»   » ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ಹೊಸ ಟೈಟಲ್

ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ಹೊಸ ಟೈಟಲ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರು ಟೈಟಲ್ ಇಲ್ಲದೆಯೇ ಚಿತ್ರಗಳನ್ನು ಮಾಡಿ ಗೆದ್ದವರು. ಇದೀಗ ಅವರ ಚಿತ್ರಕ್ಕೇ ಶೀರ್ಷಿಕೆ ಸಮಸ್ಯೆ ಎದುರಾಗಿದೆ. ವಿಭೂತಿ, ತಿಲಕವೇ ತಮ್ಮ ಚಿತ್ರದ ಸಿಂಬಲ್. ಇದನ್ನು ಏನು ಬೇಕಾದರೂ ಕರೆದುಕೊಳ್ಳಿ ಎಂದು ಕೆಲದಿನಗಳ ಹಿಂದೆ ಚಿತ್ರದ ನಿರ್ದೇಶಕ ಶ್ರಿನಿವಾಸರಾಜು ಪತ್ರಿಕಾ ಪ್ರಕಟಣೆ ಕೊಟ್ಟಿದ್ದರು.

ಅದಕ್ಕೂ ಮೊದಲು ಚಿತ್ರಕ್ಕೆ 'ಬಸವಣ್ಣ' ಎಂದು ಹೆಸರಿಡಲಾಗಿತ್ತು. ಲಿಂಗಾಯಿತ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾದ ಮೇಲೆ ಬಸವಣ್ಣ ಶೀರ್ಷಿಕೆಯನ್ನು ಕೈಬಿಡಲಾಗಿತ್ತು. ಇದೀಗ ಚಿತ್ರಕ್ಕೆ 'ಶಿವಂ' ಎಂದು ಹೊಸ ಶೀರ್ಷಿಕೆ ಇಡಲಾಗಿದೆ. [ಉಪೇಂದ್ರ ಮುಂದಿನ ಚಿತ್ರಕ್ಕೆ ಏನಂತ ಕರೆಯಬೇಕು..?]

Upendra movie Shivam

ಚಿತ್ರಕ್ಕೆ 'ಬಸವಣ್ಣ' ಎಂದಿಟ್ಟ ಮೇಲೆ ಚಿತ್ರದ ಶೀರ್ಷಿಕೆಯನ್ನು ಕೈಬಿಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಅದಾದ ಬಳಿಕ ಚಿತ್ರಕ್ಕೆ 'ಬ್ರಾಹ್ಮಣ' ಎಂದಿಡುವುದಾಗಿ ಶ್ರೀನಿವಾಸರಾಜು ಹೇಳಿದ್ದರು.

ಕೂಡಲೆ ಬ್ರಾಹ್ಮಣ ಸಮುದಾಯದ ಸಂಘಟನೆಗಳು ಆ ಶೀರ್ಷಿಕೆ ಕೈಬಿಡುವಂತೆ ಆಗ್ರಹಿಸಿದವು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನೆ ಬ್ರಾಹ್ಮಣ ಶೀರ್ಷಿಕೆ ವಿರುದ್ಧ ತಿರುಗಿಬಿತ್ತು. ವಿಧಿ ಇಲ್ಲದೆ ಬ್ರಾಹ್ಮಣ ಶೀರ್ಷಿಕೆಯನ್ನು ಕೈಬಿಟ್ಟ ಶ್ರೀನಿವಾಸರಾಜು ಕಡೆಗೆ ಸಿಂಬಲ್ ನಲ್ಲೇ ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದರು.

ವಿಭೂತಿ, ತಿಲಕ, ರುದ್ರಾಕ್ಷಿ, ತ್ರಿಶೂಲ ತೋರಿಸಿದರೆ ಜನ ಏನೆಂದು ಕರೆಯುವುದು. ಅವರವರ ಭಾವಕ್ಕೆ ಬಕುತಿಗೆ ತಕ್ಕಂತೆ ಕೆಲವರು ನಾಮ ಎಂದರೆ, ಕೆಲವರು ತ್ರಿನೇತ್ರ ಎಂದು, ಇನ್ನೂ ಕೆಲವರು ತಿಲಕ ಎಂದು ಕರೆಯುವಂತಾಯಿತು. ಕಡೆಗೆ ಈ ಗೊಂದಲವೇ ಬೇಡ ಎಂದು ಚಿತ್ರಕ್ಕೆ 'ಶಿವಂ' ಎಂದಿಡಲಾಗಿದೆ.

ಶಿವಂ ಎಂದು ಹೇಳಿ ಚಿತ್ರದಲ್ಲಿ ಕತ್ತಿ, ಪಿಸ್ತೂಲು ತೋರಿಸಿದರೆ ಶಿವನ ಭಕ್ತರು ಸುಮ್ಮನಿರುತ್ತಾರಾ? ಅವರು ಮೂರನೇ ಕಣ್ಣು ತೆರೆಯುವ ಎಲ್ಲಾ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಒಟ್ಟಾರೆಯಾಗಿ ಉಪೇಂದ್ರ ಚಿತ್ರ ಬಿಡುಗಡೆಯವರೆಗೂ ಇನ್ನೇನೆಲ್ಲಾ ಕಾದಿದೆಯೋ ಏನೋ? (ಏಜೆನ್ಸೀಸ್)

English summary
Real Star Upendra's upcoming movie gets new title as 'Shivam'. Earlier the movie titled as Basavanna, Brahmana. But the Lingayat and Brahmana community opposed the titles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada