»   » ರಿಯಲ್ ಸ್ಟಾರ್ ಉಪೇಂದ್ರ ತಮಿಳು ಚಿತ್ರ 'ರಾಜವಂಶಂ'

ರಿಯಲ್ ಸ್ಟಾರ್ ಉಪೇಂದ್ರ ತಮಿಳು ಚಿತ್ರ 'ರಾಜವಂಶಂ'

By: ಉದಯರವಿ
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ಸದ್ಯಕ್ಕೆ ಉಪ್ಪಿ 2 ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಮಹತ್ವಾಕಾಂಕ್ಷಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಅಭಿಮಾನಿಗಳಲ್ಲಿ ಹುಟ್ಟುಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಮತ್ತೊಂದು ಚಿತ್ರ ತಮಿಳಿನಲ್ಲಿ ಬಿಡುಗಡೆಯಾಗಿದೆ.

ಅಂದಹಾಗೆ ಇದು ಆರ್ ಚಂದ್ರು ಆಕ್ಷನ್ ಕಟ್ ಹೇಳಿರುವ 'ಬ್ರಹ್ಮ' ಚಿತ್ರದ ಡಬ್ಬಿಂಗ್ ಆವೃತ್ತಿ. ತಮಿಳಿನಲ್ಲಿ ಚಿತ್ರಕ್ಕೆ ರಾಜವಂಶಂ ಎಂದು ಹೆಸರಿಡಲಾಗಿದೆ. ಸದ್ಯಕ್ಕೆ ಪ್ರಚಾರಕಾರ್ಯ ಆರಂಭವಾಗಿದ್ದು, ಇನ್ನೆರಡು ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. [ಬ್ರಹ್ಮ ಚಿತ್ರ ವಿಮರ್ಶೆ]

Upendra movie still

ಸದ್ದಿಲ್ಲದಂತೆ ತಮಿಳು ಚಿತ್ರದ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ತಮಿಳು ಮತ್ತು ತೆಲುಗಿನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಆರ್ ಚಂದ್ರು ಹೇಳಿದ್ದಾರೆ. ಉಪೇಂದ್ರ ಅವರ ಟೋಪಿವಾಲ ಚಿತ್ರ ತೆಲುಗಿಗೆ 'ಸ್ವಿಸ್ ಬ್ಯಾಂಕ್ ಕಿ ದಾರೇದಿ' ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಗಿತ್ತು.

ಇದಕ್ಕೂ ಮುನ್ನ ಉಪ್ಪಿ ಅವರ ಹಲವಾರು ಚಿತ್ರಗಳು ಪರಭಾಷೆಗಳಿಗೆ ಡಬ್ ಆಗಿವೆ. ತೆಲುಗು, ತಮಿಳು ಚಿತ್ರರಂಗದಲ್ಲೂ ಉಪೇಂದ್ರ ಅವರ ಚಿತ್ರಗಳಿಗೆ ಮಾರುಕಟ್ಟೆ ಇದೆ. ಇದನ್ನು ಮನಗಂಡೇ ಅವರ ಬಹುತೇಕ ಚಿತ್ರಗಳು ಡಬ್ ಆಗುತ್ತಿವೆ.

ಮೈಲಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಂಜುನಾಥ ಬಾಬು ಈ ಚಿತ್ರವನ್ನು ನಿರ್ಮಿಸಿದ್ದು ಗುರುಕಿರಣ್ ಅವರ ಸಂಗೀತ ಚಿತ್ರಕ್ಕಿದೆ. ಉಪೇಂದ್ರ ಜೊತೆ ಪ್ರಣೀತಾ, ರಂಗಾಯಣ ರಘು, ಸಾಧುಕೋಕಿಲ, ಶಯ್ಯಾಜಿ ಶಿಂಧೆ, ನಾಜರ್, ರಾಹುಲ್ ದೇವ್, ಸೋನು ಸೂಧ್, ಸುಭಾಷ್ ಶೆಟ್ಟಿ, ಅನಂತನಾಗ್, ಬುಲೆಟ್ ಪ್ರಕಾಶ್, ಮಂಗಳೂರು ಸುರೇಶ್, ಲಕ್ಷ್ಮಣ್, ಪದ್ಮಜಾರಾವ್ ಮುಂತಾದವರು ಅಭಿನಯಿಸಿದ್ದಾರೆ.

English summary
Real Star Upendra's Tamil movie Rajavamsham all set to release. The movie is a dubbed version of Kannada film 'Brahma' directed by R Chandru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada