»   » 'ಕುರುಕ್ಷೇತ್ರ' ಚಿತ್ರದ ಮೇಕಪ್, ಕಾಸ್ಟ್ಯೂಮ್ ರಿಜೆಕ್ಟ್ ಮಾಡಿದ್ದ ರವಿಚಂದ್ರನ್.!

'ಕುರುಕ್ಷೇತ್ರ' ಚಿತ್ರದ ಮೇಕಪ್, ಕಾಸ್ಟ್ಯೂಮ್ ರಿಜೆಕ್ಟ್ ಮಾಡಿದ್ದ ರವಿಚಂದ್ರನ್.!

Posted By:
Subscribe to Filmibeat Kannada
ಕುರುಕ್ಷೇತ್ರ' ಚಿತ್ರದ ಮೇಕಪ್, ಕಾಸ್ಟ್ಯೂಮ್ ರಿಜೆಕ್ಟ್ ಮಾಡಿದ್ದ ರವಿಚಂದ್ರನ್ | Filmibeat Kannada

ಕನ್ನಡದ ಪ್ರತಿಷ್ಠಿತ ಸಿನಿಮಾ 'ಕುರುಕ್ಷೇತ್ರ' ಚಿತ್ರದಲ್ಲಿ ನಟ ರವಿಚಂದ್ರನ್ ಕೃಷ್ಣನ ಪಾತ್ರವನ್ನು ಮಾಡಿದ್ದಾರೆ. ದರ್ಶನ್ ಅಭಿನಯದ 50ನೇ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ಕೃಷ್ಣನಾಗಿ ಕಾಣಿಸಿಕೊಂಡಿದ್ದಾರೆ.

ಸದ್ಯ ಇದೇ ಮೊದಲ ಬಾರಿಗೆ ನಟ ರವಿಚಂದ್ರನ್ 'ಕುರುಕ್ಷೇತ್ರ' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ರವಿಚಂದ್ರನ್ 'ಕುರುಕ್ಷೇತ್ರ'ದ ತಮ್ಮ ಕೃಷ್ಣನ ಪಾತ್ರ ಬಗ್ಗೆ ಇರುವ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಕನಸಲ್ಲಿಯೂ ಅಂದುಕೊಂಡಿರಲಿಲ್ಲ

''57ನೇ ವಯಸ್ಸಿನಲ್ಲಿ ಈ ಹೊಟ್ಟೆ ಇಟ್ಟುಕೊಂಡು ನಾನು ಕೃಷ್ಣನ ಪಾತ್ರ ಮಾಡುತ್ತೇನೆ ಎಂದು ಕನಸಿನಲ್ಲಿಯೂ ಯೋಚನೆ ಮಾಡಿರಲಿಲ್ಲ. ಅದೇ ರೀತಿ ಎಲ್ಲರಿಗೂ ರವಿಚಂದ್ರನ್ ಗಡ್ಡ ತೆಗೆದರೆ ಹೇಗೆ ಕಾಣುತ್ತಾರೆ ಎನ್ನುವ ಪ್ರಶ್ನೆ ಇತ್ತು.'' - ರವಿಚಂದ್ರನ್, ನಟ

ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ

''ಮೊದಲು 'ಕುರುಕ್ಷೇತ್ರ' ಚಿತ್ರಕ್ಕಾಗಿ ಮುನಿರತ್ನ ಅವರು ಮಾತನಾಡಿದಾಗ ನಾನು ನಂಬಿರಲಿಲ್ಲ. ನಂಗೆ ಹೊಟ್ಟೆ ಇದೆ... ಇವರು ಕೃಷ್ಣನ ಪಾತ್ರವನ್ನು ಬೇರೆಯವರಿಗೆ ಚೇಂಜ್ ಮಾಡಬಹುದು ಎಂದುಕೊಂಡಿದೆ. ಅದಕ್ಕೆ ಈ ಚಿತ್ರವನ್ನು ನಾನು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದರೆ ಮುನಿರತ್ನ ಬಂದು ಅಡ್ವಾನ್ಸ್ ಕೊಟ್ಟ ಮೇಲೆ ನನಗೂ ಚಿತ್ರದ ಬಗ್ಗೆ ಪಕ್ಕಾ ಆಯ್ತು'' - ರವಿಚಂದ್ರನ್, ನಟ

ಅಪ್ಪನ ರೀತಿ ಇದ್ದೀನಿ ಅಂತ ಹೇಳಿದ್ರು

''ಕುರುಕ್ಷೇತ್ರ' ಚಿತ್ರೀಕರಣಕ್ಕೆ ಮೂರು ದಿನದ ಮುಂಚೆ ಹೋಗಿದ್ದೆ. ಮೊದಲು ಮೀಸೆ ತೆಗೆದು ನಾನು ನನ್ನ ಮುಖ ನೋಡಿಕೊಂಡೆ. ಆಗ ಯಾರೋ ಬಂದು ''ಸರ್, ನೀವು ನಿಮ್ಮ ಅಪ್ಪನ ರೀತಿ ಕಾಣಿಸುತ್ತಿದ್ದೀರಾ'' ಅಂದರು. ಅಲ್ಲಿಯೇ ನನಗೆ ಸಣ್ಣ ನಗು ಮೂಡಿತು'' - ರವಿಚಂದ್ರನ್, ನಟ

ಮೇಕಪ್ ಇಷ್ಟ ಆಗಲಿಲ್ಲ.

''ಮೊದಲ ದಿನ ಮೇಕಪ್ ಹಾಕಿದರು.. ಆದರೆ ನನಗೆ ಅದು ಇಷ್ಟ ಆಗಲಿಲ್ಲ. ನಾಲ್ಕು ಗಂಟೆ ಮೇಕಪ್ ಮಾಡಿ ಪೂರ್ತಿ ನೀಲಿ ಬಣ್ಣ ಬಳಿದಿದ್ದರು. ಅದನ್ನು ನಾನು ಇಷ್ಟಪಡಲಿಲ್ಲ. ಆ ಗೆಟಪ್ ಇಷ್ಟ ಆಗಲಿಲ್ಲ. ಟೈಂ ಕೊಡಿ ಅಂತ ಕೇಳಿ ಅಂದು ಚಿತ್ರೀಕರಣಕ್ಕೆ ಕೂಡ ಹೊಗಲಿಲ್ಲ'' - ರವಿಚಂದ್ರನ್, ನಟ

ಕಾಸ್ಟ್ಯೂಮ್ ಕೂಡ ಸರಿ ಇರಲಿಲ್ಲ

''ಮರು ದಿನ ನಾಲ್ಕು ಕಲರ್ ನಾನೇ ತರಿಸಿದೆ. ಅದರಲ್ಲಿ ಒಂದು ಕಲರ್ ಮೇಕಪ್ ಹಾಕಿಕೊಂಡೆ. ಕಸ್ಟ್ಯೂಮ್ ಕೂಡ ಸರಿ ಇರಲಿಲ್ಲ.. ನನಗೆ ಇಷ್ಟ ಆಗಲಿಲ್ಲ. ಬಳಿಕ ಬೇರೆ ಕಾಸ್ಟ್ಯೂಮ್ ತರಿಸಿ ಮೂರನೇ ದಿನ ಸಂಜೆ ಕೃಷ್ಣನ ಗೆಟಪ್ ಹಾಕಿ ಸೆಟ್ ಗೆ ಹೋದೆ'' - ರವಿಚಂದ್ರನ್, ನಟ

'ಕುರುಕ್ಷೇತ್ರ'ಕ್ಕೆ ಹಿಂದಿಯಲ್ಲಿ ಇಷ್ಟೊಂದು ಬೆಲೆನಾ? ಇತಿಹಾಸ ನಿರ್ಮಿಸಿದ ಕನ್ನಡ ಚಿತ್ರ.!

ಕೈ ಮುಗಿದು ಕಾಲಿಗೆ ಬಿದ್ದರು.!

''ಶೂಟಿಂಗ್ ಸೆಟ್ ನಲ್ಲಿ ಮೊದಲು ನನ್ನನ್ನು ನೋಡಿ ಯಾರು ನಂಬಲಿಲ್ಲ. ಅದೇ ಟೈಮ್ ಗೆ ನಾನು 8 ಕೆ.ಜಿ ತೂಕ ಕಡಿಮೆ ಆಗಿದ್ದೆ. ನನ್ನನ್ನು ಕೃಷ್ಣನ ವೇಷದಲ್ಲಿ ನೋಡಿ ಅಲ್ಲಿದ್ದ ಅನೇಕರು ಕೈ ಮುಗಿದು ಕಾಲಿಗೆ ಬಿದ್ದರು. ಅಲ್ಲಿಂದ ಆ ಪಾತ್ರ ಶುರುವಾಯ್ತು'' - ರವಿಚಂದ್ರನ್, ನಟ

'ಕುರುಕ್ಷೇತ್ರ'ದ ಒಂದು ಹಾಡಿಗೆ ಒಂದು ಕೋಟಿ ಸುರಿದ ನಿರ್ಮಾಪಕ ಮುನಿರತ್ನ!

5 ನಿಮಿಷಕ್ಕೆ ಮುಂಚೆ ಡೈಲಾಗ್ ನೋಡುತ್ತಿದ್ದೆ

''ಈ ಚಿತ್ರದಲ್ಲಿ ಡೈಲಾಗ್ ಶೀಟ್ ಅನ್ನು ಮೊದಲೇ ಮನೆಗೆ ಕಳುಹಿಸಿದರು. ಆದರೆ ಒಂದು ದಿನವೂ ನಾನು ಅದನ್ನು ನೋಡಿರಲಿಲ್ಲ. ನನಗೆ ಮೊದಲಿನಿಂದ ಡೈಲಾಗ್ ಓದಿಕೊಂಡು ಬರುವುದು ಸರಿ ಎನಿಸುವುದಿಲ್ಲ. ಅದಕ್ಕೆ ಶೂಟಿಂಗ್ ಗೆ 5 ನಿಮಿಷಕ್ಕೆ ಮುಂಚೆ ಡೈಲಾಗ್ ನೋಡಿ ಒಂದೇ ಟೇಕ್ ನಲ್ಲಿ ಸೀನ್ ಮುಗಿಸುತ್ತಿದ್ದೇ'' - ರವಿಚಂದ್ರನ್, ನಟ

English summary
Kannada Actor Ravichandran spoke about 'Kurukshetra' movie in his recent interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X