Just In
Don't Miss!
- News
ಆಕ್ಸಿಜನ್ ವ್ಯರ್ಥವಾಗದಂತೆ ನೋಡಿಕೊಳ್ಳಲು ರಾಜ್ಯಗಳಿಗೆ ಕೇಂದ್ರದ ಸೂಚನೆ
- Sports
ಐಪಿಎಲ್ 2021: ಶಹ್ಬಾಜ್ ಪ್ರದರ್ಶನಕ್ಕೆ ಸಿರಾಜ್ ಮೆಚ್ಚುಗೆಯ ಮಾತು
- Finance
25,000 ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ ಇನ್ಫೋಸಿಸ್
- Automobiles
ಹೊಸ ಫೀಚರ್ಸ್ಗಳೊಂದಿಗೆ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ
- Education
Kalaburagi Mahanagara Palike Recruitment 2021: 219 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ರಂಜಾನ್ 2021: ಉಪವಾಸದ ಈ ತಿಂಗಳಿನಲ್ಲಿ ಹೀಗೆ ಮಾಡಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುವುದು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ ನೀಡಿದ ರೆಮೋ ನಿರ್ಮಾಪಕ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕಾಮಗಾರಿ ಶುರುವಾಗಿದೆ. ಐತಿಹಾಸಿಕ ರಾಮಮಂದಿರ ನಿರ್ಮಿಸಲು ದೇಶಾದ್ಯಂತ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಜನವರಿ 15 ರಿಂದ ಫೆಬ್ರವರಿ 27ರವರೆಗೂ ವಿಶ್ವ ಹಿಂದೂ ಪರಿಷತ್ ದೇಣಿಗೆ ಸಂಗ್ರಹಿಸುತ್ತಿದೆ.
ರಾಮಮಂದಿರ ನಿರ್ಮಾಣಕ್ಕೆ ಕನ್ನಡ ಚಲನಚಿತ್ರ ನಿರ್ಮಾಪಕ ಹಾಗೂ ವಿಧಾನಪರಿಷತ್ ಸದಸ್ಯ ಸಿಆರ್ ಮನೋಹರ್ 5 ಲಕ್ಷ ದೇಣಿಗೆ ನೀಡಿದ್ದಾರೆ. ಈ ವಿಚಾರವನ್ನು ನಿರ್ದೇಶಕ ಪವನ್ ಒಡೆಯರ್ ತಮ್ಮ ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಭಾರಿ ಮೊತ್ತ ದೇಣಿಗೆ ನೀಡಿದ ಅಮೂಲ್ಯ ದಂಪತಿ
''ರಾಮಮಂದಿರ ನಿರ್ಮಾಣಕ್ಕಾಗಿ "ರೇಮೊ" ಚಿತ್ರದ ನಿರ್ಮಾಪಕರಾದ ಸಿಆರ್ ಮನೋಹರ್ ಸರ್ 5ಲಕ್ಷ ನೀಡಿದ ಸಂದರ್ಭ. ಸರ್ವೇ ಜನ ಸುಖಿನೋ ಭವಂತು'' ಎಂದು ಒಡೆಯರ್ ಪೋಸ್ಟ್ ಹಾಕಿದ್ದಾರೆ.
ಈ ಹಿಂದೆ ಸ್ಯಾಂಡಲ್‌ವುಡ್‌ನಿಂದ ಹಲವು ಸೆಲೆಬ್ರಿಟಿಗಳು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ 1.5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ದೇಣಿಗೆ ನೀಡಿದ ರಸೀದಿಯನ್ನು ಅಮೂಲ್ಯ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಕ್ಕೆ 1 ಲಕ್ಷ ನೆರವು ನೀಡಿದ ಪ್ರಣಿತಾ ಸುಭಾಷ್
ಅದಕ್ಕೂ ಮುಂಚೆ ನಟಿ ಪ್ರಣಿತಾ ಸುಭಾಷ್ ಸಹ ಒಂದು ಲಕ್ಷ ರೂಪಾಯಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದರು.
ಅಂದ್ಹಾಗೆ, ಸಿಆರ್ ಮನೋಹರ್ ಅವರು ಸದ್ಯ ರೆಮೋ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇಶಾನ್ ನಟನೆಯ ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸಿದ್ದಾರೆ. ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ.