»   » ಕ್ರೇಜಿ ಸ್ಟಾರ್, ಕವಿತಾ ಲಂಕೇಶ್ 'ಕ್ರೇಜಿಲೋಕ' ಬಿಡುಗಡೆ

ಕ್ರೇಜಿ ಸ್ಟಾರ್, ಕವಿತಾ ಲಂಕೇಶ್ 'ಕ್ರೇಜಿಲೋಕ' ಬಿಡುಗಡೆ

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆ ಹಾಗೂ ಕವಿತಾ ಲಂಕೇಶ್ ನಿರ್ದೇಶನದ 'ಕ್ರೇಜಿಲೋಕ' ಮುಂದಿನ ತಿಂಗಳು 8 (ಜೂನ್ 8, 2012) ರಂದು ಬಿಡುಗಡೆಯಾಗಲಿದೆ. ಈ ಮೊದಲು ಈ ಚಿತ್ರ ರವಿಚಂದ್ರನ್ ಹುಟ್ಟುಹಬ್ಬದ ದಿನವಾದ ಮೇ 30, 2012 ರಂದು ತೆರೆಗೆ ಬರಬಹುದೆಂದು ನಿರೀಕ್ಷಿಸಲಾಗಿತ್ತು.

ಇದೀಗ ಜೂನ್ 8 ರಂದು ಚಿತ್ರದ ಬಿಡುಗಡೆಯನ್ನು ನಿರ್ದೇಶಕಿ ಕವಿತಾ ಲಂಕೇಶ್ ದೃಢಪಡಿಸಿದ್ದಾರೆ. ಇಷ್ಟರಲ್ಲಾಗಲೇ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಚಿತ್ರಮಂದಿರಗಳ ಸಮಸ್ಯೆಯಿಂದ ಬಿಡುಗಡೆ ಮುಂದಕ್ಕೆ ಹೋಗುತ್ತಿದೆ ಎಂದು ಈ ಮೊದಲು ಕವಿತಾ ಲಂಕೇಶ್ ಸ್ಪಷ್ಟಪಡಿಸಿದ್ದರು. ಈಗ ಸಮಸ್ಯೆಗಳೆಲ್ಲಾ ಪರಿಹಾರವಾಗಿ ಚಿತ್ರದ ಬಿಡುಗಡೆ ಘೋಷಣೆಯಾಗಿದೆ.

ಸದ್ಯಕ್ಕೆ ಸತತ ಸೋಲಿನ ಸುಳಿಗೆ ಸಿಲುಕಿರುವ ರವಿಚಂದ್ರನ್ ಅವರಿಗೆ ಈ ಚಿತ್ರ ಬ್ರೇಕ್ ನೀಡಬಹುದು ಎನ್ನಲಾಗುತ್ತಿದೆ. ಕಾರಣ, ಸಿನಿಮಾ ಹೆಸರೇ ಕ್ರೇಜಿಲೋಕ. 'ಅಂದು ಪ್ರೇಮ ಲೋಕ, ಇಂದು ಕ್ರೇಜಿ ಲೋಕ' ಎಂಬ ಮೇಲ್ಬರಹ ಬೇರೆ ಚಿತ್ರದ ಶೀರ್ಷಿಕೆಗಿದೆ.

ಚಿತ್ರದ ಕಥೆ ಏನು ಎಂಬುದು ತಿಳಿದಿಲ್ಲವಾದರೂ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಅತಿಮುಖ್ಯ ಪಾತ್ರವಿರುವುದಂತೂ ಸತ್ಯ. ಯುವ ಪ್ರೇಮಿಗಳ ಪಾತ್ರದಲ್ಲಿ ನವನಟ ಸೂರ್ಯ ಹಾಗೂ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರದಲ್ಲಿ ಕಂಡುಬರುವ ಹಾಸ್ಯ ಹಾಗೂ ಶೃಂಗಾರ ರಸಗಳು ಈ ಕ್ರೇಜಿ ಸ್ಟಾರ್ ಚಿತ್ರದಲ್ಲೂ ಕಂಡುಬರಲಿವೆ ಎಂದಿದ್ದಾರೆ ನಿರ್ದೇಶಕಿ ಕವಿತಾ. ಹೀಗಾಗಿ, ರವಿಚಂದ್ರನ್ ಅಭಿಮಾನಿಗಳಿಗಂತೂ ಈ ಚಿತ್ರದ ಮೂಲಕ ಹಬ್ಬದೂಟ ಗ್ಯಾರಂಟಿ. (ಒನ್ ಇಂಡಿಯಾ ಕನ್ನಡ)

English summary
Ravichandran and Kavitha Lankesh combination movie Crazy Loka releases on June 8, 2012 all over Karnataka. Harshika Poonachcha and Surya acted in youth oriented role
Please Wait while comments are loading...