For Quick Alerts
  ALLOW NOTIFICATIONS  
  For Daily Alerts

  ಯಶ್ ಗೆ 'ಪ್ರೇಮಲೋಕ'ದ ರವಿಚಂದ್ರನ್ 'Hats Off' ಹೇಳಿದ್ದು ಇದೇ ಕಾರಣಕ್ಕೆ.!

  By Harshitha
  |

  ಈ ಸಿನಿಮಾ ಲೋಕ ಒಂಥರಾ ಮಾಯಾಲೋಕ ಇದ್ದ ಹಾಗೆ. ಕಲರ್ ಫುಲ್ ಜಗತ್ತಿನಲ್ಲಿ ಹೆಸರು, ಹಣ ಗಳಿಸಲು ಹಲವರು ವಾಮ ಮಾರ್ಗ ಅನುಸರಿಸಿದ್ರೆ, ಕಷ್ಟ ಪಟ್ಟು ಮೇಲೆ ಬಂದವರು ಮಾತ್ರ ಕೆಲವೇ ಕೆಲವು ಮಂದಿ. ಅದರಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಒಬ್ಬರು.

  ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ, ಧಾರಾವಾಹಿಯಲ್ಲಿ ನಟಿಸಿ, ಗಾಂಧಿನಗರದಲ್ಲಿ ಗಾಡ್ ಫಾದರ್ ಇಲ್ಲದೆ ಸ್ವಂತ ಪ್ರತಿಭೆ ಇಂದ ಇಂದು ನಂಬರ್ 1 ನಟನಾಗಿ ಬೆಳೆದಿದ್ದಾರೆ ಯಶ್. [ಕಡೆಗೂ ತಮ್ಮ ಲವ್ ಸ್ಟೋರಿ ಸೀಕ್ರೆಟ್ ಬಿಚ್ಚಿಟ್ಟ ನಟ ಯಶ್.!]

  ಕಷ್ಟ-ಸುಖದ ಮಿಶ್ರಣವಾದ ತಮ್ಮ ಸಿನಿ ಪಯಣದಲ್ಲಿ ಬೇಡದ ವಿಚಾರಗಳಿಗೆ ಯಶ್ ಸುದ್ದಿ ಆಗಿದ್ದು ಕಡಿಮೆ. ಅದರಲ್ಲೂ, ವೈಯುಕ್ತಿಕ ವಿಚಾರವಾಗಿ ಯಶ್ 'ಗಾಸಿಪ್ ಕಾಲಂ' ನಲ್ಲಿ ಸೌಂಡ್ ಮಾಡಿದ್ದು ಲವ್ ಮ್ಯಾಟರ್ ನಿಂದ ಮಾತ್ರ.! ಅದರಲ್ಲೂ ಒಂದೇ ಹುಡುಗಿ ಜೊತೆ.! ಮುಂದೆ ಓದಿ....

  ಮೊದಲಿನಿಂದಲೂ ಒಂದೇ ಹುಡುಗಿ.!

  ಮೊದಲಿನಿಂದಲೂ ಒಂದೇ ಹುಡುಗಿ.!

  ಹೈಟೆಕ್ ಲೈಫ್ ನಲ್ಲಿ ಡೇಟಿಂಗ್, ಬ್ರೇಕಪ್ ಎಲ್ಲಾ ಕಾಮನ್. ಅಂಥದ್ರಲ್ಲಿ, ಸಿನಿಮಾ ಜಗತ್ತಿನಲ್ಲಿ ಇದ್ದುಕೊಂಡು, ಒಂದೇ ಹುಡುಗಿ (ರಾಧಿಕಾ ಪಂಡಿತ್) ಜೊತೆ ಕಮಿಟ್ ಮೆಂಟ್ ಮೇನ್ಟೇನ್ ಮಾಡಿರುವ ಯಶ್ ರನ್ನ ಎಲ್ಲರೂ ಮೆಚ್ಚಿಕೊಳ್ಳಲೇಬೇಕು. [ನಟ ಯಶ್ - ರಾಧಿಕಾ ಪಂಡಿತ್ ಲವ್ ಸಕ್ಸಸ್: ನಿಶ್ಚಿತಾರ್ಥ ಫಿಕ್ಸ್.!]

