For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ತಮಿಳು ನಟನ ಭಾವನಾತ್ಮಕ ಭಾಷಣ.!

  By Bharath Kumar
  |
  ಸಿಲಂಬರಸನ್ ಅಲಿಯಾಸ್ ಸಿಂಬು ಕಾವೇರಿ ಬಗ್ಗೆ ಆಡಿದ ಮಾತುಗಳು ಕೇಳಿ | Oneindia Kannada

  ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧ ಪಟ್ಟಂತೆ ತಮಿಳು ನಟ ಸಿಂಬು ಭಾವನಾತ್ಮಕ ಭಾಷಣ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ, ಭಾಷಣದ ಪರಿಣಾಮ ಟ್ವಿಟ್ಟರ್ ನಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ.

  ಏಪ್ರಿಲ್ 11ನೇ ತಾರೀಖು ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೂ 'UniteForHumanity' ಎಂಬ ಹ್ಯಾಷ್ ಟ್ಯಾಗ್ ಹಾಕಿ ನಮ್ಮಲ್ಲಿ ಏಕತೆ ಇದೆ, ನಮ್ಮಲ್ಲಿ ಒಗ್ಗಟ್ಟಿದೆ ಎಂಬುದನ್ನ ಕರ್ನಾಟಕ ಹಾಗೂ ಕರ್ನಾಟಕದಲ್ಲಿರುವ ತಮಿಳರು ಸೇರಿ ತಮಿಳುನಾಡಿನ ಜನರು ಸಾರಿ ಹೇಳಬೇಕಿದೆ ಎಂದು ಕರೆ ನೀಡಿದ್ದಾರೆ.

  ಕಾವೇರಿ ವಿವಾದ: ವಾಟಾಳ್ ಹೇಳಿಕೆಗೆ ರಜನಿಕಾಂತ್ ಕೊಟ್ಟ ಉತ್ತರ ನೋಡಿಕಾವೇರಿ ವಿವಾದ: ವಾಟಾಳ್ ಹೇಳಿಕೆಗೆ ರಜನಿಕಾಂತ್ ಕೊಟ್ಟ ಉತ್ತರ ನೋಡಿ

  ಇದರ ಪರಿಣಾಮ ಸೋಶಿಯಲ್ ಮೀಡಿಯಾದಲ್ಲಿ ಬಹುದೊಡ್ಡ ಚರ್ಚೆಯಾಗುತ್ತಿದೆ. ಸಿಂಬು ಅವರ ಮಾತುಗಳನ್ನ ಆಲಿಸಿರುವ ಅನೇಕ ಕನ್ನಡಿಗರು ಹಾಗೂ ತಮಿಳಿನ ಜನ ಈ ಬಗ್ಗೆ ಯೋಚನೆ ಮಾಡ್ತಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಗಿದೆ ಚರ್ಚೆ ಎಂಬುದು ನೀವೇ ನೋಡಿ.....

  ಕರ್ನಾಟಕ ಮತ್ತು ತಮಿಳುನಾಡು ಸಹೋದರರಂತೆ.!

  ಕರ್ನಾಟಕ ಮತ್ತು ತಮಿಳುನಾಡು ಸಹೋದರರಂತೆ.!

  ನಟ ಸಿಂಬು ಅವರ ಭಾಷಣ ನೋಡಿ ಅನೇಕ ಮಂದಿ ತಮ್ಮ ಮನಸ್ಥಿತಿಯನ್ನ ಬದಲಾಯಿಸಿಕೊಂಡಿದ್ದಾರೆ. ಕಾವೇರಿ ವಿಚಾರದಲ್ಲಿ ಜಗಳವಾಡುತ್ತಿದ್ದ ಮಂದಿ ಈಗ ಟ್ವಿಟ್ಟರ್ ನಲ್ಲಿ ಅಣ್ಣ-ತಮ್ಮ-ಅಕ್ಕ-ತಂಗಿ ಎಂದು ಗೌರವಿಸುತ್ತಿದ್ದಾರೆ. 'UniteForHumanity' ಹ್ಯಾಷ್ ಟ್ಯಾಗ್ ಬಳಸಿ, ಕರ್ನಾಟಕದ ಬಳಿ ನೀರು ಕೇಳುತ್ತಿದ್ದಾರೆ.

  ಚೆನ್ನಪಟ್ಟಣದ ಯುವಕನ ಮಾತು

  ಚೆನ್ನಪಟ್ಟಣದ ಯುವಕನ ಮಾತು

  ನಾನು ಚೆನ್ನಪಟ್ಟಣ್ಣ ಎಂದು ಹೇಳಿರುವ ಬಿಸಿ ಶರತ್ ಗೌಡ ಅವರು ಸಿಂಬು ಅವರ ಮಾತಿಗೆ ಗೌರವ ನೀಡಿ ''UniteForHumanity' ಬಳಸಿ ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

  ''ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ'' ತಮಿಳು ನಟನ ಹೃದಯಸ್ಪರ್ಶಿ ಹೇಳಿಕೆ''ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ'' ತಮಿಳು ನಟನ ಹೃದಯಸ್ಪರ್ಶಿ ಹೇಳಿಕೆ

  ನಾವೆಲ್ಲರೂ ಒಂದೇ

  ನಾವೆಲ್ಲರೂ ಒಂದೇ

  ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಿತ್ತಾಡುತ್ತಿರುವ ಕರ್ನಾಟಕ ಮತ್ತು ತಮಿಳುನಾಡು ಮಾನವೀಯತೆಯಿಂದ ಒಂದೇ ಎಂದು ಜನಾಭಿಪ್ರಾಯ ವ್ಯಕ್ತವಾಗುತ್ತಿದೆ. ಅದಕ್ಕೆ ಸಿಂಬು ಅವರು ಕರೆ ನೀಡಿರುವ 'UniteForHumanity' ಹ್ಯಾಷ್ ಟ್ಯಾಗ್ ಬಳಸಿ ಕನ್ನಡಿಗರು ಬೆಂಬಲ ಸೂಚಿಸುತ್ತಿದ್ದಾರೆ.

