For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿತೆರೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಪುತ್ರ

  By Rajendra
  |

  ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಮೊದಲ ಪುತ್ರ ಮನೋರಂಜನ್ ಅವರನ್ನು ಶೀಘ್ರದಲ್ಲೇ ಬೆಳ್ಳಿತೆರೆಗೆ ಪರಿಚಯಿಸಲು ಭೂಮಿಕೆ ಸಿದ್ಧವಾಗಿದೆ. ಅಷ್ಟರಲ್ಲಾಗಲೆ ತಮ ಎರಡನೇ ಕುವರ ವಿಕ್ರಮ್‌ನನ್ನು ಬೆಳ್ಳಿಪರದೆಗೆ ಪರಿಚಯಿಸುತ್ತಿದ್ದಾರೆ.

  ರವಿಚಂದ್ರನ್ ಆಕ್ಷನ್ ಕಟ್ ಹೇಳುತ್ತಿರುವ ಕ್ರೇಜಿಸ್ಟಾರ್ ಚಿತ್ರದಲ್ಲಿ ವಿಕ್ರಮ್ ಅವರದು ಮಹತ್ವದ ಪಾತ್ರ. ಚಿತ್ರದಲ್ಲಿ ಅವರು ಡೇರಿಂಗ್ ಕಾರ್ ಡ್ರೈವರ್ ಆಗಿ ಕಾಣಿಸಲಿದ್ದಾರೆ ಎಂಬ ಮಾಹಿತಿ ಇದೆ. ಅದು ಬಿಟ್ಟರೆ ವಿಕ್ರಮ್ ಪಾತ್ರದ ಬಗ್ಗೆ ರವಿಚಂದ್ರನ್ ಹೆಚ್ಚಿನ ಸುಳಿವು ಬಿಟ್ಟುಕೊಟ್ಟಿಲ್ಲ.

  ಈ ಚಿತ್ರದಲ್ಲಿ ರವಿಚಂದ್ರನ್ ಜೊತೆ ಮತ್ತೊಮ್ಮೆ ಪ್ರಿಯಾಂಕಾ ಉಪೇಂದ್ರ ಅಭಿನಯಿಸುತ್ತಿದ್ದಾರೆ. ನಿರ್ದೇಶನದ ಜೊತೆಗೆ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಸಂಗೀತ ನಿರ್ದೇಶನ, ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಸಿ.ಎಸ್.ವಿ. ಸೀತಾರಾಮ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

  ಕ್ರೇಜಿಸ್ಟಾರ್ ಚಿತ್ರದ ನಿರ್ಮಾಪಕರು ಎನ್ ಎಸ್ ರಾಜಶೇಖರ್. ಮೂಲಗಳ ಪ್ರಕಾರ ಇದು ಮಲಯಾಳಂನ ಯಶಸ್ವಿ ಚಿತ್ರ 'ಟ್ರಾಫಿಕ್' ರೀಮೇಕ್ ಎನ್ನಲಾಗಿದೆ. ಆದರೆ ರವಿಚಂದ್ರನ್ ಮೂಲ ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ತರದೆ ಅಲ್ಪಸ್ವಲ್ಪ ಬದಲಾವಣೆಗಳನ್ನೂ ಮಾಡಿಕೊಂಡು ತರಲಿದ್ದಾರಂತೆ. (ಏಜೆನ್ಸೀಸ್)

  English summary
  Kannada films dream marchant Ravichandran second son Vikram debuts in his upcoming film Crazy Star. He will play the role of a daring car driver in this film. Ravichandran and Priyanka Upendra will be playing lead roles in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X