For Quick Alerts
  ALLOW NOTIFICATIONS  
  For Daily Alerts

  ಹೆಸರು ಬದಲಿಸಿಕೊಂಡ ರವಿಚಂದ್ರನ್ ಪುತ್ರ ಮನೋರಂಜನ್

  |

  Recommended Video

  Ravichandran son Manoranjan changed his name | Filmibeat Kannada

  ನಟ ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಮನೋರಂಜನ್ ಬದಲು ಮನು ರಂಜನ್ ಎಂದು ಇನ್ನು ಮುಂದೆ ಅವರನ್ನು ಕರೆಯಬೇಕಾಗಿದೆ.

  ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಾವಣೆ ಅಗತ್ಯ ಇದ್ದು, ತಮ್ಮ ಹೆಸರನ್ನು ಕೊಂಚ ಬದಲಾವಣೆ ತಂದಿದ್ದಾರೆ. ಮನೋ ಬದಲು ಮನು ಆಗಿದ್ದಾರೆ. ಇನ್ನು ಮುಂದೆ ಸಿನಿಮಾಗಳ ಟೈಟಲ್ ಕಾರ್ಡ್ ನಲ್ಲಿಯೂ ಇದೇ ಹೆಸರು ಮುಂದುವರೆಯುತ್ತದೆ.

  ಕ್ರೇಜಿಸ್ಟಾರ್ ಪುತ್ರನ 'ಮುಗಿಲ್ ಪೇಟೆ' ಚಿತ್ರದ ನಾಯಕಿ ಯಾರು?ಕ್ರೇಜಿಸ್ಟಾರ್ ಪುತ್ರನ 'ಮುಗಿಲ್ ಪೇಟೆ' ಚಿತ್ರದ ನಾಯಕಿ ಯಾರು?

  ಮನು ರಂಜನ್ 'ಸಾಹೇಬ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದರು. ಆ ಸಿನಿಮಾ ಕೆಲವು ಪ್ರೇಕ್ಷಕರಿಗೆ ಇಷ್ಟ ಆಯ್ತು. ನಂತರ ಬಿಡುಗಡೆಯಾದ 'ಬೃಹಸ್ಪತಿ' ಫ್ಲಾಪ್ ಸಿನಿಮಾವಾಯ್ತು. ಇದೀಗ ಮೂರನೇ ಸಿನಿಮಾದ ಮೂಲಕ ಮನು ರಂಜನ್ ಬದಲಾವಣೆ ಬಯಸಿದ್ದಾರೆ. ಅದು ಅವರ ಹೆಸರಿನಲ್ಲಿಯೇ ಶುರುವಾಗಿದೆ.

  ಇತ್ತೀಚಿಗಷ್ಟೆ ತಮ್ಮ 'ಮುಗಿಲ್ ಪೇಟೆ' ಸಿನಿಮಾ ಲಾಂಚ್ ಆಗಿದೆ. ಈ ಸಿನಿಮಾದ ಪೋಸ್ಟರ್ ನಲ್ಲಿಯೂ ಮನು ರಂಜನ್ ಎಂದು ಬರೆಯಲಾಗಿದೆ. ಭರತ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ನೀಡುತ್ತಿದ್ದಾರೆ. ಖಯಾದು ಮೋಹನ್ ಲೋರಾ ಸಿನಿಮಾದ ನಾಯಕಿಯಾಗಿದ್ದಾರೆ.

  ರವಿಚಂದ್ರನ್ ಸಿನಿಮಾ ನೋಡಿ ಅವ್ರ ಮಕ್ಕಳೇ ಭಯ ಪಟ್ಟರುರವಿಚಂದ್ರನ್ ಸಿನಿಮಾ ನೋಡಿ ಅವ್ರ ಮಕ್ಕಳೇ ಭಯ ಪಟ್ಟರು

  'ಗಾಳಿಪಟ' ಸಿನಿಮಾದಲ್ಲಿ 'ಮುಗಿಲ್ ಪೇಟೆ' ಎಂಬ ಊರಿನ ಹೆಸರು ಫೇಮಸ್ ಆಗಿದ್ದು, ಅದೇ ಈ ಸಿನಿಮಾದ ಶೀರ್ಷಿಕೆಯಾಗಿದೆ. ಸಿನಿಮಾ ಒಂದು ಲವ್ ಸ್ಟೋರಿಯಾಗಿದೆ. ಇದು ಮನು ರಂಜನ್ ನಟನೆಯ ನಾಲ್ಕನೇ ಸಿನಿಮಾ.

  English summary
  Ravichandran son Manoranjan changed his name as Manuranjan.
  Monday, November 18, 2019, 9:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X