  ಅಂಗಲಾಚಿ ಬೇಡುತ್ತಿರುವ ತಮಿಳು ಜನ

  ಅಂಗಲಾಚಿ ಬೇಡುತ್ತಿರುವ ತಮಿಳು ಜನ

  ಇನ್ನು ತಮಿಳು ಜನರು ಕನ್ನಡಿಗರ ಬಳಿ ಅಂಗಲಾಚಿ ನೀರು ಕೊಡಿ ಎಂದು ಬೇಡಿ ಕೊಳ್ಳುತ್ತಿದ್ದಾರೆ. ಇದು ಸಿಂಬು ಅವರ ಭಾಷಣದ ನಂತರ ಆಗಿರುವ ದೊಡ್ಡ ಬದಲಾವಣೆ ಅಂದ್ರೆ ತಪ್ಪಾಗಲಾರದು.

  ನಿಮ್ಮ ಹೋರಾಟಕ್ಕೆ ನಮ್ಮದು ಬೆಂಬಲ

  ನಿಮ್ಮ ಹೋರಾಟಕ್ಕೆ ನಮ್ಮದು ಬೆಂಬಲ

  ಸಿಂಬು ಅವರ ಮನವಿಯನ್ನ ಗೌರವಿಸಿರುವ ಕರ್ನಾಟಕದಲ್ಲಿರುವ ಕೆಲವರು ಅವರ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜಕೀಯ ನಾಯಕರ ವೈಯಕ್ತಿಕ ವಿಚಾರಗಳಲ್ಲಿ ಸಿಲುಕಿ ರಾಜ್ಯಗಳ ಮಧ್ಯೆ ವಿವಾದ ಹುಟ್ಟುವಂತಾಗಿದೆ. ಇದು ಬೇಡ. ಇದಕ್ಕೆ ಅಂತ್ಯವಾಗಬೇಕು ಎಂದಿರುವ ಅವರ ಮಾತಿಗೆ ಮನ್ನಣೆ ನೀಡಿದ್ದಾರೆ.

  ಕರ್ನಾಟದಲ್ಲಿರುವ ತಮಿಳಿಗರು

  ಕರ್ನಾಟದಲ್ಲಿರುವ ತಮಿಳಿಗರು

  ಇನ್ನು ಕರ್ನಾಟಕದಲ್ಲಿರುವ ತಮಿಳಿಗರು ಕನ್ನಡಿಗರ ಪ್ರಮಾಣಿಕತೆ ಮತ್ತು ಮಾನವೀಯತೆ ಗುಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ನೀರಿನ ವಿಚಾರದಲ್ಲೂ ಇದು ಸಾಧ್ಯವೆನ್ನುತ್ತಿದ್ದಾರೆ.

  ಕಾವೇರಿ ಬಗ್ಗೆ ತಮಿಳು ನಟ ಸಿಂಬು ಭಾವನಾತ್ಮಕ ಭಾಷಣದಲ್ಲೇನಿದೆ? ಇಲ್ಲಿದೆ ಅನುವಾದಕಾವೇರಿ ಬಗ್ಗೆ ತಮಿಳು ನಟ ಸಿಂಬು ಭಾವನಾತ್ಮಕ ಭಾಷಣದಲ್ಲೇನಿದೆ? ಇಲ್ಲಿದೆ ಅನುವಾದ

  ಏಪ್ರಿಲ್ 11 ರಂದು ಏನಾಗಲಿದೆ.?

  ಏಪ್ರಿಲ್ 11 ರಂದು ಏನಾಗಲಿದೆ.?

  ಸಿಂಬು ಅವರು ಕರೆ ನೀಡಿರುವಂತೆ ಏಪ್ರಿಲ್ 11ನೇ ತಾರೀಖು ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೂ 'UniteForHumanity' ಎಂಬ ಹ್ಯಾಷ್ ಟ್ಯಾಗ್ ಹಾಕಿ ನಮ್ಮಲ್ಲಿ ಏಕತೆ ಇದೆ, ನಮ್ಮಲ್ಲಿ ಒಗ್ಗಟ್ಟಿದೆ ಎಂಬ ಅಭಿಯಾನ ಕೈಗೊಳ್ಳಲಾಗಿದೆ. ಇದಕ್ಕೆ ಕನ್ನಡಿಗರು ಎಷ್ಟು ಬೆಂಬಲ ಕೊಡ್ತಾರೆ ಎಂಬುದು ಕಾದುನೋಡಬೇಕಿದೆ.

  English summary
  Kannadigas and tamil people have taken their twitter account to appreciate Tamil Actor Simbu's speech over Cauvery water dispute.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X