For Quick Alerts
  ALLOW NOTIFICATIONS  
  For Daily Alerts

  'ಮಗ ನನಗಿಂತ ಚೆನ್ನಾಗಿ ಕಿಸ್ ಮಾಡುತ್ತಾನೆ' ಎಂದ ನಟ ರವಿಚಂದ್ರನ್

  |

  ಸ್ಯಾಂಡಲ್ ವುಡ್ ನ ಕ್ರೇಜಿ ಸ್ಟಾರ್, ಕನಸುಗಾರ ರವಿಚಂದ್ರನ್ ಇತ್ತೀಚಿಗೆ ಪುತ್ರ ಮನು ರಂಜನ್ ಅಭಿನಯದ ಬಹು ನಿರೀಕ್ಷೆಯ ಪ್ರಾರಂಭ ಸಿನಿಮಾದ ಹಾಡುಗಳ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಮಾತನಾಡಿದ ಕ್ರೇಜಿ ಸ್ಟಾರ್ ಮಗನ ಅಭಿನಯವನ್ನು ಕೊಂಡಾಡಿದರು.

  ಮಗನ ಅಭಿನಯದ ಬಗ್ಗೆ ಕ್ರೇಜಿಸ್ಟಾರ್ ಮಾತು | Ravichandran | Monoranjan | Filmibeat kannada

  ಮಗನ ಸಿನಿಮಾ ಹುಷಾರಾಗಿ ಮಾತನಾಡಿ ಎಂದು ಪತ್ನಿ ರವಿಚಂದ್ರನ್ ಗೆ ಹೇಳಿಕೊಂಡೆ ಕರೆದುಕೊಂಡು ಬಂದಿದ್ದರಂತೆ. ಪತ್ನಿ ಹೇಳಿದ ಮಾತಿನಿಂದನೆ ಮಾತು ಪ್ರಾರಂಭಿಸಿದ ರವಿಚಂದ್ರನ್ ನನಗೆ ಮನು ಸಿನಿಮಾ, ಬೇರೆಯವರ ಸಿನಿಮಾ ಎನ್ನುವುದು ತಲೆಯಲ್ಲಿ ಇರುವುದಿಲ್ಲ. ಪಿಕ್ಟರ್ ಎನ್ನುವುದು ಮಾತ್ರ ತಲೆಯಲ್ಲಿ ಇರುತ್ತೆ" ಎಂದರು.

  ಎಲ್ಲರಿಗೂ ಪ್ರೇಮಿಗಳ ದಿನ, ರಣಧೀರನಿಗೆ ಮದುವೆಯ ಸುದಿನಎಲ್ಲರಿಗೂ ಪ್ರೇಮಿಗಳ ದಿನ, ರಣಧೀರನಿಗೆ ಮದುವೆಯ ಸುದಿನ

  "ಈ ಸಿನಿಮಾದ ಮೂರು ಹಾಡು ಕೇಳಿದಾಗ ಅನಿಸಿದ್ದು. ಲವ್ ನಲ್ಲಿ ನೋವಿದ್ದರೆ ಮಾತ್ರ ತುಂಬ ಚೆನ್ನಾಗಿ ಇರುತ್ತೆ. ನೋವಿನಿಂದ ಹೊರ ಬಂದ ಮೇಲೆಯೇ ಪ್ರೀತಿ ಎನ್ನುವುದು ಎದ್ದು ಕಾಣುತ್ತೆ. ಆ ನೋವು ಈ ಸಿನಿಮಾದಲ್ಲಿ ಇದೆ ಅನಿಸಿತು. ಸಿನಿಮಾದಲ್ಲಿ ಚಿಕ್ಕ ಎಮೋಷನ್ ಇದೆ ಎಂದು ಗೊತ್ತಾಗುತ್ತೆ" ಎಂದರು.

  ಇನ್ನು "ನನ್ನ ಮಗ ನನಗಿಂತ ಚೆನ್ನಾಗಿ ಕಿಸ್ ಮಾಡುತ್ತಾನೆ. ನನಗಿಂತ ಚೆನ್ನಾಗಿ ಸಿಗರೇಟು ಸೇದುತಾನೆ. ನಾನು ಇಷ್ಟೊಂದು ಚೆನ್ನಾಗಿ ಮಾಡಿರಲಿಲ್ಲ. ನನಗಿಂತ ಏನು ಕಮ್ಮಿ ಇಲ್ಲ ಎನ್ನುವುದು ತೆರೆ ಮೇಲೆ ಕಾಣುತ್ತಿದೆ" ಎಂದು ಮಗನ ಅಭಿನಯವನ್ನು ಮೆಚ್ಚಿಕೊಂಡರು. ಚಿಕ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿರುವ ನಿರ್ಮಾಣ ಸಂಸ್ಥೆಗಳಲ್ಲಿ ಈಶ್ವರಿ ಪ್ರೊಡಕ್ಷನ್ ಕೂಡ ಒಂದು.

  ಈಶ್ವರಿ ನಿರ್ಮಾಣ ಸಂಸ್ಥೆ 50 ವರ್ಷದ ಪೂರೈಸಿದ ಸಂತಸವನ್ನು ರವಿಚಂದ್ರನ್ ಹಂಚಿಕೊಂಡರು. ಈಗ ನನ್ನ ಮಕ್ಕಳನ್ನು ದೊಡ್ಡ ವೇದಿಕೆ ಮೇಲೆ ನೋಡಿದಾಗ ಅವರು ಕೂಡ ಸಿನಿಮಾರಂಗಕ್ಕೆ ದೊಡ್ಡ ಕೊಡುಗೆ ಕೊಡಲು ಪ್ರಾರಂಭಿಸಬೇಕು" ಎಂದರು.

  ಇನ್ನು ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಡಾರ್ಲಿಂಗ್ ಕೃಷ್ಣ ಭಾಗಿಯಾಗಿದ್ದರು. ಸದ್ಯ ಲವ್ ಮಾಕ್ಟೈಲ್ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕೃಷ್ಣ, ರವಿಚಂದ್ರನ್ ಪುತ್ರನ ಸಿನಿಮಾದ ಹಾಡುಗಳ ರಿಲೀಸ್ ಗೆ ಗೆಸ್ಟ್ ಆಗಿ ಕಾಣಿಸಿಕೊಂಡಿರುವುದು ವಿಶೇಷ. ಇನ್ನು ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಕಾಣಿಸಿಕೊಂಡಿದ್ದಾರೆ.

  English summary
  Kannada Actor Ravichandran said that My son Manuranjan kisses better than me.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X