»   » ನಾಗಾಸಾಧು ಗೆಟಪ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ

ನಾಗಾಸಾಧು ಗೆಟಪ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ

By: ಜೀವನರಸಿಕ
Subscribe to Filmibeat Kannada

ರಿಯಲ್ ಸ್ಟಾರ್ ಉಪ್ಪಿ ಮುಂದಿನ ಸಿನಿಮಾ ಯಾವ್ದು ಅಂದ್ರೆ, ಅನುಮಾನವೇ ಇಲ್ಲ ಅದು 'ಉಪ್ಪಿ-2' ಚಿತ್ರ. ಐದು ವರ್ಷದ ನಂತರ ಉಪೇಂದ್ರ ನಿರ್ದೇಶನದ ಚಿತ್ರವೊಂದನ್ನ ನೋಡೋಕೆ ಕನ್ನಡ ಚಿತ್ರಪ್ರೇಮಿಗಳು ಕಾದಿದ್ದಾರೆ. ಈಗ ಅದ್ರ ಎಕ್ಸ್ ಕ್ಲೂಸೀವ್ ಗೆಟಪ್ ನಿಮ್ಮ ಮುಂದಿದೆ.

ಉಪ್ಪಿ ಈ ಭಾರಿ ಹಿಮಾಲಯದಲ್ಲಿ ಶೂಟ್ ಮಾಡ್ತಿರೋದು ಹಳೆಯ ಸುದ್ದಿ. ಈಗ ಅದ್ರ ಒಂದು ಲುಕ್ ನೋಡಿದ್ರೆ ನೀವೂ ಬೆರಗಾಗ್ತೀರ. ಯಾಕಂದ್ರೆ ಉಪ್ಪಿ ಪಕ್ಕಾ ನಾಗಾಸಾಧುವಿನ ಗೆಟಪ್ ನಲ್ಲಿದ್ದಾರೆ. ಬೇರೆ ಯಾರಾದ್ರೂ ಗೆಟಪ್ ಹಾಕಿದ್ರೆ ಅದು ಅಷ್ಟೇನೂ ಸುದ್ದಿಯಾಗಲ್ಲ. ಅದಕ್ಕೆ ಅಷ್ಟೊಂದು ಮಹತ್ವವೂ ಸಿಕ್ಕೋದಿಲ್ಲ. [ಉಪ್ಪಿಟ್ಟು ಉಪೇಂದ್ರ : ವಿಶೇಷ ಸಂದರ್ಶನ]


ಆದ್ರೆ ಉಪೇಂದ್ರ ಗೆಟಪ್ ಹಾಕ್ತಾರೆ ಅಂದ್ರೆ ಅದ್ರ ಬಗ್ಗೆ ಕುತೂಹಲ ಗರಿಗೆದರುತ್ತೆ. ಯಾಕಂದ್ರೆ ಗೆಟಪ್ ಅನ್ನೋ ಟ್ರೆಂಡ್ ನ ಕನ್ನಡದಲ್ಲಿ ಸೃಷ್ಟಿ ಮಾಡಿದವ್ರೆ ಉಪೇಂದ್ರ ಅಲ್ವಾ. ಇನ್ನು ಇಲ್ಲಿ ಕೇವಲ ನಾಗಾಸಾಧು ಗೆಟಪ್ ಅಲ್ಲ. ಲವ್ಲೀ ರೋಮ್ಯಾಂಟಿಕ್ ಸ್ಟಿಲ್ ಕೂಡ ಇದೆ.


ಸೆಪ್ಟೆಂಬರ್ 18ಕ್ಕೆ ಸೆಟ್ಟೇರಿದ ಚಿತ್ರ ಶೂಟಿಂಗ್ ಶುರು

2013ರಲ್ಲಿ ಆರಂಭವಾದ 'ಉಪ್ಪಿ-2' ಸಿನಿಮಾ ಯಾವಾಗ ರಿಲೀಸಾಗುತ್ತೆ ಅಂಥ ಅಭಿಮಾನಿಗಳು ಕಾದಿದ್ದಾರೆ. 'ಉಪ್ಪಿ-2' ಉಪೇಂದ್ರ ಪ್ರೊಡಕ್ಷನ್ ಹೌಸ್ ನ ಮೊದಲ ಸಿನಿಮಾ. ಉಪ್ಪಿ ತಮ್ಮದೇ ಪ್ರೊಡಕ್ಷನ್ಸ್ ನಲ್ಲಿ ನಿರ್ಮಿಸ್ತಾ ಇರೋ ಚಿತ್ರದ ಮುಹೂರ್ತವೇ ಚಿತ್ರಪ್ರೇಮಿಗಳಿಗೆ ಹಬ್ಬ ನೀಡಿತ್ತು. ಕಳೆದ ಬಾರಿ ಉಪ್ಪಿ ಹುಟ್ಟುಹಬ್ಬಕ್ಕೆ ಅಂದ್ರೆ ಸೆಪ್ಟೆಂಬರ್ 18ಕ್ಕೆ ಸೆಟ್ಟೇರಿದ ಚಿತ್ರ ಶೂಟಿಂಗ್ ಶುರು ಮಾಡೋಕೇನೇ ಹೆಚ್ಚೂ ಕಡಿಮೆ 10 ತಿಂಗಳು ತೆಗೆದುಕೊಂಡಿದೆ.


