ಆಶಿಕಾ, ನವೀನ್ ಕೃಷ್ಣರಿಗೆ ಮದುವೆ ಆಮಂತ್ರಣ ನೀಡಿದ ರವಿಚಂದ್ರನ್

ಮಗಳ ಮದುವೆ ತಯಾರಿಯಲ್ಲಿರುವ ನಟ ರವಿಚಂದ್ರನ್ ಅತಿಥಿಗಳಿಗೆ ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರೆ. ಸಿನಿಮಾರಂಗದ ಅನೇಕ ಸ್ನೇಹಿತರಿಗೆ ಕ್ರೇಜಿಸ್ಟಾರ್ ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆ ತಲುಪಿಸಿದ್ದಾರೆ.

ಸದ್ಯ, ನಟ ನವೀನ್ ಕೃಷ್ಣ ಹಾಗೂ ನಟಿ ಆಶಿಕಾ ರಂಗನಾಥ್ ಗೆ ಸಹ ಕ್ರೇಜಿ ಕುಟುಂಬದ ವಿವಾಹದ ಕರೆಯೋಲೆ ತಲುಪಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ನವೀನ್ ಕೃಷ್ಣ ''ನಮ್ಮ ಗುರುಗಳ ಪ್ರೀತಿ ದೊಡ್ಡದು...ಧನ್ಯವಾದಗಳು ಗುರುಗಳೆ...ದಂಪತಿಗಳಿಗೆ ಮನದುಂಬಿದ ಹಾರೈಕೆಗಳು'' ಎಂದು ಶುಭಾಶಯ ಕೋರಿದ್ದಾರೆ.

ನಟಿ ಆಶಿಕಾ ಸಹ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರವಿಚಂದ್ರನ್ ಮಗಳ ಮದುವೆಯ ಆಮಂತ್ರಣದ ಫೋಟೋ ಹಾಕಿದ್ದಾರೆ. ''ರವಿಚಂದ್ರನ್ ರೀತಿಯ ತಂದೆಯನ್ನು ಪಡೆಯುವುದು ಪ್ರತಿ ಮಗಳ ಕನಸು'' ಎಂದು ಬರೆದುಕೊಂಡಿದ್ದಾರೆ.

 ravichandran invited ashika ranganath and naveen krishna for his daughter wedding

ಮಗಳ ಮದುವೆಯನ್ನು ಅದ್ದೂರಿಯಾಗಿ, ಅದಕ್ಕಿಂತ ಹೆಚ್ಚಾಗಿ ಪ್ರೀತಿಯಿಂದ ಮಾಡುತ್ತಿರುವ ರವಿಚಂದ್ರನ್ ರನ್ನು ನೋಡಿ ಆಶಿಕಾ ಮನತುಂಬಿ ಬಂದಿದೆ.

ಅಂದಹಾಗೆ, ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗೂ ಅಜಯ್ ಮದುವೆ ಮೇ 28 ಹಾಗೂ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

More from Filmibeat

English summary
Crazy Star Ravichandran invited actress Ashika Ranganath and actor Naveen Krishna for his daughter Geethanjali wedding. Geethanjali and businessman Ajay marriage will be held on May 28 and 29th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X