»   » ಶಿವಮೊಗ್ಗದಲ್ಲಿ ಗೀತಾ ಪರ ಉಪೇಂದ್ರ ರೋಡ್ ಶೋ

ಶಿವಮೊಗ್ಗದಲ್ಲಿ ಗೀತಾ ಪರ ಉಪೇಂದ್ರ ರೋಡ್ ಶೋ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಇಳಿಯಲು ಇನ್ನೂ ದೃಢ ನಿರ್ಧಾರ ಮಾಡದಿದ್ದರೂ ಚುನಾವಣಾ ಪ್ರಚಾರಕ್ಕಂತೂ ಜಿಗಿದಿದ್ದಾರೆ. ಇದೇ ಏಪ್ರಿಲ್ 6ರಂದು ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಭರ್ಜರಿ ಪ್ರಚಾರ ಮಾಡಲಿದ್ದಾರೆ.

ಏಪ್ರಿಲ್ 6 ಮತ್ತು 7ರಂದು ಗೀತಾ ಶಿವರಾಜ್ ಕುಮಾರ್ ಪರ ಉಪೇಂದ್ರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳ ಕಾಲ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ. [ ಉಪ್ಪಿ-ಪ್ರಿಯಾಂಕಾ ಆರು ತಿಂಗಳ ಕಾಲ ಡೈವೋರ್ಸ್!]


ಏಪ್ರಿಲ್ 6ರ ಭಾನುವಾರ ಮಧ್ಯಾಹ್ನ 11.30ಕ್ಕೆ ಶಿಕಾರಿಪುರ ಬಸ್ ಸ್ಟ್ಯಾಂಡ್ ನಿಂದ ರೋಡ್ ಶೋ ಮೂಲಕ ಮತ ಯಾಚನೆ ಹಾಗೂ ಅದೇ ದಿನ ಮಧ್ಯಾಹ್ನ 12.30ಕ್ಕೆ ಶಿರಾಳಕೊಪ್ಪದಲ್ಲಿ ರೋಡ್ ಶೋನೊಂದಿಗೆ ಮತಯಾಚನೆ ಮಾಡಲಿದ್ದಾರೆ ಉಪೇಂದ್ರ. ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಜೊತೆಗಿರುತ್ತಾರೆ.

ಏಪ್ರಿಲ್ 10 ಮತ್ತು 11ರಂದು ಚಿತ್ರನಟರಾದ ಜೈ ಜಗದೀಶ್, ಶ್ರೀಮುರಳಿ ಸಹ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಉಪೇಂದ್ರ ಹಾಗೂ ಶಿವಣ್ಣ ಅವರು ಪ್ರೀತ್ಸೆ ಮತ್ತು ಲವಕುಶ ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಉಪ್ಪಿ ನಿರ್ದೇಶನದ ಶಿವಣ್ಣ ಅಭಿನಯದ ಓಂ ಚಿತ್ರದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. (ಏಜೆನ್ಸೀಸ್)

English summary
Real Star Upendra will campaign for Geetha Shivrajkumar, who is contesting in Lok Sabha Elections 2014 from Shimoga constituency, which will be held on 17th April. Uppi gets involved in road show on 6 and 7th April. 
Please Wait while comments are loading...