»   » 'ದಿ ವಿಲನ್' ಹೇರ್ ಸ್ಟೈಲ್ ಮಾಡಿಸಿದ ರವಿಶಂಕರ್ ಮಗ

'ದಿ ವಿಲನ್' ಹೇರ್ ಸ್ಟೈಲ್ ಮಾಡಿಸಿದ ರವಿಶಂಕರ್ ಮಗ

Posted By:
Subscribe to Filmibeat Kannada
'ದಿ ವಿಲನ್' ಹೇರ್ ಸ್ಟೈಲ್ ಮಾಡಿಸಿದ ಈ ನಟನ ಮಗ | Filmibeat Kannada

'ದಿ ವಿಲನ್' ಸಿನಿಮಾದ ಕ್ರೇಜ್ ಜೋರಾಗಿದೆ. ಅದರಲ್ಲಿಯೂ ಸಿನಿಮಾದ ಹೇರ್ ಸ್ಟೈಲ್ ದೊಡ್ಡ ಮಟ್ಟದ ಜನಪ್ರಿತೆ ಗಳಿಸಿದೆ. ಸುದೀಪ್ ಮತ್ತು ಶಿವಣ್ಣನ ಅಭಿಮಾನಿಗಳು ಈಗಾಗಲೇ 'ದಿ ವಿಲನ್' ಹೇರ್ ಸ್ಟೈಲ್ ಮಾಡಿಸಿಕೊಂಡು ಮಿಂಚುತ್ತಿದ್ದಾರೆ. ಈಗ ಕನ್ನಡದ ನಟ ರವಿಶಂಕರ್ ಪುತ್ರ ಸಹ 'ದಿ ವಿಲನ್' ಹೇರ್ ಸ್ಟೈಲ್ ನಲ್ಲಿ ಕಂಗೋಳಿಸಿದ್ದಾರೆ.

ಶಿವಣ್ಣನ 'ವಿಲನ್ ಹೇರ್ ಸ್ಟೈಲ್'ಗೆ ಕ್ರೇಜ್ ನೋಡ್ರಪ್ಪಾ!

ನಟ ರವಿಶಂಕರ್ ಕೇಶ ವಿನ್ಯಾಸ ನೋಡಿ ಸ್ವತಃ ಚಿತ್ರದ ನಿರ್ದೇಶಕ ಪ್ರೇಮ್ ಫಿದಾ ಆಗಿದ್ದಾರೆ. ಪ್ರೇಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರವಿಶಂಕರ್ ಮಗನ ಫೋಟೋ ಮತ್ತು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅಂದಹಾಗೆ, ರವಿಶಂಕರ್ ಅವರ ಪುಟ್ಟ ಮಗ ಶೌರ್ಯ ಯಶಸ್ವಿ ಸದ್ಯ ಯು ಕೆ ಜಿ ಓದುತ್ತಿದ್ದಾರೆ. 'ದಿ ವಿಲನ್' ಸಿನಿಮಾದ ಕ್ರೇಜ್ ಸಣ್ಣ ಮಕ್ಕಳಿಗೂ ತಲುಪಿದೆ. ಸುದೀಪ್ ಮತ್ತು ಶಿವಣ್ಣನ ಹೇರ್ ಸ್ಟೈಲ್ ಇಷ್ಟ ಪಟ್ಟು ಅದೇ ರೀತಿ ಶೌರ್ಯ ರೆಡಿ ಆಗಿದ್ದಾರೆ.

Ravishanker son follows The Villain hair style

ಇನ್ನು ರವಿಶಂಕರ್ ಮತ್ತು ಪ್ರೇಮ್ ಆಪ್ತರಾಗಿದ್ದಾರೆ. ಪ್ರೇಮ್ ನಿರ್ದೇಶನ ಮಾಡಿದ್ದ 'ಜೋಗಯ್ಯ' ಸಿನಿಮಾದಲ್ಲಿ ರವಿಶಂಕರ್ ನಟಿಸಿದ್ದರು. ಇನ್ನು 'ದಿ ವಿಲನ್' ಸಿನಿಮಾದ ಹಾಡಿನ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಮೊದಲ ಬಾರಿಗೆ ಸಿನಿಮಾದಲ್ಲಿ ಒಂದಾಗಿದ್ದಾರೆ. ಇಡೀ ಕನ್ನಡ ಚಿತ್ರರಂಗದಲ್ಲಿ 'ದಿ ವಿಲನ್' ಸಿನಿಮಾಗಾಗಿ ಕಾಯುತ್ತಿದೆ.

English summary
Actor Ravishanker son follows The Villain hair style. Sudeep and Shivarajkumar starrer Kannada Movie 'The Villain' is directed by Prem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X