  ರಾಧಿಕಾ ಪಂಡಿತ್ ರದ್ದು ಪವಿತ್ರ ಪ್ರೀತಿ

  ರಾಧಿಕಾ ಪಂಡಿತ್ ರದ್ದು ಪವಿತ್ರ ಪ್ರೀತಿ

  ಸಿನಿಮಾ ನಾಯಕಿಯರು 'ಗಾಸಿಪ್ ಕಾಲಂ'ಗಳಲ್ಲೇ ಹೆಚ್ಚಾಗಿ ಸುದ್ದಿ ಮಾಡುವುದು. ಆದ್ರೆ, ಅಂತಹ ಯಾವುದೇ ಗಾಸಿಪ್ ಗಳಿಗೂ ಸಿಲುಕದೆ, ತಮ್ಮ ಸಿನಿ ಜರ್ನಿ ಜೊತೆಗೆ ಪ್ರೀತಿಗೂ ಗೌರವ ನೀಡಿದ್ದಾರೆ ರಾಧಿಕಾ ಪಂಡಿತ್. [ಯಶ್ ಈ ತರಹ ಪ್ರಪೋಸ್ ಮಾಡಿದ್ರೆ, ಯಾರ್ ಬೇಕಾದ್ರೂ ಒಪ್ಕೊಳ್ತಾರೆ.!]

  ಮಾದರಿ ಜೋಡಿ

  ಮಾದರಿ ಜೋಡಿ

  10 ವರ್ಷಗಳಿಂದ ಪರಿಚಿತರಾಗಿರುವ ಯಶ್ ಹಾಗೂ ರಾಧಿಕಾ ಪಂಡಿತ್, ತಮ್ಮ ಪ್ರೀತಿಯನ್ನ 'ಪಬ್ಲಿಸಿಟಿ' ಮಾಡದೆ, ಪವಿತ್ರ ಪ್ರೇಮಕ್ಕೆ ಅಧಿಕೃತ ಮುದ್ರೆ ಹಾಕಿಸಿಕೊಳ್ಳಲು ಸಜ್ಜಾಗಿರುವ ಈ ಜೋಡಿ ಇತರರಿಗೆ ಮಾದರಿ. [ಗೋವಾದಲ್ಲಿ ಯಶ್-ರಾಧಿಕಾ ಪಂಡಿತ್ ಮಾಡಿದ್ದೇನು?]

  ರವಿಚಂದ್ರನ್ ಹ್ಯಾಟ್ಸ್ ಆಫ್ ಹೇಳಿದ್ದು ಇದೇ ಕಾರಣಕ್ಕೆ.!

  ರವಿಚಂದ್ರನ್ ಹ್ಯಾಟ್ಸ್ ಆಫ್ ಹೇಳಿದ್ದು ಇದೇ ಕಾರಣಕ್ಕೆ.!

  'ಕಲರ್ಸ್ ಸೂಪರ್' ಚಾನೆಲ್ ಲಾಂಚ್ ವೇಳೆ ನಟ ಯಶ್ ಗೆ 'ಪ್ರೇಮಲೋಕ' ಸೃಷ್ಟಿಸಿದ ದೇವರು ರವಿಚಂದ್ರನ್ 'ಹ್ಯಾಟ್ಸ್ ಆಫ್' ಅಂತ ತಲೆ ಬಾಗಿ ಹೇಳಿದ್ದು ಇದೇ ಕಾರಣಕ್ಕೆ.

  ಅಂದು ರವಿಚಂದ್ರನ್ ಪ್ರಶ್ನೆ ಕೇಳಿದ್ದರು.!

  ಅಂದು ರವಿಚಂದ್ರನ್ ಪ್ರಶ್ನೆ ಕೇಳಿದ್ದರು.!

  ''ನೀನು ಇಂಡಸ್ಟ್ರಿಗೆ ಬಂದಾಗಿನಿಂದಲೂ ಒಂದೇ ಹುಡುಗಿ ಹೆಸರು ನಿನ್ನ ಜೊತೆ ಕೇಳಿ ಬರುವುದು. ಅದು ನಿಜಾನಾ.? ಯಾವಾಗ ನಿಜ ಆಗುತ್ತೆ.?'' ಅಂತ ರವಿಚಂದ್ರನ್ ಪ್ರಶ್ನೆ ಕೇಳಿದ್ದರು.

  ಯಶ್ ಕೊಟ್ಟ ಉತ್ತರ ಇದು...

  ಯಶ್ ಕೊಟ್ಟ ಉತ್ತರ ಇದು...

  ''ಒಳ್ಳೆಯದ್ದು ಅಲ್ಲವಾ ಸರ್ ಒಂದೇ ಹೆಸರು ಇದ್ರೆ.! ತುಂಬಾ ಹೆಸರು ಬರುವುದಕ್ಕಿಂತ.!'' ಅಂತ ಯಶ್ ಉತ್ತರ ನೀಡಿದ್ರು.

  ರವಿಚಂದ್ರನ್ ಮೆಚ್ಚುಗೆ

  ರವಿಚಂದ್ರನ್ ಮೆಚ್ಚುಗೆ

  ''ಅದು ತುಂಬಾ ಒಳ್ಳೆಯದು. ತುಂಬಾ ಕಷ್ಟ ಕೂಡ. ಅದನ್ನ ಮೇನ್ಟೇನ್ ಮಾಡ್ತಿದ್ಯಲ್ಲಾ. ಅದಕ್ಕೆ ಮೊದಲು ನಿನ್ನ ಮೆಚ್ಚಿಕೊಳ್ಳಬೇಕು. ಯಶಸ್ಸು ಸಿಕ್ಕಿದ ಮೇಲೆ ಜೊತೆಯಲ್ಲಿ ಇರೋರನ್ನ ಮರೆಯಬಾರದು. ಟಿವಿಯಲ್ಲಿ ಇದ್ದಾಗ ನೀನು ಜೊತೆಯಲ್ಲಿದ್ದೆ. ಅದನ್ನ ಇಲ್ಲಿಯವರೆಗೂ ಉಳಿಸಿಕೊಂಡಿದ್ಯಲ್ಲಾ. ಅದಕ್ಕೆ ನಿನಗೆ ಒಂದು ಹ್ಯಾಟ್ಸ್ ಆಫ್ ನನ್ನ ಕಡೆಯಿಂದ'' ಅಂತ ಯಶ್ ಗೆ ರವಿಚಂದ್ರನ್ ಹೇಳಿದರು.

  ಯಶ್ ಪಾಲಿಸಿ ಇದು.

  ಯಶ್ ಪಾಲಿಸಿ ಇದು.

  ''ಲೈಫ್ ನಲ್ಲಿ ನಮಗೆ ಗೊತ್ತಿಲ್ಲದೇ ಸಾವಿರಾರು ತಪ್ಪುಗಳನ್ನು ಮಾಡಿದ್ದೀವಿ. ಆದ್ರೆ ಒಂದು ಸಲ ಬುದ್ಧಿ ಬಂದಮೇಲೆ ಮನುಷ್ಯ ಒಂದು ನಿರ್ಧಾರ ಮಾಡ್ತಾನೆ. ಆ ನಿರ್ಧಾರಕ್ಕೆ ಲೈಫ್ ಲಾಂಗ್ ನಿಂತುಕೊಂಟ್ರೆ, ಯಾವತ್ತೂ ವಾಲ್ಯು ಇರುತ್ತೆ ಅನ್ನೋದು ನನ್ನ ನಂಬಿಕೆ'' - ಯಶ್

  ಲಾಂಗೆಸ್ಟ್ ಬಂಧನ

  ಲಾಂಗೆಸ್ಟ್ ಬಂಧನ

  ತಳುಕು-ಬಳುಕಿನ ಲೋಕದಲ್ಲಿ ದಾಂಪತ್ಯದ ಹುಳುಕು ಇರುವ ಅನೇಕ ಸತ್ಯ ಸಂಗತಿಗಳು ಇಂದು ನಮ್ಮ ಕಣ್ಣ ಮುಂದಿವೆ. ಅಂಥದ್ರಲ್ಲಿ ತಮ್ಮ 'ಲಾಂಗೆಸ್ಟ್ ಬಂಧನ'ವನ್ನ ಭದ್ರ ಮಾಡಿಕೊಳ್ಳುತ್ತಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಗೆ ನಾವು-ನೀವು ಶುಭ ಹಾರೈಸೋಣ.

  English summary
  After 5 long years of Dating, Kannada Actor Yash and Kannada Actress Radhika Pandit are finally getting engaged tomorrow (August 12th, 2016) in Goa. For maintaining the strong relationship, Crazy Star Ravichandran had lauded Kannada Actor Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X