For Quick Alerts
  ALLOW NOTIFICATIONS  
  For Daily Alerts

  ಅಪ್ಪನ ಎವರ್ ಗ್ರೀನ್ ಹಾಡಿಗೆ 'ಮನೋರಂಜನ್' ಮಸ್ತ್ ಡ್ಯಾನ್ಸ್ !

  By Bharathkumar
  |

  ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ ಚೊಚ್ಚಲ ಸಿನಿಮಾ 'ಸಾಹೇಬ' ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿ, ಬಿಡುಗಡೆಗೆ ಸಿದ್ದವಾಗ್ತಿದೆ. ಈ ಮಧ್ಯೆ 'ಸಾಹೇಬ' ಚಿತ್ರತಂಡದಿಂದ ಸೆನ್ಸೇಷ್ನಲ್ ನ್ಯೂಸ್ ವೊಂದು ಹೊರ ಬಿದ್ದಿದೆ.

  ಮೊದಲ ಸಿನಿಮಾದಲ್ಲೇ ಕ್ರೇಜಿಸ್ಟಾರ್ ಪುತ್ರ, ಸಖತ್ ಸ್ಪೆಷಾಲಿಟಿಗಳ ಜೊತೆ ಎಂಟ್ರಿ ಕೊಡ್ತಿದ್ದಾರೆ. 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವತ್ಸವ್ ಈ ಚಿತ್ರದ ನಾಯಕಿಯಾಗಿದ್ದು, ಭರತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಂಗೀತ ಮಾಂತ್ರಿಕ ವಿ.ಹರಿಕೃಷ್ಣ ಅವರ ಮ್ಯೂಸಿಕ್ ಕಂಪೋಸಿಷನ್ ಈ ಚಿತ್ರಕ್ಕಿದ್ದು, ಜಿ.ಎಸ್.ವಿ ಸೀತಾರಾಮ ಅವರು ಕ್ಯಾಮರಾ ಕೈ ಚಳಕ ತೋರಲಿದ್ದಾರೆ.[ಕುದುರೆ ಸವಾರಿಗೆ ತರಬೇತಿ ಪಡೆಯುತ್ತಿದ್ದಾರೆ 'ಕ್ರೇಜಿಸ್ಟಾರ್' ಪುತ್ರ]

  ಇನ್ನೂ, 'ಸಾಹೇಬ' ಚಿತ್ರದಿಂದ ಬಂದಿರುವ ಲೆಟೇಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ಮನೋರಂಜನ್ ಚೊಚ್ಚಲ ಚಿತ್ರದಲ್ಲಿ ಕ್ರೇಜಿಸ್ಟಾರ್ ಕಾಣಿಸಿಕೊಳ್ಳಲಿದ್ದಾರಂತೆ. 'ಸಾಹೇಬ' ಚಿತ್ರದಲ್ಲಿ ಕ್ರೇಜಿಸ್ಟಾರ್ ಆಕ್ಟಿಂಗ್ ಅಂತ ಶಾಕ್ ಆಗ್ಬೇಡಿ. ರವಿಚಂದ್ರನ್ ಅವರ ಬದಲು, ಅವರು ಅಭಿನಯದ ಹಾಡೊಂದು, 'ಸಾಹೇಬ'ನಿಗೆ ಸಾಥ್ ಕೊಡಲಿದೆ.['ಸಾಹೇಬ' ಚಿತ್ರದ ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಶಾನ್ವಿ ಶ್ರೀವಾತ್ಸವ]

  Ravichandran Superhit Song Re Used in Saheba Movie

  ಹೌದು, ರವಿಚಂದ್ರನ್ ಅವರ ಎವರ್ ಗ್ರೀನ್ ಹಾಡು, 'ಯಾರೇ ನೀನು ರೋಜಾ ಹೂವೇ', ಈಗ ಮನೋರಂಜನ್ ಅವರ 'ಸಾಹೇಬ' ಚಿತ್ರದಲ್ಲಿ ಬಳಸಲಾಗಿದೆ. 1985 ರಲ್ಲಿ ತೆರೆಕಂಡಿದ್ದ 'ನಾನು ನನ್ನ ಹೆಂಡ್ತಿ' ಚಿತ್ರದ ಹಾಡು ಇದಾಗಿದ್ದು, ಎಸ್ ಪಿ ಬಾಲಸುಬ್ರಮಣ್ಯಂ ಅವರು ಹಾಡಿದ್ದರು. ಹಂಸಲೇಖ ಅವರ ಸಾಹಿತ್ಯ ಹಾಗೂ ಶಂಕರ್ ಗಣೇಶ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿತ್ತು.[ಮನೋರಂಜನ್ 'ಸಾಹೇಬ'ನಿಗೆ 'ಮಾಸ್ಟರ್ ಪೀಸ್' ಶಾನ್ವಿ ಸಾಥ್]

  ಇಂತಹ ಸೂಪರ್ ಹಿಟ್ ಹಾಡನ್ನ ಕ್ರೇಜಿಸ್ಟಾರ್ ಪುತ್ರ ಮನೋರಂಜನ್, ತಮ್ಮ ಚೊಚ್ಚಲ ಚಿತ್ರದಲ್ಲಿ ಬಳಸಿಕೊಂಡಿದ್ದು, ಅಪ್ಪನಂತೆ ಕ್ರೇಜಿ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿದ್ದಾರೆ.

  ಜಯಣ್ಣ-ಭೋಗೇಂದ್ರ 'ಸಾಹೇಬ' ಚಿತ್ರಕ್ಕೆ ಬಂಡವಾಳ ಹೂಡಿದ್ದು, ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೂಡ ಬಹುತೇಕ ಮುಗಿಸಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ, ಡಿಸೆಂಬರ್ ನಲ್ಲಿ 'ಸಾಹೇಬ' ಬಿಡುಗಡೆಯಾಗಬೇಕಿತ್ತು. ಆದ್ರೀಗ, ಜನವರಿಯಲ್ಲಿ ಚಿತ್ರಮಂದಿರಕ್ಕೆ ಬರುವ ಯೋಚನೆಯಲ್ಲಿದೆ 'ಸಾಹೇಬ'.

  English summary
  The popular song from early in Ravichandran's career, Yaare Neenu Roja Hoove, from the 1985 film Naanu Nanna Hendthi, will Re Used in Ravichandran son Manoranjan debut movie Saheba.
  Saturday, November 26, 2016, 18:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X