ಉಪ್ಪಿ-2 ಚಿತ್ರದಲ್ಲೂ ಮೂರು ಹೀರೋಯಿನ್ ಗಳು

ಉಪ್ಪಿ-2 ಚಿತ್ರದಲ್ಲೂ ಮೂರು ಹೀರೋಯಿನ್ ಗಳಿರ್ತಾರೆ. ಇಲ್ಲಿ ಮೂರನೇ ಹೀರೋಯಿನ್ನಾಗಿ ಪ್ರಿಯಾಂಕಾ ಉಪೇಂದ್ರ ನಟಿಸ್ತಿದ್ದಾರೆ. ಉಪ್ಪಿ ಆಯ್ಕೆ ಮಾಡೋದ್ರಲ್ಲಿ ಎಕ್ಸ್ ಪರ್ಟ್. ಹಾಗಾಗಿ ಪ್ರೊಡಕ್ಷನ್ ನೋಡ್ಕೊಂಡು ನಟಿಸೋದು ಕಷ್ಟ ಅನ್ನೋ ಕಾರಣಕ್ಕೆ ಮೂರನೇ ಹೀರೋಯಿನ್ನಾಗಿ ಆಯ್ಕೆ ಮಾಡಿದ್ದಾರೆ ಅನ್ಸುತ್ತೆ.


ಹಿಮಾಲಯದಿಂದಲೇ ರಿಯಲ್ ಸ್ಟಾರ್ ಎಂಟ್ರಿ

ಸಿನಿಮಾದಲ್ಲಿ ರಿಯಲ್ ಸ್ಟಾರ್ ಎಂಟ್ರಿ ಹಿಮಾಲಯದಿಂದಲೇ ಶುರುವಾಗುತ್ತಂತೆ. ಉಪೇಂದ್ರ ಚಿತ್ರದ ಕೊನೆಯಲ್ಲಿ ನಾನು ಯಾರು ಅನ್ನೋದನ್ನ ತಿಳಿಯೋದಕ್ಕೆ ದಿಗಂತದ ಕಡೆ ನಡೆದುಕೊಂಡು ಹೋಗೋ ಸೀನ್ ಇದೆ. ಉಪ್ಪಿ ಅಲ್ಲಿಂದ ಹೊರಬರೋದೇ ಮೊದಲ ಸೀನ್ ಅನ್ನೋದು ಕುತೂಹಲದ ಜೊತೆಗೆ ಸತ್ಯವೂ ಅಂತೆ.


ಓಪನಿಂಗ್ ಸಾಂಗ್ ಕನ್ನಡದಲ್ಲಿ ಇರೋದಿಲ್ಲವಂತೆ

ಈಗಾಗಲೇ ಉಪ್ಪಿ 2 ಸಿನಿಮಾಗೆ ಹಾಲಿವುಡ್ ನ ರ್ಯಾಪ್ ಸಿಂಗರ್ ಒಬ್ಬರು ಹಾಡಿದ್ದಾರೆ. ಓಪನಿಂಗ್ ಸಾಂಗ್ ಕನ್ನಡದಲ್ಲಿ ಇರೋದಿಲ್ಲವಂತೆ. ಅದು ಉಪ್ಪಿ ಇಂಟ್ರಡಕ್ಷನ್ ಸಾಂಗ್ ಆಗಿರಲಿದ್ದು ಅಮೆರಿಕನ್ ರ್ಯಾಪರ್ ಇದನ್ನ ಹಾಡಿರೋ ಸುದ್ದಿ ಬಂದಿದೆ.


ಒನ್ ಅಂಡ್ ಓನ್ಲಿ ಉಪ್ಪಿ ಚಿತ್ರವಿದು

ಸ್ವತಃ ಉಪ್ಪಿ ಹೇಳೋ ಪ್ರಕಾರ ನನ್ನ ಕಥೆಯನ್ನ ಬೇರೆಯವ್ರಿಗೆ ಕೊಟ್ರೂ ಇದನ್ನ ಬೇರೆಯವರು ಮಾಡೋಕೆ ಸಾಧ್ಯವಿಲ್ಲ ಅಂತ. ಹಾಗಂದ ಮೇಲೆ ಉಪ್ಪಿ-2ನಲ್ಲಿ ಅದಿನ್ನೆಂಥೆಂತಹ ಥ್ರಿಲ್ ಇರುತ್ತೋ ಕಾದು ನೋಡಿ.


English summary
Here is the Real Star Upendra's 'Uppi 2' exclusive stills. At present the movie shooting in brisk progressing at Himalayas. Upendra appeared in Naga Sadhu get up.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada