  ಕ್ರೇಜಿಸ್ಟಾರ್ ರವಿಚಂದ್ರನ್ ಅಂದ್ರನೇ ದೊಡ್ಡ ಸ್ಟಾರ್. ಪುಟ್ನಂಜನ ಕಂಡ್ರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅಭಿಮಾನಿಗಳಿದ್ದಾರೆ. ಇಂತಹ ಸ್ಟಾರ್ ನಟನ ಮಗಳು ಇನ್ನೊಬ್ಬ ನಟನ ಅಭಿಮಾನಿ ಎನ್ನುವುದು ವಿಶೇಷ.

  ಹೌದು, ರವಿಚಂದ್ರನ್ ಮಗಳು ಗೀತಾಂಜಲಿ ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತುಂಬಾ ಇಷ್ಟವಂತೆ. ಚಿಕ್ಕವಯಸ್ಸಿನಿಂದಲೇ ಶಿವಣ್ಣ ಅಂದ್ರೆ ಅದೇನೋ ಒಂಥರಾ ಕ್ರೇಜ್ ಅಂತೆ. ಹೀಗಂತ ಸ್ವತಃ ರವಿಚಂದ್ರನ್ ಅವರೇ ಹೇಳಿಕೊಂಡಿದ್ದಾರೆ.

  'ಕನಸುಗಾರ'ನ ಸ್ಟೈಲ್ ನಲ್ಲೇ ಮಗಳ ಮದುವೆ: ಇದು ಮದುವೆನಾ, ಸಿನಿಮಾನಾ?

  ಮಗಳ ಮದುವೆ ತಯಾರಿಯಲ್ಲಿರುವ ರವಿಚಂದ್ರನ್ ಇತ್ತೀಚಿಗಷ್ಟೆ ಮಾಧ್ಯಮದವರನ್ನ ಮನೆಗೆ ಕರೆದು ಮದುವೆಯೆ ಆಮಂತ್ರಣ ನೀಡಿದ್ದರು. ಇದೇ ವೇಳೆ ಮಗಳು, ಅಳಿಯ ಹಾಗೂ ಮದುವೆ ಬಗ್ಗೆ ಮಾತನಾಡಿದ ಕ್ರೇಜಿಸ್ಟಾರ್ ಈ ವಿಷ್ಯವನ್ನ ಹಂಚಿಕೊಂಡರು.

  ಅಳಿಯನ ಬಗ್ಗೆ ಕ್ರೇಜಿಸ್ಟಾರ್ ಹೇಳಿದ್ದೇನು: ಒಂದು ವಿಷ್ಯ ಅಚ್ಚರಿ ಅನ್ಸುತ್ತೆ.!

  ಇನ್ನು ಶಿವರಾಜ್ ಕುಮಾರ್ ಅವರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಈ ವೇಳೆ ಮನೆಗೆ ಹೋಗಿದ್ದಾಗ ''ಗೀತಾಂಜಲಿ ಸಂಗೀತ್ ಕಾರ್ಯಕ್ರಮ ನಮ್ಮ ಮನೆಯಲ್ಲೇ ಮಾಡಿ, ನಾನೇ ಎಲ್ಲ ತಯಾರಿ ಮಾಡುತ್ತೇನೆ'' ಎಂದು ಶಿವಣ್ಣ ಕೇಳಿದ್ರಂತೆ.

  ಮೇ 28 ಮತ್ತು 29 ರಂದು ರವಿಚಂದ್ರನ್ ಮಗಳು ಗೀತಾಂಜಲಿ ಅವರ ವಿವಾಹ ಮಹೋತ್ಸವ ನಡೆಯಲಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪೂರ ವಾಸಿನಿಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.

  English summary
  Ravichandran daughter geethanjali is Big fan for hatrick hero shiva rajkumar from her childwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X