»   » ದರ್ಶನ್ ಕಿವಿಗೆ ಪುಂಗಿ ಊದೋರು ಇದ್ದಾರಾ.? ಕಿಚ್ಚ-ದಚ್ಚು ಮಹಾಬಿರುಕಿಗೆ ಕಾರಣ ಇದೇನಾ.?

ದರ್ಶನ್ ಕಿವಿಗೆ ಪುಂಗಿ ಊದೋರು ಇದ್ದಾರಾ.? ಕಿಚ್ಚ-ದಚ್ಚು ಮಹಾಬಿರುಕಿಗೆ ಕಾರಣ ಇದೇನಾ.?

Posted By:
Subscribe to Filmibeat Kannada

ಬಹುಶಃ ಇಂತಹ ಒಂದು ಘಟನೆ ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತೆ ಅಂತ ಯಾರೂ ಕೂಡ ಊಹಿಸಿರಲಿಲ್ಲ. ಅದರಲ್ಲೂ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ರವರಂತೆ ಕುಚ್ಚಿಕ್ಕೂ ಗೆಳಯರಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವೆ ಕಂದಕ ಮೂಡಬಹುದು ಎಂದು ಯಾರೂ ಲೆಕ್ಕಾಚಾರ ಹಾಕಿರಲಿಲ್ಲ.

ಆದರೂ ಆಗಬಾರದ್ದು ಆಗಿ ಹೋಗಿದೆ. ಆಪ್ತಮಿತ್ರರ ನಡುವೆ ಸ್ನೇಹದ ಸೇತುವೆ ಮುರಿದು ಬಿದ್ದಿದೆ. ಒಂದೇ ದೇಹ ಎರಡು ಆತ್ಮದಂತೆ ಇದ್ದ ಕಿಚ್ಚ-ದಚ್ಚು ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಇದಕ್ಕೆ ಸುದೀಪ್ ನೀಡಿದ ಸಂದರ್ಶನವೊಂದೇ ಕಾರಣನಾ.? ಅಥವಾ ಬೇರೆನಾದರೂ ಇದ್ಯಾ.? ಈ ಅನುಮಾನ ಮೂಡಲು ಕಾರಣ ನಟ ಬುಲೆಟ್ ಪ್ರಕಾಶ್ ಹಾಗೂ ನಿರ್ಮಾಪಕ ಬಾ.ಮಾ.ಹರೀಶ್ ಬಾಯಿಂದ ಬಂದ ಒಂದು ಮಾತು. ಅದೇನು ಎಂಬುದರ ಕುರಿತು ಸಂಪೂರ್ಣ ವಿವರ ಇಲ್ಲಿದೆ ಓದಿ....

ದರ್ಶನ್ ಕಿವಿಗೆ ಪುಂಗಿ ಊದೋರು ಇದ್ದಾರಾ.?

''ದರ್ಶನ್ ಕಿವಿಗೆ ಪುಂಗಿ ಉದೋರು ಇದ್ದಾರಾ.? ಅವರಿವರ ಮಾತುಗಳನ್ನ ದರ್ಶನ್ ನಂಬುತ್ತಾರಾ.?'' ಈ ಪ್ರಶ್ನೆ ಮೂಡಲು ಕಾರಣ ನಟ ಬುಲೆಟ್ ಪ್ರಕಾಶ್ 'ಪಬ್ಲಿಕ್ ಟಿವಿ'ಗೆ ಕೊಟ್ಟ ಹೇಳಿಕೆ.[ಸುದೀಪ್-ದರ್ಶನ್ ಮಧ್ಯೆ ಮಾತ್ರ ಅಲ್ಲ, 'ಮೆಜೆಸ್ಟಿಕ್' ನಿರ್ಮಾಪಕರ ನಡುವೆಯೂ ಕಿತ್ತಾಟ.!]

ನಟ ಬುಲೆಟ್ ಪ್ರಕಾಶ್ ಹೇಳಿದ್ದೇನು.?

ದರ್ಶನ್ ಮತ್ತು ಸುದೀಪ್ ನಡುವಿನ ವಿವಾದದ ಕುರಿತು 'ಪಬ್ಲಿಕ್ ಟಿವಿ' ಜೊತೆ ಮಾತನಾಡುವಾಗ ನಟ ಬುಲೆಟ್ ಪ್ರಕಾಶ್, ''ಆ ಕಡೆ ಇರುವವರೂ ಕಳ್ಳರೇ... ಈ ಕಡೆ ಇರುವವರೂ ಕಳ್ಳರೇ.. ಎಲ್ಲಾ ಅವರವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ'' ಎಂದರು.[ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

ಹುಳಿ ಹಿಂಡೋರೇ ಚೆನ್ನಾಗಿ ಕಾಣೋದು

''ಹುಳಿ ಹಿಂಡೋರೇ ಚೆನ್ನಾಗಿ ಕಾಣೋದು. ಕೊನೆಗೆ ಮೂರನೇಯವರ ತಲೆ ಮೇಲೆ ಬರುತ್ತೆ'' ಎನ್ನುತ್ತಾರೆ ಬುಲೆಟ್ ಪ್ರಕಾಶ್.[ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

ಅಕ್ಕಪಕ್ಕ ಇರುವವರೇ ಹುಳಿ ಹಿಂಡುತ್ತಿರುವುದು.!

