Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕ್ರೇಜಿ ಸ್ಟಾರ್ ರವಿಚಂದ್ರನ್ ಗಾಗಿ 'ರವಿ' ಆದ 'ಜೋಸೆಫ್'
ಕ್ರೇಜಿ ಸ್ಟಾರ್ ರವಿಚಂದ್ರನ್ ಇತ್ತೀಚಿಗಷ್ಟೆ ಪಡ್ಡೆಹುಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ರು. ಇನ್ನು ಕನಸುಗಾರ ಅಬಿನಯದ ಎರಡು ಸಿನಿಮಾಗಳು 'ದಶರಥ' ಮತ್ತು 'ರಾಜೇಂದ್ರ ಪೊನ್ನಪ್ಪ' ರಿಲೀಸ್ ಗೆ ರೆಡಿಯಾಗಿವೆ. ಇದೆಲ್ಲದರ ನಡುವೆ ಈಗ ಮತ್ತೊಂದು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಹೌದು, ರವಿಚಂದ್ರನ್ ಸದ್ಯ 'ರವಿ' ಚಿತ್ರದಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಇತ್ತೀಚಿಗಷ್ಟೆ 'ರವಿ' ಚಿತ್ರದ ಮುಹೂರ್ತ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ರವಿಮಾಮನ ಪ್ರೀತಿಯ ಸ್ಥಳ ಮಂಜಿನ ನಗರಿ ಕೊಡಗಿನಲ್ಲಿ ಚಿತ್ರದ ಮುಹೂರ್ತ ಮಾಡಲಾಗಿದೆ. ಸೋಮವಾರಪೇಟೆ ತಾಲೂಕಿನ ನಾಕೂರು ಗ್ರಾಮದ ಹಾರಂಗಿ ಜಲಾಶಯದ ಹಿನ್ನೀರಿನ ಬಳಿ ಇರುವ ಹೋ ಸ್ಟೇ ಒಂದರಲ್ಲಿ ಚಿತ್ರದ ಪೂಜೆ ಮಾಡಲಾಗಿದೆ.
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರವಿಚಂದ್ರನ್ ಎರಡನೆ ಪುತ್ರ
ಜೋಸಫ್ ಹೇಗೆ ರವಿ ಆಗಿದ್ದಾರೆ ಅಂತ ಅಚ್ಚರಿ ಪಡಬೇಡಿ. 'ರವಿ' ಸಿನಿಮಾ ಮಲಯಾಳಂನ 'ಜೋಸೆಪ್' ಸಿನಿಮಾದ ರಿಮೇಕ್ ಅಂತೆ. ಕಳೆದ ವರ್ಷ ಅಂದ್ರೆ 2018ರಲ್ಲಿ ಮಲಯಾಳಂನಲ್ಲಿ ತೆರೆಕಂಡ ಸಿನಿಮಾ. ಈಗ ಕನ್ನಡದಲ್ಲಿ ರವಿ ಆಗಿ ಮುಹೂರ್ತ ಮಾಡಿಕೊಂಡು ಚಿತ್ರೀಕರಣ ಕೂಡ ಪ್ರಾರಂಭವಾಗಿದೆ. ವಿಶೇಷ ಅಂದ್ರೆ ಬಹುತೇಕ ಚಿತ್ರೀಕರಣ ಕೊಡಗಿನ ಸುತ್ತಮುತ್ತ ನಡೆಯಲಿದೆಯಂತೆ.
ಈ ಹಿಂದೆ ಮಲಯಾಳಂನ ಸಿನಿಮಾದ ರೀಮೇಕ್ 'ದೃಶ್ಯಂ' ಚಿತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದರು. 'ದೃಶ್ಯಂ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ಈಗ ಮಲಯಾಳಂನ ಮತ್ತೊಂದು ಭಾವನಾತ್ಮಕ ಸಿನಿಮಾದ ರೀಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಅಂದ್ಹಾಗೆ ಚಿತ್ರಕ್ಕೆ ಅಜಿತ್ ಸರ್ಕಾರ್ ಅಕ್ಷನ್ ಕಟ್ ಹೇಳುತ್ತಿದ್ದಾರೆ. ಚೊಚ್ಚಲ ಬಾರಿಗೆ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣದ ಹೊಣೆ ಕೂಡ ಹೊತ್ತುಕೊಂಡಿದ್ದಾರೆ. ದೃಶ್ಯ ಸಿನಿಮಾದಂತೆ ಈ ಸಿನಿಮಾ ಕೂಡ ವಿಭಿನ್ನ ಚಿತ್ರವಾಗಿರಲಿದ್ದು ರವಿಚಂದ್ರನ್ ಸಿನಿಮಾ ಬದುಕಿನ ಉತ್ತಮ ಚಿತ್ರವಾಗಲಿದೆ ಎನ್ನುವುದು ಚಿತ್ರತಂಡದ ಮಾತು.