Just In
Don't Miss!
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Sports
ಐಪಿಎಲ್ 2021: ತಂಡದಿಂದ ಸ್ಟೀವ್ ಸ್ಮಿತ್ ಕೈಬಿಟ್ಟ ರಾಜಸ್ಥಾನ್ ರಾಯಲ್ಸ್
- News
ಒಂದೇ ವಾರದಲ್ಲಿ ಬೃಹತ್ ಕ್ವಾರೆಂಟೈನ್ ಕೇಂದ್ರ ನಿರ್ಮಿಸಿದ ಚೀನಾ
- Lifestyle
ಜನವರಿ 23 ಪರಾಕ್ರಮ ದಿವಸ್: ಸುಭಾಷ್ ಚಂದ್ರ ಬೋಸ್ ಬಗ್ಗೆ ನಿಮಗೆ ತಿಳಿದಿರದ ಸಂಗತಿಗಳು
- Automobiles
ಸನ್ ಫಿಲ್ಮ್ ತೆರವಿಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸ್ ಇಲಾಖೆ
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಆಕ್ರೆಸ್ಟ್ರಾದಲ್ಲಿ ಕೆಲಸ ಮಾಡಿ ತಂಗಿಯರ ಮದುವೆ ಮಾಡಿದೆ'; ಕಷ್ಟದ ದಿನಗಳನ್ನು ನೆನೆದ ರವಿಶಂಕರ್ ಗೌಡ
ಸ್ಯಾಂಡಲ್ ವುಡ್ ನಟ ರವಿಶಂಕರ್ ಗೌಡ ಮತ್ತು ಶಿವರಾಜ್ ಕೆಆರ್ ಪೇಟೆ ನಟನೆಯ 'ಪುರ್ ಸೋತ್ ರಾಮ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚಿಗೆಷ್ಟೆ ಚಿತ್ರದ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ನಟ ರವಿಶಂಕರ್ ಗೌಡ ತಾವು ಕಷ್ಟದಿಂದ ಬೆಳೆದ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಹಾಸ್ಯದ ಜೊತೆಗೆ ಒಂದೊಳ್ಳೆ ಸಂದೇಶ ಕೂಡ ಇದೆ ಅಂತ ಹೇಳಿರುವ ರವಿಶಂಕರ್, ಮನೆಗೆ ಆಧಾರವಾಗಿರಬೇಕು, ದುಡಿಯಬೇಕು, ತಂದೆ ತಾಯಿಗೆ ಬೆಂಬಲವಾಗಿ ನಿಂತುಕೊಳ್ಳಬೇಕು, ಅಪ್ಪನ ಸಂಪಾದನೆಯಿಂದ ಐದು ಜನ ಬದುಕಲು ಕಷ್ಟವಾಗುತ್ತೆ ಎನ್ನುವ ಎನ್ನುವ ಸಂದೇಶವಿದೆ ಎಂದು ಸಿನಿಮಾದ ಸಾರಾಂಶ ಹೇಳುವ ಜೊತೆಗೆ ತಮ್ಮ ಕಷ್ಟಗಳ ದಿನಗಳನ್ನು ಮೆಲುಕು ಹಾಕಿದ್ದಾರೆ. ಮುಂದೆ ಓದಿ..
ನಾ ಕಂಡಂತೆ ವಿಷ್ಣುವರ್ಧನ್: 'ಮಗು ಮನಸ್ಸಿನ ಹೃದಯವಂತ'- ರವಿಶಂಕರ್ ಗೌಡ

'ಬೇಗ ಎದ್ದು ಪೇಪರ್ ಹಾಕಿ, ಹಾಲು ಹಾಕುತ್ತಿದ್ದೆ..'
'ನಮ್ಮನೆಯಲ್ಲಿ ಅಪ್ಪ ಒಬ್ಬರೇ ಸಂಪಾದನೆ ಮಾಡುತ್ತಿದ್ದರು. ನಾನು ಒಬ್ಬನೇ ಮಗ. ನನಗೆ ಇಬ್ಬರು ತಂಗಿಯರಿದ್ದರು. ನಾನು ನಿರ್ಧರಿಸಿ ನಾನು ಬೆಳಗ್ಗೆ ಎದ್ದು ಹಾಲು ಹಾಕಲು ಹೋಗುತ್ತಿದ್ದೆ. ಹಾಲು ಹಾಕುವ ಮೊದಲು ಪೇಪರ್ ಹಾಕಲು ಹೋಗುತ್ತಿದೆ. 5.30 ಎದ್ದು ಪೇಪರ್ ಹಾಕಿ, 6 ಗಂಟೆಗೆ ಹಾಲು ಡೈರಿಗೆ ಬಂದು ಹಾಲು ತೆಗೆದುಕೊಂಡು ಅಕ್ಕಪಕ್ಕದ ಏರಿಯಾಗಳಿಗೆ ಹಾಲು ಹಾಕುತ್ತಿದ್ದೆ' ಎಂದು ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಮಂಡ್ಯದ ಅನೇಕ ಮನೆಗಳಿಗೆ ಆಂಟೇನಾ ಕಟ್ಟಿದ್ದೇನೆ
'ಆಗ ಶಾಲೆಗೆ ಹೋಗುತ್ತಿದ್ದೆ. ರಜಾ ದಿನಗಳಲ್ಲಿ ಟಿವಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದೆ. ಮಂಡ್ಯದಲ್ಲಿ ಏನಿಲ್ಲವೆಂದರೂ 500 ಮನೆಗಳಿಗೆ ನಾನು ಆಂಟೆನಾ ಕಟ್ಟಿದ್ದೇನೆ. ಪಾತ್ರೆ ಮಾರುವ ಕೆಲಸ ಮಾಡಿದ್ದೇನೆ. ಅನುಕಂಪ ಗಿಟ್ಟಿಸಿಕೊಳ್ಳಲು ಹೇಳುತ್ತಿಲ್ಲ. ನಾನು ಮಾಡಿದ ಕೆಲಸವನ್ನು ಹೇಳುತ್ತಿದ್ದೀನಿ' ಎಂದಿದ್ದಾರೆ.
ರವಿಶಂಕರ್ ಗೌಡ ಹುಟ್ಟುಹಬ್ಬಕ್ಕೆ ಸ್ಪೆಷಲ್ ಉಡುಗೊರೆ ಕಳುಹಿಸಿದ ಸುದೀಪ್

ಮಂಡ್ಯ ಬಿಟ್ಟು ಬೆಂಗಳೂರಿಗೆ ಬಂದೆ
'ಯಾವ ಕೆಲಸ ಮಾಡಿದರೂ ತಪ್ಪಿಲ್ಲ ಅಥವಾ ಅವಮಾನ ಇಲ್ಲ. ಆದರೆ ಕಾಲೇಜಿಗೆ ಬಂದಾಗ ಸ್ವಲ್ಪ ಮುಜುಗರ ಆಗಲು ಶುರು ಆಗುತ್ತಿತ್ತು. ನಾನು ಪೇಪರ್ ಹಾಕುತ್ತಿದ್ದಿದ್ದನ್ನು ನಮ್ಮ ಕಾಲೇಜಿನ ಹುಡುಗಿಯರು ನೋಡುತ್ತಾರೆ ಎಂದು ಮುಜುಗರ ಆಗಲು ಶುರುವಾಯಿತು. ಆಗ ಬೆಂಗಳೂರು ಆಕರ್ಷಕವಾಗಿ ಕಾಣಿಸಿತು. ಮಂಡ್ಯ ಬಿಟ್ಟು ಬೆಂಗಳೂರಿಗೆ ಬಂದೆ' ಎಂದಿದ್ದಾರೆ.

ಆಕ್ರೆಸ್ಟ್ರಾದಲ್ಲಿ ಕೆಲಸ ಮಾಡಿ ತಂಗಿ ಮದುವೆ ಮಾಡಿದ್ದೀನಿ
'ಬೆಂಗಳೂರಿಗೆ ಬಂದು ಆಕ್ರೆಸ್ಟ್ರಾ ಸೇರಿಕೊಂಡೆ. 8 ವರ್ಷಗಳ ಕಾಲ ಆಕ್ರೆಸ್ಟ್ರಾದಲ್ಲಿ ಹಾಡಿ, ಇಬ್ಬರ ತಂಗಿಯರನ್ನು ಮದುವೆ ಮಾಡಿದ್ದೇನೆ. ನನ್ನ ತಂದೆಗೆ ಕ್ಯಾನ್ಸರ್ ಬಂದಾಗ ಸಹಾಯಕ್ಕೆ ನಿಂತಿದ್ದೀನಿ. ಇವತ್ತು ನನ್ನ ಬ್ಯಾಂಕ್ ಬ್ಯಾಲೆನ್ಸ್ ನೋಡಿದ್ರೆ ನಗುತ್ತೀರಿ. ಮೇಲಿಕ್ಕೆ ಮಾತ್ರ ಕೋಟು, ಸೆಂಟ್ ಹಾಕಿಕೊಂಡು ಬಂದಿದ್ದೀನಿ ಅಷ್ಟೆ. ನನ್ನ ತಂಗಿ ಮದುವೆಗೆ ಮಾಡಿದ ಸಾಲ ಇತ್ತೀಚಿಗೆ ತೀರಿದೆ' ಎಂದು ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.