''ಅವರ (ದರ್ಶನ್) ಅಕ್ಕಪಕ್ಕ ಸರಿಪಡಿಸಿಕೊಂಡರೆ, ಎಲ್ಲ ಸರಿ ಹೋಗುತ್ತೆ. ಖೇಲ್ ಕತಂ ನಾಟಕ್ ಬಂದ್'' - ಬುಲೆಟ್ ಪ್ರಕಾಶ್, ನಟ[ದರ್ಶನ್ ಬಗ್ಗೆ ಸುದೀಪ್ ಹೇಳಿದ್ದು ಸುಳ್ಳಾ.? ಪಿ.ಎನ್.ಸತ್ಯ ಬಾಯ್ಬಿಟ್ಟ ಸತ್ಯ ಏನು.?]

ಎಲ್ಲ ಸರಿಹೋಗಬೇಕು

''ಈ ತರಹ ಆಗಬಾರದ್ದಿತ್ತು... ಆಗಿದೆ... ಇದನ್ನ ಸರಿಪಡಿಸಿಕೊಳ್ಳಲಿ ಎಂಬುದು ನನ್ನ ಆಶಯ. ಕನ್ನಡ ಚಿತ್ರರಂಗ ಒಂದಾಗಿ ಇರಬೇಕು'' - ಬುಲೆಟ್ ಪ್ರಕಾಶ್, ನಟ

ಬುಲೆಟ್ ಪ್ರಕಾಶ್-ದರ್ಶನ್ ನಡುವೆ ಮಾತುಕತೆ ಇಲ್ಲ.?

ಇದೇ ವೇಳೆ, ''ಒಂದು ವರ್ಷದಿಂದ ನಾನು ದರ್ಶನ್ ಜೊತೆ ಮಾತನಾಡಿಲ್ಲ. ಅವರಿಗೆ ಈಗ ಮನಸ್ಸು ನೋವಾಗಿದೆ. ಇದನ್ನೆಲ್ಲ ಈಗ ಮಾತನಾಡುವ ಟೈಮ್ ಅಲ್ಲ'' ಎಂದರು ನಟ ಬುಲೆಟ್ ಪ್ರಕಾಶ್.

ಬುಲೆಟ್ ಪ್ರಕಾಶ್ - ದಿನಕರ್ ನಡುವೆ ಗಲಾಟೆ ಆಗಿದ್ದು ನೆನಪಿದ್ಯಾ.?

ವರ್ಷದ ಹಿಂದೆ ನಟ ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಸಹೋದರ ದಿನಕರ್ ತೂಗುದೀಪ ನಡುವೆ ಕಿತ್ತಾಟ ಆಗಿತ್ತು. ಅದರ ಪರಿಣಾಮ, ದರ್ಶನ್ ಗಾಗಿ ಬುಲೆಟ್ ಪ್ರಕಾಶ್ ನಿರ್ಮಾಣ ಮಾಡಬೇಕಿದ್ದ 'ಸುಲ್ತಾನ್' ಸಿನಿಮಾ ಕೂಡ ಬೇರೆಯವರ ಪಾಲಾಯ್ತು.

ನಿರ್ಮಾಪಕ ಬಾ.ಮಾ.ಹರೀಶ್ ಕೂಡ ಹೀಗೆ ಹೇಳ್ತಾರೆ.?

ಇನ್ನೂ ಅದೇ ಪಬ್ಲಿಕ್ ಟಿವಿಯಲ್ಲಿ ಕುಳಿತು ನಿರ್ಮಾಪಕ ಬಾ.ಮಾ.ಹರೀಶ್ ಕೂಡ ದರ್ಶನ್ ಅಕ್ಕಪಕ್ಕ ಇರುವವರು ಹುಳಿ ಹಿಂಡುತ್ತಾರೆ ಎಂದು ಆರೋಪ ಮಾಡಿದರು.

ಬಾ.ಮಾ.ಹರೀಶ್ ಹೇಳಿದ್ದೇನು.?

''ದರ್ಶನ್ ಅಕ್ಕ-ಪಕ್ಕ ಹುಳಿ ಹಿಂಡೋರು ಇದ್ದಾರೆ. ಇಂತವರು ಇರುವುದರಿಂದಲೇ ಎಲ್ಲವೂ ಹಾಳಾಗುತ್ತಿದೆ'' ಎಂದರು ಬಾ.ಮಾ.ಹರೀಶ್

ದರ್ಶನ್ ಅಕ್ಕಪಕ್ಕ ಇರೋರಿಂದಲೇ ಕಿಚ್ಚ-ದಚ್ಚು ಮಹಾಬಿರುಕಿಗೆ ಕಾರಣ.?

ದರ್ಶನ್ ಅಕ್ಕಪಕ್ಕ ಇರುವವರು... ದರ್ಶನ್ ಕಿವಿಗೆ ಪುಂಗಿ ಊದಿದ ಕಾರಣ... ದರ್ಶನ್ ಮತ್ತು ಸುದೀಪ್ ನಡುವೆ ಭಿನ್ನಾಭಿಪ್ರಾಯ ಮೂಡಿದ್ಯಾ.? ಈ ಪ್ರಶ್ನೆಗೆ ಉತ್ತರ ಕೊಡಬೇಕಾಗಿರುವವರು ದರ್ಶನ್ ಹಾಗೂ ಸುದೀಪ್.! ಅಸಲಿಗೆ ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಲು ಕಾರಣವೇನು ಎಂಬುದು ಎಲ್ಲರಿಗಿಂತ ಹೆಚ್ಚಾಗಿ ಅವರಿಬ್ಬರಿಗೇ ತಿಳಿದಿರಬೇಕು.

English summary
Kannada Actor Bullet Prakash and Producer Bha.Ma.Harish gives the reason for rift between Darshan and Sudeep

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada