»   » 'ಕುರುಕ್ಷೇತ್ರ'ದ ಶಕುನಿ ಆಗಿ ಬಂದ ಆರ್ಮುಗಂ ರವಿಶಂಕರ್

'ಕುರುಕ್ಷೇತ್ರ'ದ ಶಕುನಿ ಆಗಿ ಬಂದ ಆರ್ಮುಗಂ ರವಿಶಂಕರ್

Posted By:
Subscribe to Filmibeat Kannada

'ಕುರುಕ್ಷೇತ್ರ' ಸಿನಿಮಾದಲ್ಲಿ ನಟ ರವಿಶಂಕರ್ ಶಕುನಿ ಪಾತ್ರವನ್ನು ಮಾಡಿದ್ದಾರೆ. ಅಭಿಮಾನಿಯೊಬ್ಬರು ಶಕುನಿ ಪಾತ್ರದ ಫೋಸ್ಟರ್ ಅನ್ನು ರೆಡಿ ಮಾಡಿದ್ದು, ರವಿಶಂಕರ್ ಸಖತ್ ಖದರ್ ಆಗಿ ಕಾಣಿಸಿಕೊಂಡಿದ್ದಾರೆ.

ವಿಡಿಯೋ: 'ತಾರಕ್' ಜೊತೆ 'ಕುರುಕ್ಷೇತ್ರ' ಟೀಸರ್ ಬಂತು

ಮಹಾಭಾರತದಲ್ಲಿ ಶಕುನಿ ಪಾತ್ರ ತುಂಬ ಮುಖ್ಯವಾಗಿದೆ. ಅಲ್ಲದೆ 'ಕುರುಕ್ಷೇತ್ರ' ಯುದ್ಧ ನಡೆಯುವುದಕ್ಕೆ ಶಕುನಿಯೇ ಪ್ರಮುಖ ಕಾರಣವಾಗಿರುತ್ತಾನೆ. ಹೀಗಿರುವಾಗ ಸಿನಿಮಾದಲ್ಲಿ ರವಿಶಂಕರ್ ಅವರ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಸಕಲಕಲಾವಲ್ಲಭನಾಗಿರುವ ರವಿಶಂಕರ್ ತೆರೆ ಮೇಲೆ ಹೇಗೆ ಈ ಪಾತ್ರವನ್ನು ನಿರ್ವಹಿಸುತ್ತಾರೆ ಎನ್ನುವ ಕುತೂಹಲವು ಮೂಡಿದೆ.

Ravishankar's 'Kurukshetra' Movie Shakuni look out.

ಧುರ್ಯೋಧನ, ಭೀಮ, ಅರ್ಜುನ ಪಾತ್ರಗಳಿಗೆ ಪೈಪೋಟಿ ನೀಡುವಂತೆ ಶಕುನಿ ಲುಕ್ ಹೊರಬಂದಿದೆ. ಸಮಾಜಿಕ ಜಾಲತಾಣದಲ್ಲಿ ರವಿಶಂಕರ್ ಶಕುನಿ ಲುಕ್ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ, 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಸದ್ಯ ಹೈದರಾಬಾದ್ ನಲ್ಲಿ ನಡೆಯುತ್ತಿದೆ.

English summary
Actor Ravishankar's 'Kurukshetra' Movie Shakuni look is out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada