»   » 2 ವರ್ಷದ ಬಳಿಕ ಕನಸು ಈಡೇರಿಸಿಕೊಂಡ ಸುನಾಮಿ ಕಿಟ್ಟಿ!

2 ವರ್ಷದ ಬಳಿಕ ಕನಸು ಈಡೇರಿಸಿಕೊಂಡ ಸುನಾಮಿ ಕಿಟ್ಟಿ!

Posted By:
Subscribe to Filmibeat Kannada

'ಡ್ಯಾನ್ಸಿಂಗ್ ಸ್ಟಾರ್', 'ಇಂಡಿಯನ್' ಅಂತಹ ಎರಡೆರೆಡು ರಿಯಾಲಿಟಿ ಶೋಗಳನ್ನ ಗೆದ್ದು ಇತಿಹಾಸ ನಿರ್ಮಿಸಿ, 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದಲ್ಲಿ ಸತತ 7 ವಾರ ನಾಮಿನೇಟ್ ಆಗಿ ಸೇಫ್ ಆಗಿದ್ದ ಸುನಾಮಿ ಕಿಟ್ಟಿ, ಈಗ ಸ್ಯಾಂಡಲ್ ವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.[ಅಂದು ಸುನಾಮಿ ಕಿಟ್ಟಿ, ಇಂದು ಪ್ರಥಮ್: 'ಬಿಗ್ ಬಾಸ್' ಮನೆಯಲ್ಲಿ ದಾಖಲೆ.!]

ಆ ಚಿತ್ರದ ಹೆಸರು 'ಆದಿವಾಸಿ'....'ಆದಿವಾಸಿ....ಕಾಡೇ ನನ್ನ ಆಸ್ತಿ' ಎಂಬ ಅಡಿಬರಹವನ್ನ ಹೊಂದಿರುವ ಈ ಚಿತ್ರದ ಮೂಲಕ ಸುನಾಮಿ ಕಿಟ್ಟಿ, ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬ ತಮ್ಮ ಎರಡು ವರ್ಷಗಳ ಕನಸನ್ನ ನನಸು ಮಾಡಿಕೊಳ್ಳುತ್ತಿದ್ದಾರೆ.

Reality Star Sunami Kitty Debut to Sandalwood

ಹೇಳಿ ಕೇಳಿ ಸುನಾಮಿ ಕಿಟ್ಟಿ ಹಳ್ಳಿ ಹುಡುಗ. ಅದಕ್ಕೆ ತಕ್ಕಂತೆ ಸಿನಿಮಾ ಅಂದ್ಮೇಲೆ ಹೇಳ್ಬೇಕಾ....! ಜಬರ್ ದಸ್ತ್ ಆಕ್ಷನ್, ಮಸ್ತ್ ಎಂಟರ್ ಟೈನ್ಮೆಂಟ್ ಈ ಚಿತ್ರದಲ್ಲಿ ನಿರೀಕ್ಷೆ ಮಾಡಬಹುದು.['ಬಿಗ್ ಬಾಸ್' ಮನೆಯಲ್ಲಿ ಸುನಾಮಿ ಕಿಟ್ಟಿ ಹೊಸ ರೆಕಾರ್ಡ್!]

Reality Star Sunami Kitty Debut to Sandalwood

ಅಂದ್ಹಾಗೆ, ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವುದು ಪಿ.ಮೂರ್ತಿ. ಕೆಂಪರಾಜು ಎಂಬುವವರು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಪ್ರಿ-ಪ್ರೊಡಕ್ಷನ್ ಮುಗಿಸಿರುವ 'ಆದಿವಾಸಿ' ಮಾರ್ಚ್ 2ನೇ ತಾರೀಖು ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಸೆಟ್ಟೇರಲಿದೆ.

English summary
'Dancing Star' and 'Indian' Reality Show Winner Sunami Kitty, has Debut to Sandalwood. The Movie Name Called 'Adivasi', Directed by P.Murthy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada