For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬರುತ್ತಿದೆ ರವಿಚಂದ್ರನ್ 'ಅಂಜದ ಗಂಡು'

  By Bharathkumar
  |

  ಸ್ಯಾಂಡಲ್ ವುಡ್ ನಲ್ಲಿ ಹಳೆಯ ಸಿನಿಮಾಗಳು ಮತ್ತೆ ತೆರೆಗೆ ಬರುವುದು ಹೊಸದೇನಲ್ಲ. ಹಲವು ಯಶಸ್ವಿ ಚಿತ್ರಗಳು ಹೊಸ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಯಾಗಿ ಯಶಸ್ವಿಯಾಗಿವೆ. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ಸೇರಿದಂತೆ ಹಲವು ನಟರ ಚಿತ್ರಗಳು ರಿ-ರಿಲೀಸ್ ಆಗಿವೆ. ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಸರದಿ.

  ಹೌದು, ಸುಮಾರು 25 ವರ್ಷಗಳ ಹಿಂದೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ 'ಅಂಜದ ಗಂಡು' ಚಿತ್ರ ಮತ್ತೆ ತೆರೆಮೇಲೆ ಬರುತ್ತಿದೆ.

  ಕ್ರೇಜಿಸ್ಟಾರ್ ಅಭಿನಯದ 'ಅಂಜದ ಗಂಡು' ಹೊಸ ತಂತ್ರಜ್ಞಾನದೊಂದಿಗೆ 5.1 ಸೌಂಡ್ ಸಿಸ್ಟಂನಲ್ಲಿ ಮರು ರೂಪ ಪಡೆದು ಇದೇ ವಾರ ಅಂದ್ರೆ, ಡಿಸೆಂಬರ್ 2 ರಂದು ಚಿತ್ರಮಂದಿರಕ್ಕೆ ಬರಲಿದೆ. ಹೀಗಾಗಿ ರವಿಚಂದ್ರನ್ ಅಭಿಮಾನಿಗಳಿಗೆ ಈ ವಾರ ಸಂಭ್ರಮಾಚರಣೆ ಆಗಲಿದೆ.

  ಅಂದ್ಹಾಗೆ, 'ಅಂಜದ ಗಂಡು' 1988 ರಲ್ಲಿ ತೆರೆಕಂಡಿದ್ದ ಬ್ಲ್ಯಾಕ್ ಬಸ್ಟರ್ ಸಿನಿಮಾ. ರವಿಚಂದ್ರನ್ ಅಭಿನಯಿಸಿದ್ದ ಈ ಚಿತ್ರದಲ್ಲಿ ಬಹುಭಾಷ ನಟಿ ಖುಷ್ಬೂ ನಾಯಕಿಯಾಗಿದ್ದರು. ತೂಗುದೀಪ ಶ್ರೀನಿವಾಸ್, ಶ್ರೀನಿವಾಸಮೂರ್ತಿ, ದೇವರಾಜ್, ಅರವಿಂದ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು ಮೊದಲಾದವರು ಅಭಿನಯಿಸಿದ್ದರು. ಖ್ಯಾತ ನಿರ್ದೇಶಕ ರೇಣುಕ ಶರ್ಮಾ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಹಂಸಲೇಖ ಅವರ ಸಂಗೀತದ ಹಾಡುಗಳು ಸೂಪರ್ ಹಿಟ್ ಆಗಿತ್ತು.

  'ಅಂಜದ ಗಂಡು' ಚಿತ್ರದ ಮೂಲ ನಿರ್ಮಾಪಕ ಬಿ.ಎನ್. ಗಂಗಾಧರ್ ಅವರೇ, ಈಗ ಈ ಚಿತ್ರವನ್ನ ರಿ-ರಿಲೀಸ್ ಮಾಡುತ್ತಿದ್ದು, ಹೊಸ ತಂತ್ರಜ್ಞಾನದಲ್ಲಿ ಹಳೇ 'ಅಂಜದ ಗಂಡು' ಚಿತ್ರವನ್ನ ನೋಡಬಹುದಾಗಿದೆ.

  English summary
  Kannada Movie 'Anajada Gandu' is now Re releasing with a new print with 5.1 sound. Crazy Star Ravichandran and kushboo starrer Anjada Gandu was a super hit movie in 1988. Veteran director Renuka Sharma was the director for Anjada Gandu and Hamsalekha was the music director. Movie was produced by BN Gangadhar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X