For Quick Alerts
  ALLOW NOTIFICATIONS  
  For Daily Alerts

  'ಅವನೇ ಶ್ರೀಮನ್ನಾರಾಯಣ' ಸೆಟ್ ನಲ್ಲಿ ಕಂಡ ರವಿಮಾಮ

  By Pavithra
  |
  'ಅವನೇ ಶ್ರೀಮನ್ನಾರಾಯಣ' ಸೆಟ್ ನಲ್ಲಿ ಕಂಡ ರವಿಮಾಮ | Oneindia Kannada

  'ಅವನೇ ಶ್ರೀಮನ್ನಾರಾಯಣ' ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ಸಿನಿಮಾ. ಟೀಸರ್ ನಿಂದಲೇ ಭಾರಿ ಕುತೂಹಲವನ್ನು ಮೂಡಿಸಿರುವ 'ಅವನೇ ಶ್ರೀಮನ್ನಾರಾಯಣ' ಚಿತ್ರೀಕರಣ ಸ್ಥಳಕ್ಕೆ ರವಿಚಂದ್ರನ್ ಭೇಟಿ ಕೊಟ್ಟಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.

  ಕಳೆದ ಭಾರಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಸೆಟ್ ಗೆ ಶಿವರಾಜ್ ಕುಮಾರ್ ಭೇಟಿ ಕೊಟ್ಟು ಸಿನಿಮಾ ಮೇಕಿಂಗ್ ವೀಕ್ಷಿಸಿದ್ದರು. ಅದರ ಜೊತೆಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಸಿನಿಮಾತಂಡದ ಜೊತೆ ಸಾಕಷ್ಟು ಸಮಯ ಕಳೆದಿದ್ದರು.

  ಪವರ್ ಸ್ಟಾರ್ ಹಾಕಿದ ಚಾಲೆಂಜ್ ಸ್ವೀಕರಿಸಿದ ರಕ್ಷಿತ್ ಶೆಟ್ಟಿ ಪವರ್ ಸ್ಟಾರ್ ಹಾಕಿದ ಚಾಲೆಂಜ್ ಸ್ವೀಕರಿಸಿದ ರಕ್ಷಿತ್ ಶೆಟ್ಟಿ

  ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣ ಮಾಡುತ್ತಿದ್ದಾರೆ. ನವ ನಿರ್ದೇಶಕ ಸಚಿನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಟೀಸರ್ ನೋಡಿಯೇ ವಿಭಿನ್ನ ರೀತಿಯ ಸಿನಿಮಾ ಎನ್ನುವುದನ್ನು ಪ್ರೇಕ್ಷಕರು ನಿರ್ಧರಿಸಿದ್ದಾರೆ.

  ಸಿನಿಮಾಗಾಗಿ ನಟ ರಕ್ಷಿತ್ ಶೆಟ್ಟಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದು ವರ್ಕ್ ಔಟ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿದ್ದರು. ಮೊದಲ ಹಂತದ ಚಿತ್ರೀಕರಣಕ್ಕಾಗಿ ಅದ್ಧೂರಿ ಸೆಟ್ ಹಾಕಲಾಗಿತ್ತು.

  English summary
  Kannada actor Ravichandran has visited the Avane Srimannarayana movie set. Rakshit Shetty is acting in Avane Srimannarayana movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X